ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೆಲ್ ಡೀಲ್ ರದ್ದಾಗಲ್ಲ, ರಾಹುಲ್- ಹೊಲ್ಲಾಂಡೆ ಕೂಗಿಗೆ ಜೇಟ್ಲಿ ಬ್ರೇಕ್!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ವಿವಾದಿತ ರಫೆಲ್ ಒಪ್ಪಂದದ ಬಗ್ಗೆ ಭಾರತ ಹಾಗೂ ಫ್ರಾನ್ಸಿನ ವಿಪಕ್ಷ ನಾಯಕರು ಒಂದೇ ರಾಗದಲ್ಲಿ ದನಿಯೆತ್ತಿರುವುದು ಕಾಕತಾಳೀಯವಲ್ಲ, ರಫೆಲ್ ಡೀಲ್ ರದ್ದುಗೊಳ್ಳುವುದು, ಸಿಎಜಿ ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾನುವಾರದಂದು ಸ್ಪಷ್ಟಪಡಿಸಿದ್ದಾರೆ.

'ಹಾಸ್ಯಗಾರ ರಾಜಕುಮಾರ': ರಾಹುಲ್ ಗಾಂಧಿಯನ್ನು ಮೂದಲಿಸಿದ ಜೇಟ್ಲಿ'ಹಾಸ್ಯಗಾರ ರಾಜಕುಮಾರ': ರಾಹುಲ್ ಗಾಂಧಿಯನ್ನು ಮೂದಲಿಸಿದ ಜೇಟ್ಲಿ

ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಫ್ರಾನ್ಸಿನ ಮಾಜಿ ಅಧ್ಯಕ್ಷ ಹೊಲ್ಲಾಂಡೆ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವೀಟ್ ಬಗ್ಗೆ ಉಲ್ಲೇಖಿಸಿದ್ದಾರೆ.

ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು ರಫೇಲ್ ಒಪ್ಪಂದ: ವಿವಾದದ ನಡುವೆ ಮರೆಯಾದ ಸೂಕ್ಷ್ಮ ಸತ್ಯಗಳು

ಸೆಪ್ಟೆಂಬರ್ 21ರಂದು ರಫೆಲ್ ಡೀಲ್ ಬಗ್ಗೆ ಹೇಳಿಕೆ ನೀಡಿದ್ದ ಹೊಲ್ಲಾಂಡೆ, ರಿಲಯನ್ಸ್ ಜತೆ ಒಪ್ಪಂದಕ್ಕೆ ಒಳಗಾಗುವಂತೆ ಫ್ರೆಂಚ್ ಸಂಸ್ಥೆಗೆ ಭಾರತ ಸರ್ಕಾರದಿಂದ ನಿರ್ದೇಶನ ಸಿಕ್ಕಿತ್ತು ಎಂದಿದ್ದರು. ಇದಕ್ಕೂ ಮುನ್ನ ಆಗಸ್ಟ್ 30ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಮುಂಬರುವ ವಾರಗಳಲ್ಲಿ ಕೆಲವು ಬಾಂಬ್ ಗಳು ಪ್ಯಾರೀಸ್ ನಿಂದ ಸ್ಫೋಟಗೊಳ್ಳಲಿದೆ ಎಂದಿದ್ದರು.

Francois Hollandes statement, Rahuls tweet are orchestrated, says Arun Jaitley

ರಾಹುಲ್ ಗಾಂಧಿ ಅವರು ಶನಿವಾರದಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಚೌಕಿದಾರ್ ಅಲ್ಲ, ಕಳ್ಳ ಎಂದು ಜರೆದಿದ್ದರು.

ಮೋದಿ ಮೇಲೆ ರಾಹುಲ್ 'ರಫೇಲ್' ಅಟ್ಯಾಕ್! ಟ್ವೀಟ್ ಏಟು!ಮೋದಿ ಮೇಲೆ ರಾಹುಲ್ 'ರಫೇಲ್' ಅಟ್ಯಾಕ್! ಟ್ವೀಟ್ ಏಟು!

ಜೇಟ್ಲಿ ಸ್ಪಷ್ಟನೆ: 2007ರ ಒಪ್ಪಂದಕ್ಕಿಂತಲೂ 2016ರ ಒಪ್ಪಂದದಲ್ಲಿ ಒಂದು ವಿಮಾನದ ಮೇಲೆ ಶೇ.20ರಷ್ಟು ದರ ಕಡಿತಗೊಳಿಸಲಾಗಿದೆ. ಬೆಲೆ ಮತ್ತು ವೆಚ್ಚದ ವಿಚಾರವನ್ನು ಸಿಎಜಿ ನೋಡಿಕೊಳ್ಳುತ್ತಿದೆ. ಮೂಲ ಒಪ್ಪಂದಕ್ಕಿಂತಲೂ ನಮ್ಮ ಒಪ್ಪಂದ ಅಗ್ಗವೋ ಅಲ್ಲವೋ ಎಂಬುದನ್ನು ಸಿಎಜಿ ಪರಿಶೀಲಿಸಲಿದೆ. ಕಾಂಗ್ರೆಸ್ ಕೂಡ ಸಿಎಜಿ ಎದುರು ತನ್ನದೇ ವಾದ ಮಂಡಿಸಿದೆ. ಶೀಘ್ರವೇ ಸತ್ಯಾಂಶ ಹೊರಬೀಳಲಿದೆ" ಎಂದರು.

English summary
Finance minister Arun Jaitley on Sunday alleged that it was not a mere coincidence that the Opposition leaders of the two countries were speaking in one voice on the controversial Rafale issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X