ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್?!

|
Google Oneindia Kannada News

Recommended Video

ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಿ 18 ಲಕ್ಷ ರೂ.ಬಿಲ್ಲು ಕೇಳಿತೇ ಫೋರ್ಟೀಸ್? | Oneindia Kannada

ಗುರ್ಗಾಂವ್, ನವೆಂಬರ್ 21: ಡೆಂಗ್ಯೂ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದಕ್ಕಾಗಿ ಗುರ್ಗಾಂವ್ ನಲ್ಲಿರುವ ಫೋರ್ಟೀಸ್ ಆಸ್ಪತ್ರೆಯೊಂದು ರೋಗಿಯ ಕಡೆಯಿಂದ 15 ಲಕ್ಷ ರೂ. ಬಿಲ್ಲು ಪಡೆದಿದೆ ಎಂಬ ಆಘಾತಕಾರಿ ವಿಷಯವನ್ನು ರೋಗಿಯ ಕುಟುಂಬದ ಸ್ನೇಹಿತರೊಬ್ಬರು ಹೊರಹಾಕಿದ್ದಾರೆ.

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೆ 'ಡಿ' ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ವೈದ್ಯರ ನಿರ್ಲಕ್ಷ್ಯ: ಮೂರು ತಿಂಗಳ ಮಗು ಸಾವುಬೆಂಗಳೂರು ವೈದ್ಯರ ನಿರ್ಲಕ್ಷ್ಯ: ಮೂರು ತಿಂಗಳ ಮಗು ಸಾವು

ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಆದ್ಯ ಸಿಂಗ್ ಎಂಬ 7 ವರ್ಷದ ಮಗುವನ್ನು ಆಗಸ್ಟ್ 31 ರಂದು ಇಲ್ಲಿನ ಫೋರ್ಟೀಸ್ ಮೆಮೋರಿಯಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ದ್ವಾರಕಾ ಮೂಲದ ಐಟಿ ಉದ್ಯೋಗಿ ಜಯಂತ್ ಸಿಂಗ್ ಅವರ ಪುತ್ರಿ ಆದ್ಯ ಅವರನ್ನು 15 ದಿನಗಳ ಕಾಲ ವೆಂಟಿಲೇಟರ್ ಆಧಾರದ ಮೇಲೆ ಐಸಿಯುನಲ್ಲೇ ಇಟ್ಟುಕೊಳ್ಳಲಾಗಿತ್ತು. ಆದರೆ 15 ದಿನವಾದರೂ ಆಕೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗದೆ, ಆಕೆ ಆಸ್ಪತ್ರೆಯಲ್ಲಿಯೇ ಅಸುನೀಗಿದ್ದಾಳೆ. ಬಹುಶಃ ಆಕೆ ಮೊದಲೇ ಅಸುನೀಗಿದ್ದರೂ, ಹಣಕ್ಕಾಗಿ ಆಕೆಯ ಸಾವಿನ ಸುದ್ದಿಯನ್ನು ಆಸ್ಪತ್ರೆ ಮುಚ್ಚಿಟ್ಟಿರಬಹುದು ಎಂದು ಬಾಲಕಿಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ವೈದ್ಯರ ಮುಷ್ಕರದಿಂದಾಗಿ ಚಿಕಿತ್ಸೆ ಸಿಗದೆ ಜಗದೀಶ್ ಶೆಟ್ಟರ್ ಆಪ್ತ ಸಾವು ವೈದ್ಯರ ಮುಷ್ಕರದಿಂದಾಗಿ ಚಿಕಿತ್ಸೆ ಸಿಗದೆ ಜಗದೀಶ್ ಶೆಟ್ಟರ್ ಆಪ್ತ ಸಾವು

ಪಾಪ, ಮಗುವಾದರೂ ಬದುಕಿದ್ದರೆ ಅಷ್ಟು ಬಿಲ್ಲು ನೀಡಿದರೂ ತಂದೆ-ತಾಯಿ ಹೇಗೋ ಸಮಾಧಾನ ಪಟ್ಟುಕೊಳ್ಳುತ್ತಿದ್ದರೇನೋ, ಆದರೆ ಮುದ್ದು ಮಗಳೂ ಅಸುನೀಗಿದ್ದಾಳೆ! ವೈದ್ಯರ ನೂರಾರು ಪ್ರಯೋಗಗಳಿಗೆ ಮೈಯೊಡ್ಡಿದ ಆ ಪುಟ್ಟ ದೇಹ, ನಲುಗಿ-ನಲುಗಿ ಉಸಿರು ಮರೆತಿದೆ!

ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?

ಇತ್ತ ಕರ್ನಾಟಕದಲ್ಲಿ ವೈದ್ಯರ ಕೈಕಟ್ಟಿಹಾಕುವಂಥ ಕಾಯ್ದೆಯನ್ನು ಜಾರಿಗೆ ತರಬಾರದೆಂದು ವೈದ್ಯರು ಮುಷ್ಕರ ನಡೆಸಿದ ಸುದ್ದಿ ಮಾಸಿಲ್ಲ. ಆದರೆ ಅದಾಗಲೇ ಅಮಾಯಕ ರೋಗಿಗಳ ಮೇಲೆ ವೈದ್ಯರು ನಡೆಸುತ್ತಿರುವ ದೌರ್ಜನ್ಯ ಗುರ್ಗಾಂವ್ ನಲ್ಲಿ ಬೆಳಕಿಗೆ ಬಂದಿದ್ದು, 'ವೈದ್ಯ' ಪವಿತ್ರ ವೃತ್ತಿಯನ್ನು ಪರಾಮರ್ಶಿಸುವಂತೆ ಮಾಡಿದೆ.

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

7 ವರ್ಷದ ಮಗುವಿಗೆ ದಿನಕ್ಕೆ 40 ಚುಚ್ಚುಮದ್ದು!

ಮಗಳು ಅಸುನೀಗಿದ ನಂತರ ಮಗಳ ಸಾವಿನ ದುಃಖದಲ್ಲಿದ್ದ ಕುಟುಂಬಕ್ಕೆ ಆಸ್ಪತ್ರೆಯ ಬಿಲ್ಲು ನೋಡಿ ಜಂಘಾಬಲವೇ ಉಡುಗಿದಂತಾಗಿದೆ. ಕೇವಲ 15 ದಿನದ ಚಿಕಿತ್ಸೆಗಾಗಿ ಆಸ್ಪತ್ರೆ 18 ಲಕ್ಷ ರೂ. ಬಿಲ್ಲು ಪಾವತಿಸುವಂತೆ ಹೇಳಿದೆ! ಒಟ್ಟು 2,700 ಗ್ಲೌಸ್(ಕೈಚೀಲ), 660 ಸಿರೀಂಜ್ ಗಳೂ ಈ ಬಿಲ್ಲಿನಲ್ಲಿ ಸೇರಿವೆ. 'ಡಿ' ಎಂಬುವವರು ಮಾಡಿರುವ ಟ್ವೀಟ್ ಪ್ರಕಾರ ಈ ಮಗುವಿಗೆ ದಿನವೊಂದಕ್ಕೆ 40 ಕ್ಕೂ ಹೆಚ್ಚು ಚುಚ್ಚುಮದ್ದು ನೀಡಲಾಗುತ್ತಿತ್ತು!

15 ಲಕ್ಷ ರೂ. ಚಿಕಿತ್ಸೆಯ ಹೊಸ ಆಫರ್!

ಸೆಪ್ಟೆಂಬರ್ 14 ರಂದು ಪಾಲಕರನ್ನು ಕರೆದ ವೈದ್ಯರು, ' ಮಗುವಿನ ಮೆದುಳು ಶೇ.70 ರಿಂದ 80 ರಷ್ಟು ನಿಷ್ಕ್ರಿಯವಾಗಿದೆ. ಆಕೆ ಮತ್ತೆ ಸುಧಾರಿಸಿಕೊಳ್ಳುವುದು ಕಷ್ಟ. ಅದಕ್ಕಾಗಿ ನಾವು ಪ್ಲಾಸ್ಮಾ ಚಿಕಿತ್ಸೆ ನೀಡಬಹುದು. ಆದರೆ ಈ ಚಿಕಿತ್ಸೆಗೆ ಕನಿಷ್ಠ 15 ಲಕ್ಷ ರೂ. ವೆಚ್ಚವಾಗಬಹುದು' ಎಂದಿದ್ದಾರೆ! ಇದರಿಂದ ಅನುಮಾನಗೊಂಡ ಪಾಲಕರು ಮಗುವನ್ನು ತಕ್ಷಣವೇ ಬೇರೆ ಆಸ್ಪತ್ರೆಗೆ ಸೇರಿಸುವ ಚಿಂತೆ ನಡೆಸಿದ್ದಾರೆ. ಬೇರೆ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆಯೇ ಮಗು ಈಗಾಗಲೇ ಸತ್ತು ಹೋಗಿದೆ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ!

ಹಣಕ್ಕಾಗಿ ಶವಕ್ಕೆ ಚಿಕಿತ್ಸೆ ನೀಡುತ್ತಿದ್ದರಾ?

ಬಹುಶಃ ಮಗು ಬಹಳ ದಿನ ಮೊದಲೇ ಸತ್ತಿದ್ದರೂ, ದುಡ್ಡು ಕೀಳುವುದಕ್ಕಾಗಿ ವೈದ್ಯರು ನಮ್ಮ ಬಳಿ ಸುಳ್ಳು ಹೇಳಿದ್ದಾರೆ ಎಂದು ಬಾಲಕಿಯ ತಂದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಲು ಸಾಲು ಟ್ವೀಟ್ ಮಾಡಿರುವ 'ಡಿ' ಎನ್ನುವವರು, ಆಸ್ಪತ್ರೆಯಲ್ಲಿ ನೀಡಿದ ಎಲ್ಲಾ ದಾಖಲೆಗಳ ಪ್ರತಿಯನ್ನೂ ಒದಗಿಸಿದ್ದಾರೆ.

ಜೆ.ಪಿ.ನಡ್ಡಾ ಪ್ರತಿಕ್ರಿಯೆ

'ಡಿ' ಟ್ವೀಟ್ ಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ನಮಗೆ ಅಗತ್ಯ ದಾಖಲೆಗಳನ್ನು, ವಿವರಗಳನ್ನು ನೀಡಿದಲ್ಲಿ ಈ ಕುರಿತು ತನಿಖೆ ನಡೆಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

English summary
A Fortis hospital in Gurugram(Gurgaon) allegedly charged a 7 year old girl’s parents more than Rs 18 lakh for 15 days of treatment, and she did not even survive at the end of it! She was suffering from Dengue disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X