ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗೆ ಉಚಿತ ಆಹಾರ; ಮೋದಿಗೆ ಸೋನಿಯಾ ಗಾಂಧಿಗೆ ಪತ್ರ

|
Google Oneindia Kannada News

ನವದೆಹಲಿ, ಜೂನ್ 22 : ಉಚಿತವಾಗಿ ನೀಡಲಾಗುತ್ತಿರುವ ಆಹಾರ ಧಾನ್ಯಗಳನ್ನು ಸೆಪ್ಟೆಂಬರ್ 2020ರ ತನಕ ವಿಸ್ತರಣೆ ಮಾಡಬೇಕು ಎಂದು ಎಐಸಿಸಿ ಅಧ್ಯೆಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

Recommended Video

ಗ್ರಹಣದ ದಿನ ಕಾವೇರಿ ನದಿಯಲ್ಲಿ ಮಿಂದು ತಂದೆಯನ್ನು ಸ್ಮರಿಸಿದ ಡಿಕೆಶಿ | DK ShivaKumar | Oneindia Kannada

ಸೋಮವಾರ ಸೋನಿಯಾ ಗಾಂಧಿ ಈ ಕುರಿತು ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಲಾಕ್ ಡೌನ್ ಘೋಷಣೆಯಾದಾಗ ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳಿಗೆ ಉಚಿತವಾಗಿ ಪಡಿತರ ವಿತರಣೆ ಮಾಡುವುದಾಗಿ ಘೋಷಣೆ ಮಾಡಿತು.

ಆಹಾರ ಹಣದುಬ್ಬರ: ಮೇ ತಿಂಗಳಿನಲ್ಲಿ 9.28 ಪರ್ಸೆಂಟ್‌ಗೆ ಏರಿಕೆಆಹಾರ ಹಣದುಬ್ಬರ: ಮೇ ತಿಂಗಳಿನಲ್ಲಿ 9.28 ಪರ್ಸೆಂಟ್‌ಗೆ ಏರಿಕೆ

ಏಪ್ರಿಲ್‌ನಿಂದ ಜೂನ್ ತಿಂಗಳ ತನಕ ಉಚಿತವಾಗಿ ಆಹಾರ ವಿತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಈಗ ಸೋನಿಯಾ ಗಾಂಧಿ ಅವರು ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ತನಕ ವಿಸ್ತರಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿದ 99ರ ಅಜ್ಜಿಮುಂಬೈ ವಲಸೆ ಕಾರ್ಮಿಕರಿಗೆ ಆಹಾರ ತಯಾರು ಮಾಡಿದ 99ರ ಅಜ್ಜಿ

Free Food For Poor Sonia Gandhi Urges To Extend Till September

ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಸಹ ಉಚಿತವಾಗಿ 5 ಕೆ. ಜಿ. ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿತ್ತು. ರಾಜ್ಯಗಳು ಸಹ ಉಚಿತವಾಗಿ ಆಹಾರ ಧಾನ್ಯ ನೀಡಬೇಕು ಎಂದು ಕೇಂದ್ರ ಸೂಚನೆ ನೀಡಿತ್ತು.

ನಕಲಿ ಪಡಿತರ ಚೀಟಿ ರದ್ದುಗೊಳಿಸಿ ಕಾನೂನು ಕ್ರಮಕ್ಕೆ ಸಿಎಂ ಸೂಚನೆ!ನಕಲಿ ಪಡಿತರ ಚೀಟಿ ರದ್ದುಗೊಳಿಸಿ ಕಾನೂನು ಕ್ರಮಕ್ಕೆ ಸಿಎಂ ಸೂಚನೆ!

ಹಲವು ರಾಜ್ಯಗಳು ಸಹ ಉಚಿತ ಪಡಿತರ ವಿತರಣೆಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿವೆ. ಆದ್ದರಿಂದ ಮೂರು ತಿಂಗಳ ಕಾಲ ಈ ಯೋಜನೆಯನ್ನು ವಿಸ್ತರಣೆ ಮಾಡಬೇಕು ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ವಿವರಿಸಿದ್ದಾರೆ.

ಹಲವು ಬಡವರು ಇನ್ನೂ ಪಡಿತರ ಕಾರ್ಡ್‌ ಪಡೆದಿಲ್ಲ. ಆದ್ದರಿಂದ, ತಾತ್ಕಾಲಿಕ ಕಾರ್ಡ್ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ತಮ್ಮ ಸಲಹೆ ಪರಿಗಣಿಸಲಿದೆ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ಸೋನಿಯಾ ಗಾಂಧಿ ಹೇಳಿದ್ದಾರೆ.

English summary
AICC president Sonia Gandhi written letter to PM Narendra Modi and urged the govt to extend the provision of free food grains for a period of three months up till September 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X