ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ ಘೋಷಣೆಗೆ ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ಪ್ರಸ್ತಾವ

|
Google Oneindia Kannada News

ನವದೆಹಲಿ, ಫೆಬ್ರವರಿ 20: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್ ಇ ಮೊಹ್ಮದ್ ನ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಘೋಷಣೆ ಮಾಡಬೇಕು ಎಂಬ ಪ್ರಸ್ತಾವವನ್ನು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್ ಮಂಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಫ್ರೆಂಚ್ ಮೂಲಗಳು ತಿಳಿಸಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾಗಲು ಕಾರಣವಾದ ಆತ್ಮಾಹುತಿ ಕಾರ್ ಬಾಂಬ್ ದಾಳಿಯ ಹೊಣೆಯನ್ನು ಮಸೂದ್ ಅಜರ್ ನೇತೃತ್ವದ ಜೈಶ್ ಇ ಮೊಹ್ಮದ್ ಹೊತ್ತುಕೊಂಡಿತ್ತು. ಇದು ಎರಡನೇ ಬಾರಿಗೆ ವಿಶ್ವ ಸಂಸ್ಥೆಯಲ್ಲಿ ಮಸೂದ್ ಅಜರ್ ವಿರುದ್ಧ ಫ್ರಾನ್ಸ್ ಇಂಥದ್ದೊಂದು ಪ್ರಸ್ತಾವ ಮುಂದಿಡುತ್ತಿದೆ.

ಇಮ್ರಾನ್ ಖಾನ್ ಗೆ ಗುನ್ನ; ಭಯೋತ್ಪಾದನೆ ನರಮಂಡಲ ಇಸ್ಲಾಮಾಬಾದ್ ಎಂದ ಭಾರತಇಮ್ರಾನ್ ಖಾನ್ ಗೆ ಗುನ್ನ; ಭಯೋತ್ಪಾದನೆ ನರಮಂಡಲ ಇಸ್ಲಾಮಾಬಾದ್ ಎಂದ ಭಾರತ

ಎರಡು ವರ್ಷಗಳ ಹಿಂದೆ, ಅಮೆರಿಕವು ಯುನೈಟೆಡ್ ಕಿಂಗ್ ಡಮ್ ಹಾಗೂ ಫ್ರಾನ್ಸ್ ಬೆಂಬಲದೊಂದಿಗೆ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿ 1267ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆ ಮುಖ್ಯಸ್ಥನ ನಿಷೇಧಕ್ಕೆ ಪ್ರಸ್ತಾವ ಇಟ್ಟಿತ್ತು. ಈ ಪ್ರಸ್ತಾವಕ್ಕೆ ಚೀನಾ ತಡೆಯೊಡ್ಡಿತ್ತು.

Masood Azar

"ಭಯೋತ್ಪಾದಕ ಪಟ್ಟಿಯಲ್ಲಿ ಮಸೂದ್ ಅಜರ್ ನನ್ನು ಸೇರಿಸುವ ಪ್ರಸ್ತಾವ ಇಡುವುದಕ್ಕೆ ಫ್ರಾನ್ಸ್ ಮುಂಚೂಣಿ ವಹಿಸಲಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಆಗಲಿದೆ" ಎಂದು ಫ್ರೆಂಚ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ರಾಜತಾಂತ್ರಿಕ ಸಲಹೆಗಾರ ಫಿಲಿಪ್ಪಿ ಎಟಿನಿ ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಧ್ಯೆ ಈ ಬಗ್ಗೆ ಮಂಗಳವಾರ ಬೆಳಗ್ಗೆ ಚರ್ಚೆ ನಡೆದಿದೆ.

ಪುಲ್ವಾಮಾ ದಾಳಿಯ ಬಗ್ಗೆ ಸಂತಾಪ ಸೂಚಿಸಿದ ಫ್ರೆಂಚ್ ನಾಯಕರು, ಅಜಿತ್ ದೋವಲ್ ಗೆ ಕರೆ ಮಾಡಿದ್ದಾರೆ. ಎರಡೂ ದೇಶಗಳು ಈ ಪ್ರಯತ್ನದಲ್ಲಿ ಕೈಗೊಳ್ಳಬೇಕಾದ ರಾಜತಾಂತ್ರಿಕ ಸಹಕಾರದ ಬಗ್ಗೆ ಚರ್ಚೆ ಕೂಡ ನಡೆಸಲಾಗಿದೆ.

English summary
France likely to move a proposal at the United Nations in a "couple of days" to designate Masood Azhar, chief of Pakistan-based terror group Jaish-e-Mohammed, as a global terrorist, French sources told news agency PTI on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X