• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ಆಕ್ಸಿಜನ್ ಸೇರಿ ವಿವಿಧ ವೈದ್ಯಕೀಯ ಉಪಕರಣ ಒದಗಿಸಲಿರುವ ಫ್ರಾನ್ಸ್‌

|
Google Oneindia Kannada News

ನವದೆಹಲಿ, ಏಪ್ರಿಲ್ 27: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಾಗುತ್ತಿದ್ದು, ಆಮ್ಲಜನಕ ಕೊರತೆಯಿಂದಾಗಿ ಸಾಕಷ್ಟು ರೊಗಿಗಳು ಸಾವನ್ನಪ್ಪುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಜನರೇಟರ್‌ಗಳು, ಲಿಕ್ವಿಡ್ O2, ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಾಗುತ್ತಿದೆ. ಫ್ರಾನ್ಸ್ 8 ಅತ್ಯಧಿಕ, 2 ಸಾವಿರ ಮಂದಿಗೆ ಐದು ದಿನ ನೀಡಬಹುದಾದ ಲಿಕ್ವಿಡ್ ಆಕ್ಸಿಜನ್ , 28 ವೆಂಟಿಲೇಟರ್ಸ್ ಹಾಗೂ ಐಸಿಯುಗಳ ಉಪಕರಣಗಳನ್ನು ಒದಗಿಸುತ್ತಿದೆ.

ಕೊರೊನಾ ಪರಿಸ್ಥಿತಿ ಬಗ್ಗೆ ಅಮೆರಿಕಾ ಅಧ್ಯಕ್ಷರ ಜೊತೆ ಪ್ರಧಾನಿ ಮಾತುಕೊರೊನಾ ಪರಿಸ್ಥಿತಿ ಬಗ್ಗೆ ಅಮೆರಿಕಾ ಅಧ್ಯಕ್ಷರ ಜೊತೆ ಪ್ರಧಾನಿ ಮಾತು

ಈ ಕುರಿತು ಫ್ರಾನ್ಸ್ ರಾಯಭಾರಿ ಇಮ್ಯಾನ್ಯುವಲ್ ಲೆನಿನ್ ಮಾಹಿತಿ ನೀಡಿದ್ದಾರೆ. ಕೊರೊನಾ ಎರಡನೇ ಅಲೆಯ ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲದ ಮಹಾಪೂರವೇ ಹರಿದುಬಂದಿದೆ. ಅಮೆರಿಕವು ಅಗತ್ಯ ವೈದ್ಯಕೀಯ ಸಲಕರಣೆ ಹಾಗೂ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಬ್ರಿಟನ್‌, ಇಸ್ರೇಲ್‌, ಜರ್ಮನಿ, ಫ್ರಾನ್ಸ್‌ ಸೇರಿದಂತೆ ಹಲವಾರು ದೇಶಗಳು ಭಾರತದ ಬೆನ್ನಿಗೆ ನಿಂತಿವೆ. ಬ್ರಿಟನ್‌ 140 ವೆಂಟಿಲೇಟರ್‌, 495 ಆಕ್ಸಿಜನ್‌ ಉಪಕರಣಗಳನ್ನು ರವಾನಿಸುವುದಾಗಿ ತಿಳಿಸಿದೆ. ಇಸ್ರೇಲ್‌, ಜರ್ಮನಿ, ಫ್ರಾನ್ಸ್‌ ಕೂಡ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲು ಮುಂದಾಗಿವೆ.

ಇದರ ನಡುವೆ, ಸೋಂಕಿನಿಂದ ಕಂಗೆಟ್ಟಿರುವ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನೂ ಯುಎಇ ಮಾಡಿದೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ ಖಲೀಫಾವನ್ನು ಲೇಜರ್‌ ಬೆಳಕಿನ ಮೂಲಕ ಭಾರತದ ತ್ರಿವಣ ಧ್ವಜವನ್ನು ಮೂಡಿಸಿ ಸ್ನೇಹದ ಬೆಂಬಲ ಸೂಚಿಸಿದೆ.

'ಸ್ಟ್ರಾಂಗ್‌ ಇಂಡಿಯಾ' ಹ್ಯಾಶ್‌ಟ್ಯಾಗ್‌ನಡಿ ತ್ರಿವರ್ಣ ಧ್ವಜದ ಶೃಂಗಾರದ ಕಟ್ಟಡದ ಚಿತ್ರಗಳ 23 ಸೆಕೆಂಡ್‌ನ ವಿಡಿಯೊದೊಂದಿಗೆ ಯುಎಇ ವಿದೇಶಾಂಗ ಇಲಾಖೆ ಟ್ವೀಟ್‌ ಮಾಡಿದೆ.

English summary
France has announced that it will provide India with eight high capacity oxygen generators, liquid oxygen for 2000 patients for five days, as well as 28 ventilators and equipment for ICUs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X