• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

SPG ಭದ್ರತೆ ಇರುವ ದೇಶದ ನಾಲ್ಕೇ 'ನಾಲ್ಕು' ರಾಜಕಾರಣಿಗಳು

|
   SPG ಭದ್ರತೆ ಇರುವ ದೇಶದ ನಾಲ್ಕೇ 'ನಾಲ್ಕು' ರಾಜಕಾರಣಿಗಳು ಯಾರು ? | Oneindia Kannada

   ನವದೆಹಲಿ, ಆಗಸ್ಟ್ 28: ವಿಶೇಷ ಭದ್ರತಾ ದಳದ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ರಕ್ಷಣೆಯನ್ನು ಕೇಂದ್ರ ಸರಕಾರ, ಪ್ರಸಕ್ತ ನಾಲ್ಕು ರಾಜಕಾರಣಿಗಳಿಗೆ ನೀಡುತ್ತಿದೆ. ಬೆದರಿಕೆ ಇರುವ ಬಗ್ಗೆ ಮೌಲ್ಯಮಾಪನ ಮಾಡಿ ಕೇಂದ್ರ ಗೃಹ ಸಚಿವಾಲಯ ಭದ್ರತಾ ಶ್ರೇಣಿಯ ನಿರ್ಧಾರವನ್ನು ಮಾಡುತ್ತದೆ.

   ಇದುವರೆಗೆ, ಐದು ಜನರಿಗಿದ್ದ ಈ ರಕ್ಷಣೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗಿದ್ದ ಈ ಭದ್ರತೆಯನ್ನು ಹಿಂದಕ್ಕೆ ಪಡೆದ ನಂತರ ನಾಲ್ಕಕ್ಕೆ ಇಳಿದಿದೆ. ಮನಮೋಹನ್ ಸಿಂಗ್ ಅವರಿಗೆ ಇನ್ನು ಮುಂದೆ, ಝಡ್ ಪ್ಲಸ್ ಭದ್ರತೆ ಇರಲಿದೆ. ಆದರೆ, ಗೃಹ ಸಚಿವಾಲಯದಿಂದ ಸ್ಪಷ್ಟನೆ ಬರಬೇಕಾಗಿದೆ.

   ಜಮ್ಮು ಕಾಶ್ಮೀರದಲ್ಲಿ ಇನ್ನೆಷ್ಟು ದಿನ ಬಿಗಿ ಭದ್ರತೆ , ಕೇಂದ್ರ ಹೇಳಿದ್ದೇನು?

   ಮನಮೋಹನ್ ಸಿಂಗ್ ಜೊತೆ ಅವರ ಕುಟುಂಬದವರಿಗೂ ಎಸ್ಪಿಜಿ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ, ಅವರ ಕುಟುಂಬದವರು ಸ್ವಯಂಪ್ರೇರಿತರಾಗಿ ಈ ಭದ್ರತೆಯನ್ನು ತ್ಯಜಿಸಿದ್ದರು.

   ಅಭದ್ರ ದೇಶ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ಕಷ್ಟ: ಮಾಜಿ ಕ್ರಿಕೆಟಿಗ

   ಗೃಹ ಸಚಿವಾಲಯದ ನಿಯಮಾನುಸಾರ, ಹಾಲೀ ಪ್ರಧಾನಿಗಳು, ಮಾಜಿ ಪ್ರಧಾನಿಗಳು ಮತ್ತು ಅವರ ಕುಟುಂಬಕ್ಕೆ ಎಸ್ಪಿಜಿ ಭದ್ರತೆ ನೀಡುವ ಕ್ರಮವಿತ್ತು. ಪ್ರಧಾನಿಗಳು ಮಾಜಿಯಾದ ಹತ್ತು ವರ್ಷದವರೆಗೂ ಈ ಭದ್ರತೆಯನ್ನು ಪಡೆಯುತ್ತಿದ್ದರು. ಆದರೆ, ಹಂತ ಹಂತವಾಗಿ ಇದರಲ್ಲಿ ಬದಲಾವಣೆಗಳಾಗಿ, ಸದ್ಯ, ನಾಲ್ಕು ಮುಖಂಡರು ಮಾತ್ರ ಈ ಭದ್ರತೆಯಡಿಯಲ್ಲಿದ್ದಾರೆ. ಅವರು ಯಾರು?

   ನಾಲ್ಕು ನಾಯಕರು ಈ ಭದ್ರತೆಯಡಿಯಲ್ಲಿದ್ದಾರೆ

   ನಾಲ್ಕು ನಾಯಕರು ಈ ಭದ್ರತೆಯಡಿಯಲ್ಲಿದ್ದಾರೆ

   ವಿಶೇಷ ಭದ್ರತಾ ದಳದಲ್ಲಿ ಒಟ್ಟು 3,500 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 1999, 2003, 2004 ಮತ್ತು 2019ರಲ್ಲಿ ಎಸ್ಪಿಜಿ ಭದ್ರತಾ ಕಾಯ್ದೆಯಲ್ಲಿ ಬದಲಾವಣೆಯನ್ನು ಮಾಡಲಾಗಿತ್ತು. ಕಳೆದ ವರ್ಷ ನಿಧನರಾದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೊನೆಯ ತನಕವೂ ಈ ಭದ್ರತೆಯನ್ನು ನೀಡಲಾಗಿತ್ತು. ಈಗ, ನಾಲ್ಕು ನಾಯಕರು ಈ ಭದ್ರತೆಯಡಿಯಲ್ಲಿದ್ದಾರೆ.

   ವಿಶ್ವದ ಜನಪ್ರಿಯ ನಾಯಕರಲ್ಲೊಬ್ಬರಾಗಿರುವ ನರೇಂದ್ರ ಮೋದಿ

   ವಿಶ್ವದ ಜನಪ್ರಿಯ ನಾಯಕರಲ್ಲೊಬ್ಬರಾಗಿರುವ ನರೇಂದ್ರ ಮೋದಿ

   ಹಾಲೀ ಪ್ರಧಾನಿ, ವಿಶ್ವದ ಜನಪ್ರಿಯ ನಾಯಕರಲ್ಲೊಬ್ಬರಾಗಿರುವ ನರೇಂದ್ರ ಮೋದಿ ಈ ಭದ್ರತೆಯ ರಕ್ಷಣೆಯನ್ನು ಹೊಂದಿದ್ದಾರೆ. ಹಾಲೀ ಪ್ರಧಾನಿಗಳಿಗೆ ಈ ರಕ್ಷಣಾ ಸೌಲಭ್ಯ ನೀಡುವುದು ಗೃಹ ಸಚಿವಾಲಯದ ನಿಯಮಾವಳಿ, ಜೊತೆಗೆ, ವಿವಿಧ ಉಗ್ರ ಸಂಘಟನೆಗಳ ಬೆದರಿಕೆ ಇವರಿಗೆ ಇರುವುದರಿಂದ, ಮೋದಿ, ಎಸ್ಪಿಜಿ ಭದ್ರತೆಯಲ್ಲಿದ್ದಾರೆ.

   ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ

   ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ

   ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಎಸ್ಪಿಜಿ ಭದ್ರತೆಯಲ್ಲಿರುವ ಇನ್ನೋರ್ವ ರಾಜಕೀಯ ನಾಯಕಿ. ವಿ ಪಿ ಸಿಂಗ್ ಪ್ರಧಾನಿಯಾಗಿದ್ದ ವೇಳೆ ರಾಜೀವ್ ಗಾಂಧಿಗೆ ನೀಡಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಆತ್ಮಾಹುತಿ ದಾಳಿಗೆ ಬಲಿಯಾದ ವೇಳೆ ಚಂದ್ರಶೇಖರ್ ಪ್ರಧಾನಿಯಾಗಿದ್ದರು. ಇದಾದ ನಂತರ, ಎಲ್ಲಾ, ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಈ ಭದ್ರತಾ ಸೌಲಭ್ಯವನ್ನು ನೀಡುವ ತೀರ್ಮಾನಕ್ಕೆ ಬರಲಾಗಿತ್ತು. ಇದು, ಸೋನಿಯಾ ಗಾಂಧಿಗೂ ಮುಂದುವರಿದಿದೆ.

   ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

   ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ

   ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಈ ಭದ್ರತೆಯಡಿಯಲ್ಲಿದ್ದಾರೆ. ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕ ಮತ್ತು ರಾಜೀವ್ ಗಾಂಧಿ ಕುಟುಂಬದವರಾಗಿರುವುದರಿಂದ, ಎಸ್ಪಿಜಿ ಭದ್ರತೆ ರಾಹುಲ್ ಗಾಂಧಿಗೂ ಮುಂದುವರಿದಿದೆ. ರಾಜೀವ್ ಗಾಂಧಿ ಹತ್ಯೆಯ ನಂತರ ಹತ್ತು ವರ್ಷದ ವರೆಗೆ, ಪ್ರಧಾನಿ, ಮಾಜಿ ಪ್ರಧಾನಿ, ಅವರವರ ಕುಟುಂಬದವರಿಗೆ ಎಸ್ಪಿಜಿ ಭದ್ರತೆ ನೀಡುವ ತೀರ್ಮಾನಕ್ಕೆ ಗೃಹ ಸಚಿವಾಲಯ ಬಂದಿತ್ತು.

   ರಾಜೀವ್ ಗಾಂಧಿ - ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ

   ರಾಜೀವ್ ಗಾಂಧಿ - ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ

   ರಾಜೀವ್ ಗಾಂಧಿ - ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ ಕೂಡಾ ಎಸ್ಪಿಜಿ ರಕ್ಷಣೆಯಲ್ಲಿದ್ದಾರೆ. ಪ್ರತೀ ವರ್ಷ ಗುಪ್ತಚರ ಇಲಾಖೆ ಮತ್ತು ರಾ (ರಿಸರ್ಜ್ & ಅನಾಲಸಿಸ್ ವಿಂಗ್) ನೀಡುವ ವರದಿಯ ಪ್ರಕಾರ, ಎಸ್ಪಿಜಿ, ಝಡ್ ಪ್ಲಸ್ ಮತ್ತು ಝಡ್ ಶ್ರೇಣಿಯ ಭದ್ರತೆಯನ್ನು ನವೀಕರಿಸಲಾಗುತ್ತದೆ. ಸುಮಾರು 460 ವ್ಯಕ್ತಿಗಳು ವಿವಿಧ ಶ್ರೇಣಿಯ ಭದ್ರತೆಯಡಿಯಲ್ಲಿದ್ದಾರೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Four Top Most Leaders Of India Is In SPG Security Cover. Every Year MHA reviews and decides the various security range required to be given to VVIP/VIPs based on IB and RAW input.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more