ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪೈಲಟ್ ಗಳಿಗೆ ರಫೇಲ್ ವಿಮಾನ ತರಬೇತಿ ನೀಡಲಾಗಿದೆಯೆ?

|
Google Oneindia Kannada News

ನವದೆಹಲಿ, ಏಪ್ರಿಲ್ 11: ಕತಾರ್ ವಾಯು ಸೇನೆಗೆ ಯಾವುದೇ ಪಾಕಿಸ್ತಾನಿ ಪೈಲಟ್ ಗೆ ರಫೇಲ್ ಯುದ್ಧ ವಿಮಾನದ ತರಬೇತಿ ನೀಡಿಲ್ಲ ಎಂದು ಭಾರತಕ್ಕೆ ಫಾನ್ಸ್ ರಾಯಭಾರಿ ತಿಳಿಸಿದ್ದಾರೆ. ಆನ್ ಲೈನ್ ಮಾಧ್ಯಮವೊಂದರಲ್ಲಿ ವರದಿ ಆದ ಪ್ರಕಾರ, ಎರಡು ವರ್ಷದ ಹಿಂದೆ ನವೆಂಬರ್ ನಲ್ಲಿ ಕತಾರ್ ಗಾಗಿ ತರಬೇತಿ ನೀಡಿದ ಪೈಲಟ್ ಗಳಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಇದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ವರದಿಯನ್ನು ಉದಾಹರಿಸಿರುವ ರಾಯಭಾರಿ ಅಲೆಕ್ಸಾಂಡರ್ ಝಿಗ್ಲರ್, ಇದು ಸುಳ್ಳು ಸುದ್ದಿ ಅಂತ ನಾನು ಖಾತ್ರಿ ಪಡಿಸುತ್ತೇನೆ ಎಂದಿದ್ದಾರೆ. ಈ ವರದಿಯ ಮಾಹಿತಿಯನ್ನು ಮರುಪರಿಶೀಲನೆ ಮಾಡಿದ್ದೇವೆ ಎಂದು ಫ್ರೆಂಚ್ ಸರಕಾರ ಕೂಡ ಹೇಳಿದೆ.

ಆರು ತಿಂಗಳಲ್ಲಿ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆಆರು ತಿಂಗಳಲ್ಲಿ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆ

ಈ ವರ್ಷದ ಫೆಬ್ರವರಿ ಆರನೇ ತಾರೀಕಿನಂದು ಮೊದಲ ರಫೇಲ್ ಯುದ್ಧ ವಿಮಾನವನ್ನು ಡಸಾಲ್ಟ್ ನಿಂದ ಕತಾರ್ ಗೆ ನೀಡಲಾಗಿತ್ತು. ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿರುವ ಡಸಾಲ್ಟ್, ಕತಾರ್ ನಿಂದ 2015ರ ಮೇ ತಿಂಗಳಲ್ಲಿ 24 ರಫೇಲ್ ಯುದ್ಧ ವಿಮಾನಗಳಿಗಾಗಿ ಸಹಿ ಹಾಕಲಾಗಿತ್ತು.

France government denies Pakistan pilots were trained on Rafale fighter jets

ಆ ನಂತರ 2017ರ ಡಿಸೆಂಬರ್ ನಲ್ಲಿ ಹೆಚ್ಚುವರಿಯಾಗಿ 12 ಯುದ್ಧ ವಿಮಾನಗಳ ಖರೀದಿಗೆ ಮುಂದಾಯಿತು. ಮೊದಲ 24 ವಿಮಾನಗಳು ಒಟ್ಟು 6.3 ಬಿಲಿಯನ್ ಯುರೋಗೆ ಆಗಿತ್ತು. ಅಂದಹಾಗೆ ಮಧ್ಯಪೂರ್ವ ರಾಷ್ಟ್ರಗಳ ಹಲವು ರಾಷ್ಟ್ರಗಳ ಸಶಸ್ತ್ರ ಪಡೆಯ ನಿರ್ವಹಣೆಗೆ ಪಾಕಿಸ್ತಾನದ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಇದು ಹಲವು ದಶಕಗಳಿಂದ ನಡೆಯುತ್ತಾ ಬಂದಿದೆ.

ಪಾಕಿಸ್ತಾನ ಕೂಡ ತನ್ನ ಭಾಗೀದಾರ ದೇಶಗಳಿಂದ ಮಿಲಿಟರಿ ಹಾರ್ಡ್ ವೇರ್ ಪಡೆಯುತ್ತದೆ. ಅಂಥದ್ದೇ ಭಾಗೀದಾರ ದೇಶ ಜೋರ್ಡಾನ್ ನಿಂದ ಪಾಕಿಸ್ತಾನ 13 ಹೆಚ್ಚುವರಿ F 16 A/B ಯುದ್ಧ ವಿಮಾನ ಪಡೆದಿದೆ. ಅವುಗಳ ಪೈಕಿ ಕೆಲವನ್ನು ಬಳಸಿಯೇ ಫೆಬ್ರವರಿ 27ರಂದು ಭಾರತದ ಸೇನೆ ಮೇಲೆ ಪಾಕ್ ದಾಳಿ ನಡೆಸಿತ್ತು.

ಪಾಕ್ ನ F 16 ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ಬಿಡುಗಡೆಪಾಕ್ ನ F 16 ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ಸಾಕ್ಷ್ಯ ಬಿಡುಗಡೆ

ಜನವರಿ 2018ರಲ್ಲಿ ಕತಾರಿ ಎಮಿರಿ ವಾಯು ಸೇನೆ ಕಮ್ಯಾಂಡರ್ ಪಾಕಿಸ್ತಾನ ವಾಯು ಸೇನೆ ಮುಖ್ಯ ಕಚೇರಿ ಇರುವ ಇಸ್ಲಾಮಾಬಾದ್ ಗೆ ಭೇಟಿ ನೀಡಿದ್ದರು ಎಂದು ಪಾಕ್ ನ ನ್ಯೂಸ್ ಪೋರ್ಟಲ್ ವೊಂದು ವರದಿ ಮಾಡಿತ್ತು. ವೈಮಾನಿಕ ಹಾಗೂ ಸೇನಾ ತರಬೇತಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಸಹಕಾರವನ್ನು ಕತಾರ್ ಗೆ ನೀಡುವುದಾಗಿ ಪಾಕಿಸ್ತಾನ ವಾಯು ಸೇನಾ ಮುಖ್ಯಸ್ಥ ಭರವಸೆ ನೀಡಿದ್ದರು.

ಬಿಜೆಪಿ ಗೆದ್ದರೆ ಅನುಕೂಲ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಬಿಜೆಪಿ ಗೆದ್ದರೆ ಅನುಕೂಲ: ಅಚ್ಚರಿ ಮೂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ

ಆದರೆ, ಫ್ರಾನ್ಸ್ ನ ಡಸಾಲ್ಟ್ ನಿಂದ ಈ ಬಗ್ಗೆ ಅಧಿಕೃತವಾದ ಹೇಳಿಕೆಯೊಂದು ಬರಬೇಕಾಗಿದೆ. ಆನ್ ಲೈನ್ ಮಾಧ್ಯಮದ ವರದಿಗೆ ಏನೆಂದು ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಿದೆ.

English summary
The Ambassador of France to New Delhi has denied that Pakistani pilots were trained to fly the Rafale aircraft for the Qatari Air Force. This clarification comes after ainonline.com, an independent media firm which focusses on the aviation sector reported that "the first batch of pilots trained for Qatar in November 2017 were Pakistani exchange officers."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X