ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ರಾಜ್ಯಗಳ ಉಪ ಚುನಾವಣೆ: ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ

|
Google Oneindia Kannada News

ಕೋಲ್ಕತಾ, ಏಪ್ರಿಲ್ 16: ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಒಂದು ಲೋಕಸಭಾ ಸ್ಥಾನ ಮತ್ತು ಪಶ್ಚಿಮ ಬಂಗಾಳದ ಬ್ಯಾಲಿಗುಂಗೆ, ಬಿಹಾರದ ಬೋಚಹಾನ್, ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ಮತ್ತು ಛತ್ತೀಸ್‌ಗಢದ ಖೈರಾಘರ್ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗಳ ಮತ ಎಣಿಕೆ ಭರದಿಂದ ಸಾಗುತ್ತಿದೆ.

ನಾಲ್ಕು ರಾಜ್ಯಗಳ ಐದು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಹಿನ್ನಡೆ ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯ 6 ಸುತ್ತುಗಳ ನಂತರ, ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅವರು ತಮ್ಮ ಹತ್ತಿರದ ಬಿಜೆಪಿ ಸ್ಪರ್ಧಿ ಅಗ್ನಿಮಿತ್ರ ಪೌಲ್ ಅವರಿಗಿಂತ 62,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಇನ್ನು ಪಶ್ಚಿಮ ಬಂಗಾಳದ ಬ್ಯಾಲಿಗುಂಗೆ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಟಿಎಂಸಿ ಪಕ್ಷದ ಅಭ್ಯರ್ಥಿ ಬಾಬುಲ್ ಸುಪ್ರಿಯೊ ಎಂಟನೇ ಸುತ್ತಿನ ಮತ ಎಣಿಕೆಯ ನಂತರ 8,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

Four States By-election 2022: BJP Setback In All 5 Constituencies

ಬಿಹಾರದ ಬೋಚಹಾನ್‌ನಲ್ಲಿ ಆರ್‌ಜೆಡಿ ಅಭ್ಯರ್ಥಿ ಅಮರ್ ಪಾಸ್ವಾನ್ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ಬೇಬಿ ಕುಮಾರಿ ನಂತರದ ಸ್ಥಾನದಲ್ಲಿದ್ದು ಪೈಪೋಟಿ ನೀಡುತ್ತಿದ್ದಾರೆ.

ಬಿಹಾರದ ಮುಜಾಫರ್‌ಪುರದ ಬೋಚಹಾನ್ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆಯು ಬಾಲಿವುಡ್ ಕೇಶ ವಿನ್ಯಾಸಕ-ರಾಜಕಾರಣಿ ಮುಖೇಶ್ ಸಹಾನಿ ಅವರ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಟಿಕೆಟ್‌ನಲ್ಲಿ ಗೆದ್ದಿದ್ದ ಶಾಸಕ ಮುಸಾಫಿರ್ ಪಾಸ್ವಾನ್ ಅವರ ನಿಧನದಿಂದ ಸ್ಥಾನ ಖಾಲಿಯಾಗಿತ್ತು.

ಛತ್ತೀಸ್‌ಗಢದ ಖೈರಗಢ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಆಯೋಗದ ಅಧಿಕೃತ ಆರಂಭಿಕ ಟ್ರೆಂಡ್‌ಗಳ ಪ್ರಕಾರ, ಉಪಚುನಾವಣೆಯ ಎಣಿಕೆ ನಡೆಯುತ್ತಿದ್ದು, ಛತ್ತೀಸ್‌ಗಢದ ಖೈರಗಢ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

English summary
Bharatiya Janata Party (BJP) candidates have backed down in the by-election in five Constituencies of the four states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X