ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಹರಡುವ ಓಮಿಕ್ರಾನ್ ಉಪ-ರೂಪಾಂತರದ 4 ಪ್ರಕರಣಗಳು ಪತ್ತೆ

|
Google Oneindia Kannada News

ಮುಂಬೈ, ಜೂನ್ 14: ದಕ್ಷಿಣ ಆಫ್ರಿಕಾದಿಂದ ಓಮಿಕ್ರಾನ್ ಆಗಿ ಬಂದಿರುವ ಕೊರೊನಾ ವೈರಸ್ ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ನಿದ್ದೆಗೆಡಿಸಿದೆ. ಭಾರತದಲ್ಲೂ ಇನ್ನೂರಕ್ಕೂ ಅಧಿಕ ಜನರಿಗೆ ಆವರಿಸಿಕೊಂಡಿರುವ ವೈರಸ್, ತನ್ನ ಕಬಂಧ ಬಾಹುಗಳನ್ನು ಇನ್ನೂ ಸಹ ಚಾಚುತ್ತಲೇ ಇದೆ. ಕೊರೊನಾವೈರಸ್‌ನ ಓಮಿಕ್ರಾನ್ ಉಪ-ವೇರಿಯಂಟ್‌ಗಳಲ್ಲಿ BA.4ನ ಮೂರು ಪ್ರಕರಣಗಳು ಮತ್ತು BA.5 ಒಂದು ಪ್ರಕರಣ ಮುಂಬೈನಲ್ಲಿ ಸೋಮವಾರ ದಾಖಲಾಗಿವೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ತಿಳಿಸಿದೆ. ಈ ಎರಡು ಉಪ-ರೂಪಾಂತರಗಳು ಕೊರೊನವೈರಸ್‌ನ ಹೆಚ್ಚು-ಪ್ರಸರಣಶೀಲ ಓಮಿಕ್ರಾನ್ ಪ್ರಬೇಧಕ್ಕೆ ಸೇರಿವೆ. ಇದು ಈ ವರ್ಷದ ಆರಂಭದಲ್ಲಿ ಮೂರನೇ ತರಂಗಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಮಹಾನಗರ ಪಾಲಿಕೆಯ ಕಸ್ತೂರಬಾ ಆಸ್ಪತ್ರೆಯ ಪ್ರಯೋಗಾಲಯದ ವರದಿಯು ಮೂರು ರೋಗಿಗಳಲ್ಲಿ BA.4 ಮತ್ತು ಒಬ್ಬ ರೋಗಿಯಲ್ಲಿ BA.5 ಓಮಿಕ್ರಾನ್ ಉಪ-ರೂಪಾಂತರ ಇರುವಿಕೆಯನ್ನು ದೃಢಪಡಿಸಲಾಗಿದೆ. ನಾಲ್ವರು ರೋಗಿಗಳಲ್ಲಿ ಇಬ್ಬರು 11 ವರ್ಷ ವಯಸ್ಸಿನ ಹುಡುಗಿಯರು ಮತ್ತು 40 ರಿಂದ 60 ವರ್ಷ ವಯಸ್ಸಿನ ಇಬ್ಬರು ಪುರುಷರಿಗೆ ಸೋಂಕು ತಗುಲಿದೆ. ಈ ಎಲ್ಲಾ ರೋಗಿಗಳು ಮನೆಯ ಪ್ರತ್ಯೇಕತೆಯ ಅಡಿಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಇಲಾಖೆ ಹೇಳಿದೆ.

ದೆಹಲಿಯಲ್ಲಿ ಕೊರೊನಾ ಕೇಸ್ ಇಳಿಕೆ

ದೆಹಲಿಯಲ್ಲಿ ಕೊರೊನಾ ಕೇಸ್ ಇಳಿಕೆ

ಮುಂಬೈನಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾನುವಾರ ನಗರದಲ್ಲಿ ಸುಮಾರು 3,000 ಹೊಸ ಸೋಂಕುಗಳು ವರದಿಯಾಗಿದ್ದು, ರಾಜ್ಯದಾದ್ಯಂತ ಆತಂಕದ ಅಲೆಯನ್ನು ಹೆಚ್ಚಿಸಿದೆ. ಮೇ ಮಧ್ಯದಿಂದ ನಗರವು ಪ್ರಕರಣಗಳಲ್ಲಿ 1000% ಏರಿಕೆ ಕಂಡಿದೆ.

ಆದಾಗ್ಯೂ ಸೋಮವಾರ 1,118 ಹೊಸ COVID-19 ಪ್ರಕರಣಗಳನ್ನು ದಾಖಲಾಗಿದೆ, ಇದು ಹಿಂದಿನ ದಿನಕ್ಕಿಂತ ಸುಮಾರು ಶೇ 38 ರಷ್ಟು ಕಡಿಮೆಯಾಗಿದೆ. ಆದರೆ ಮಹಾನಗರದಲ್ಲಿ ಸೋಂಕಿನಿಂದ ಯಾವುದೇ ಹೊಸ ಸಾವು ದಾಖಲಾಗಿಲ್ಲ ಸಕ್ರಿಯ ಸಂಖ್ಯೆ 11,331 ಕ್ಕೆ ಏರಿದೆ ಎಂದು ಸ್ಥಳೀಯ ನಾಗರಿಕ ಸಂಸ್ಥೆ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಮಾಸ್ಕ್‌ ಕಡ್ಡಾಯ

ಮಹಾರಾಷ್ಟ್ರದಲ್ಲಿ ಮಾಸ್ಕ್‌ ಕಡ್ಡಾಯ

ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ, ಈ ತಿಂಗಳ ಆರಂಭದಲ್ಲಿ, ಕೋವಿಡ್ -19 ರ ನಾಲ್ಕನೇ ತರಂಗದಲ್ಲಿ ರಾಜ್ಯವು ಸಿಲುಕಬಹುದು ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಕಡ್ಡಾಯಗೊಳಿಸಿದೆ. ಬಸ್ಸುಗಳು, ರೈಲುಗಳು, ಸಿನಿಮಾ ಮಂದಿರಗಳು, ಸಭಾಂಗಣಗಳು, ಆಸ್ಪತ್ರೆಗಳು, ಕಾಲೇಜುಗಳು, ಶಾಲೆಗಳು ಮತ್ತು ಎಲ್ಲಾ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಈಗ ಕಡ್ಡಾಯವಾಗಿದೆ.

50 ಕ್ಕೂ ಹೆಚ್ಚು ಅತಿಥಿಗಳು ಕೋವಿಡ್ -19

50 ಕ್ಕೂ ಹೆಚ್ಚು ಅತಿಥಿಗಳು ಕೋವಿಡ್ -19


ಒಂದು ವಾರದ ಹಿಂದೆ, ಮುಂಬೈನಲ್ಲಿ ನೆಲೆಸಿರುವ ಅನೇಕ ಬಾಲಿವುಡ್ ತಾರೆಯರು ಸಹ ಕೋವಿಡ್ ಪಾಸಿಟಿವ್ ವರದಿ ಪಡೆದುಕೊಂಡಿದ್ದರು. ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಸಂಭ್ರಮದ ಸೂಪರ್-ಸ್ಪ್ರೆಡರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಟಾರ್‌ಗಳಿಗೆ ಕೊರೊನಾ ತಗುಲಿತ್ತು. 50 ಕ್ಕೂ ಹೆಚ್ಚು ಅತಿಥಿಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ.

Recommended Video

IPL ನ ಪ್ರತಿ ಪಂದ್ಯ 111 ಕೋಟಿಗೆ ಮಾರಾಟ | *Cricket | OneIndia Kannada
ಪರಿಸ್ಥಿತಿ ಅವಲೋಕನ

ಪರಿಸ್ಥಿತಿ ಅವಲೋಕನ

ಸೂಕ್ತ ಕ್ರಮಗಳೊಂದಿಗೆ ಜೂನ್ 15 ರಂದು ಮಹಾರಾಷ್ಟ್ರದಾದ್ಯಂತ ಶಾಲೆಗಳು ಮತ್ತೆ ತೆರೆಯಲ್ಪಡುತ್ತವೆ. ಆದರೆ ಪರಿಸ್ಥಿತಿಯನ್ನು ಕೂಲಂಕಷವಾಗಿ ಮೇಲ್ವಿಚಾರಣೆ ಮಾಡಿದ ನಂತರ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ವರ್ಷಾ ಗಾಯಕ್ವಾಡ್ ಹೇಳಿದ್ದಾರೆ. ಮಕ್ಕಳ ಸುರಕ್ಷತೆಯ ಬಗ್ಗೆ ಯೋಚಿಸಿ, ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿಗಳು ಹಾಗೂ ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,594 ಹೊಸ ಕೊರೊನವೈರಸ್ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಜೂನ್ 14) ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,035 ಸೋಂಕಿತರು ಚೇತರಿಸಿಕೊಂಡು ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು ಚೇತರಿಕೆಯ ದರ ಸುಮಾರು 98.67 ರಷ್ಟಿದೆ. ಒಟ್ಟು ಚೇತರಿಕೆಯ 26,61,370 ಕ್ಕೆ ತಲುಪಿದೆ. ಭಾರತದಲ್ಲಿ COVID-19 ನ ಒಟ್ಟು ಸಕ್ರಿಯ ಪ್ರಕರಣಗಳು 50,548 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಇಂದು ತೋರಿಸಿವೆ.

English summary
Mumbai on Monday detected three cases of BA.4 and one of BA.5 Omicron sub-variants of coronavirus, informed the Maharashtra health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X