ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಪರಮಾಪ್ತ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ

|
Google Oneindia Kannada News

ನವದೆಹಲಿ, ಜೂನ್ 9: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಿತಿನ್ ಪ್ರಸಾದ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ. ಇಂದು ಮಧ್ಯಾಹ್ನ ಪಕ್ಷದ ಹಿರಿಯ ಮುಖಂಡರಾದ ಅಮಿತ್ ಶಾ, ಪಿಯೂಶ್ ಗೊಯೆಲ್ ಸಮ್ಮುಖದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆಯಲಿದ್ದಾರೆ. ಈ ಮೂಲಕ ಉತ್ತರ ಪ್ರದೇಶ ಚುನಾವಣೆಗೆ ಆಪರೇಷನ್ ಕಮಲ ಈಗಲೇ ಶುರುವಾಗಿದೆ ಎನ್ನಬಹುದು.

47 ವರ್ಷ ವಯಸ್ಸಿನ ಜಿತಿನ್ ಪ್ರಸಾದ ಅವರು ಬಿಜೆಪಿ ಸೇರುವ ಬಗ್ಗೆ ಕಳೆದ ಎರಡು ವರ್ಷಗಳಿಂದ ಸುದ್ದಿ ಹಬ್ಬಿತ್ತು. ಪುಲ್ವಾಮಾದಲ್ಲಿ ಉಗ್ರರ ದಾಳಿ ಬಗ್ಗೆ ಕಾಂಗ್ರೆಸ್ ತೆಗೆದುಕೊಂಡ ನಿಲುವನ್ನು ಜಿತಿನ್ ಪ್ರಸಾದ ಹಾಗೂ ಟಾಮ್ ವಡಕ್ಕನ್ ಖಂಡಿಸಿದ್ದರು. ತೀವ್ರ ಬೇಸರ ವ್ಯಕ್ತಪಡಿಸಿದ್ದ ಟಾಮ್ ವಡಕ್ಕನ್ ಅವರು ನಂತರ ಬಿಜೆಪಿ ಸೇರ್ಪಡೆಗೊಂಡಿದ್ದರು. ಆದರೆ, ಜಿತಿನ್ ಪ್ರಸಾದ ಅವರು ಅಂದು ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಉತ್ತರಿಸುವುದಿಲ್ಲ, ಇಂಥ ಪ್ರಶ್ನೆಗಳನ್ನು ಕೇಳಬೇಡಿ ಎಂದು ಪತ್ರಕರ್ತರಿಗೆ ಖಡಕ್ಕಾಗಿ ಹೇಳಿದ್ದರು. ಆದರೆ, ಇಂದು ಕೇಸರಿ ಪಡೆ ಸೇರಿದ್ದಾರೆ.

ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಸೋನಿಯಾ ಆಪ್ತ ವಲಯದ ಟಾಮ್ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಸೋನಿಯಾ ಆಪ್ತ ವಲಯದ ಟಾಮ್

ಜಿತಿನ್ ಬಗ್ಗೆ
ಉತ್ತರಪ್ರದೇಶದ ಕಾಂಗ್ರೆಸ್ ಪಕ್ಷದ್ ಬ್ರಾಹ್ಮಣ ಮುಖಂಡರ ಪೈಕಿ ಜಿತಿನ್ ಕೂಡಾ ಒಬ್ಬರಾಗಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಜಿತೇಂದ್ರ ಪ್ರಸಾದ ಅವರ ಪುತ್ರ. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಜಿತೇಂದ್ರ ಅವರು ರಾಜಕೀಯ ಸಲಹೆಗಾರರಾಗಿದ್ದರು. ಉತ್ತರಪ್ರದೇಶದ ಮುಂಬರುವ ಚುನಾವಣೆಯಲ್ಲಿ ಜಿತಿನ್ ಅವರು ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಬಿಜೆಪಿ ಸೇರ್ಪಡೆಯಿಂದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಭಾರಿ ಹಿನ್ನಡೆ ಉಂಟಾಗಲಿದೆ.

Former Union minister Jitin Prasada joins BJP

ಜಿತಿನ್ 2004 ಮತ್ತು 2009 ರ ಲೋಕಸಭಾ ಚುನಾವಣೆಗಳಲ್ಲಿ ಕ್ರಮವಾಗಿ ಶಹಝಾನ್ ಪುರ ಮತ್ತು ಧೌರಾಹ್ರಾ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿದು ಗೆದ್ದಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ 1 ಸರ್ಕಾರ ಹಾಗೂ ಯುಪಿಎ 2ರಲ್ಲೂ ಸಚಿವರಾಗಿದ್ದರು. ಪೆಟ್ರೋಲಿಯಂ ಮತ್ತು ಜೈವಿಕ ಇಂಧನ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಮಾನವ ಸಂಪನ್ಮೂಲ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

2000 ನೇ ಇಸವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಸೋನಿಯಾ ಗಾಂಧಿ ಅವರ ವಿರುದ್ಧ ಸೆಣೆಸಿ ಸೋತಿದ್ದರು. ಆದರೂ ರಾಹುಲ್ ಗಾಂಧಿ ಆಪ್ತ ವಲಯದ ಮುಖಂಡ ಪೈಕಿ ಜಿತಿನ್ ಪ್ರಸಾದ ಕೂಡಾ ಒಬ್ಬರಾಗಿದ್ದರು.

English summary
Former Union minister Jitin Prasada joins BJP ahead of Uttar Prasad Assembly election 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X