ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಪಿಎ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು

|
Google Oneindia Kannada News

ನವದೆಹಲಿ, ಜು.26: ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಶನಿವಾರ ಯುಎಪಿಎ ಕಾನೂನು ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ''ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ದೇಶದ್ರೋಹದ ಆರೋಪ ಹೊತ್ತು ತಿಂಗಳುಗಟ್ಟಲೆ ಜೈಲಿನಲ್ಲಿ ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರ ಕುಟುಂಬಗಳಿಗೆ ಆಗುತ್ತಿರುವ ಮಾನಸಿಕ ಆಘಾತವನ್ನು ನ್ಯಾಯಾಲಯಗಳು, ಸಮಾಜ ಮತ್ತು ರಾಜ್ಯ ಗಮನಕ್ಕೆ ತೆಗೆದುಕೊಳ್ಳಬೇಕು,'' ಎಂದು ಹೇಳಿದ್ದಾರೆ.

ಯುಎಪಿಎಯ ದುಷ್ಪರಿಣಾಮಗಳು ಮತ್ತು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರಾದ್ವಜ್ ಮಧ್ಯಸ್ಥಿಕೆಯ ದೇಶದ್ರೋಹದ ಕಾನೂನು ಕುರಿತು ವರ್ಚುವಲ್‌ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ.ಲೋಕೂರ್, "ನಾವು ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ" ಎಂದು ಕೂಡಾ ಆತಂಕ ವ್ಯಕ್ತಪಡಿಸಿದರು.

 'ಭಿನ್ನಾಭಿಪ್ರಾಯ ಹತ್ತಿಕ್ಕಲು ಭಯೋತ್ಪಾದನಾ ವಿರೋಧಿ ಕಾನೂನು ದುರುಪಯೋಗ ಪಡಿಸಿಕೊಳ್ಳಬಾರದು' 'ಭಿನ್ನಾಭಿಪ್ರಾಯ ಹತ್ತಿಕ್ಕಲು ಭಯೋತ್ಪಾದನಾ ವಿರೋಧಿ ಕಾನೂನು ದುರುಪಯೋಗ ಪಡಿಸಿಕೊಳ್ಳಬಾರದು'

"ತಮ್ಮ ಪ್ರೀತಿಪಾತ್ರರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ದೇಶದ್ರೋಹಿಗಳೆಂದು ಬ್ರಾಂಡ್‌ ಮಾಡಲಾಗಿರುವ ಹಿನ್ನೆಲೆ ಜೈಲಿನಲ್ಲಿರುವ ಈ ಜನರ ಕುಟುಂಬಗಳು ಮತ್ತು ಸ್ನೇಹಿತರು ಕೂಡಾ ತೊಂದರೆಗೆ ಒಳಗಾಗಬೇಕಾದರೆ ಯಾವ ರೀತಿಯ ಸಮಾಜವನ್ನು ನಿರ್ಮಿಸಲಾಗುತ್ತಿದೆ," ಎಂದು ಪ್ರಶ್ನಿಸಿದರು.

 ಜೈಲುಗಳಲ್ಲಿ ''ಮೃದು ಚಿತ್ರಹಿಂಸೆ''

ಜೈಲುಗಳಲ್ಲಿ ''ಮೃದು ಚಿತ್ರಹಿಂಸೆ''

"ಅವನ ಕುಟುಂಬದ ಮೇಲೆ ಭಾವನಾತ್ಮಕ, ಮಾನಸಿಕ ಪ್ರಭಾವವನ್ನು ನೋಡಿ. ಅವನ ಅಥವಾ ಅವಳ ಮಕ್ಕಳು, ಶಾಲೆಗೆ ಹೋಗುತ್ತಾರೆ. ಅಲ್ಲಿ ಸಹಪಾಠಿಗಳು ಆ ಮಗಿವ ಬಳಿ ನಿಮ್ಮ ತಂದೆ 'ಭಯೋತ್ಪಾದಕ' ಎಂದು ಹೇಳುತ್ತಾರೆ. ಮಾಡದ ತಪ್ಪಿಗಾಗಿ ಈ ಜನರು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ನಾವು ಮಾನಸಿಕ ಅಂಶದ ಬಗ್ಗೆ ಗಮನ ಹರಿಸುತ್ತಿಲ್ಲ," ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದರು. ನಾವು ಈ ಸಂತ್ರಸ್ತರಿಗೆ ಪರಿಹಾರ ನೀಡಿದರೆ ಸಾಲದು ಎಂದು ಕೂಡಾ ಹೇಳಿದ ನ್ಯಾಯಮೂರ್ತಿ ಲೋಕೂರ್, ಜೈಲು ಕೈದಿಗಳ ಮೇಲೆ ಜೈಲಿನಲ್ಲಿ ಜನಸಂದಣಿ ಮತ್ತು ನಾಲ್ಕು ಗೋಡೆಯ ಒಳಗೆ ಕೆಟ್ಟ ನೈರ್ಮಲ್ಯದ ನೀಡಲಾಗುವ "ಮೃದು ಚಿತ್ರಹಿಂಸೆ" ಕುರಿತು ಮಾತನಾಡಿದರು.

 ಪೊಲೀಸ್‌ ರಾಜ್ಯದಲ್ಲಿ ವಾಸವಾದಂತೆ ಭಾಸ!

ಪೊಲೀಸ್‌ ರಾಜ್ಯದಲ್ಲಿ ವಾಸವಾದಂತೆ ಭಾಸ!

ಇನ್ನು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ದೀಪಕ್ ಗುಪ್ತಾ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ 84 ವರ್ಷದ ಫಾದರ್ ಸ್ಟಾನ್ ಸ್ವಾಮಿಯ ಸಾವಿನ ಬಗ್ಗೆ ಉಲ್ಲೇಖಿಸಿದ್ದಾರೆ. "ನಾವು ಮನುಷ್ಯರಾಗಿದ್ದೇವೆ" ಎಂದು ನ್ಯಾಯಮೂರ್ತಿ ಗುಪ್ತಾ ಹೇಳಿದ್ದಾರೆ. ನಿವೃತ್ತ ನ್ಯಾಯಾಧೀಶರು ಮಣಿಪುರದ ಕಾರ್ಯಕರ್ತರ ಪ್ರಕರಣದ ಕುರಿತು ಮಾತನಾಡುತ್ತಾ, ಹಸುವಿನ ಮೂತ್ರವು ಕೋವಿಡ್‌ಗೆ ಪರಿಹಾರವಲ್ಲ ಎಂದು ಹೇಳಿದ ಕಾರಣಕ್ಕೆ ದೇಶದ್ರೋಹದ ಪ್ರಕರಣದ ಮೇಲೆ ಜೈಲಿಗೆ ಹಾಕಲಾಗಿದೆ. ನಾವು "ಪೊಲೀಸ್ ರಾಜ್ಯ" ದಲ್ಲಿ ವಾಸಿಸುತ್ತಿದ್ದೇವೆಯೇ?. ನಮಗೆ ಹಾಗೆಯೇ ಭಾಸವಾಗುತ್ತಿದೆ ಎಂದು ಟೀಕಿಸಿದ್ದಾರೆ.

'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ'5 ಗಂಟೆಯೊಳಗೆ ಬಿಡುಗಡೆ ಮಾಡಿ': ಮಣಿಪುರ ಹೋರಾಟಗಾರನ ಬಂಧನದ ಬಗ್ಗೆ ಸುಪ್ರೀಂ ಆದೇಶ

 ''ಈ ಕಾನೂನು ತಿದ್ದುಪಡಿ ಅತ್ಯಗತ್ಯ''

''ಈ ಕಾನೂನು ತಿದ್ದುಪಡಿ ಅತ್ಯಗತ್ಯ''

ನ್ಯಾಯಮೂರ್ತಿ ಗುಪ್ತಾ, "ನ್ಯಾಯಾಲಯಗಳು ಸಂವಿಧಾನದ 142 ನೇ ಪರಿಚ್ಛೇಧದ ಅಡಿಯಲ್ಲಿ ಮಧ್ಯಪ್ರವೇಶಿಸಬೇಕು. ಯುಎಪಿಎ ಅನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ಸಾಬೀತಾದ ಹಿನ್ನೆಲೆ ಯುಎಪಿಎ ಬಳಕೆಯ ಬಗ್ಗೆ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು," ಎಂದು ಹೇಳಿದ್ದಾರೆ. "ಯುಎಪಿಎ ಈ ರೂಪದಲ್ಲಿ ಉಳಿಯಬಾರದು. ಭಯೋತ್ಪಾದನೆ ಆತಂಕಕಾರಿ ಅಂಶವಾಗಿದ್ದರೂ, ಭಯೋತ್ಪಾದನೆ ಕುರಿತ ಕಾನೂನು ದುರುಪಯೋಗ ಆಗಬಾರದು. ಭಯೋತ್ಪಾದನೆ ಒಂದು ಆತಂಕಕಾರಿ ವಿಷಯವಾಗಿದೆ. ಮುಂಬೈ ದಾಳಿಯಂತೆ ಏನಾದರೂ ಸಂಭವಿಸುತ್ತದೆ, ಇದು ಚಿಂತಾಜನಕವಾಗಿದೆ. ದುರುಪಯೋಗದ ವ್ಯಾಪ್ತಿಯಿಲ್ಲದ ರೀತಿಯಲ್ಲಿ ಕಾನೂನನ್ನು ರೂಪಿಸಬೇಕು ಮತ್ತು ವ್ಯಾಖ್ಯಾನಿಸಬೇಕು," ಎಂದು ಅಭಿಪ್ರಾಯಿಸಿದ್ದಾರೆ.

 ನಿಜವಾದ ಭಯೋತ್ಪಾದನೆ ಪ್ರಕರಣಗಳಿಂದ ಗಮನ ಬದಲಾಯಿಸುವ ಸರ್ಕಾರ

ನಿಜವಾದ ಭಯೋತ್ಪಾದನೆ ಪ್ರಕರಣಗಳಿಂದ ಗಮನ ಬದಲಾಯಿಸುವ ಸರ್ಕಾರ

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಅಫ್ತಾಬ್ ಆಲಂ, "ಭಿನ್ನಾಭಿಪ್ರಾಯವನ್ನು ಕೇಂದ್ರೀಕರಿಸುವ ಮೂಲಕ, ನಿಜವಾದ 3% ಭಯೋತ್ಪಾದನೆ ಪ್ರಕರಣಗಳಿಂದ ಸರ್ಕಾರವು ತನ್ನ ಗಮನವನ್ನು ಬದಲಾಯಿಸುವ ಅಪಾಯವನ್ನು ಎದುರಿಸುತ್ತಿದೆ. ಹಲವಾರು ನಿರಪರಾಧಿ ಜೀವಗಳು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾದ ಜನರನ್ನು ಜೈಲಿಗೆ ಹಾಕಲಾಗುತ್ತಿದೆ," ಎಂದು ಬೇಸರ ವ್ಯಕ್ತಪಡಿಸಿದರು.

"ನಾವು ಯಾವ ರೀತಿಯ ರಾಜ್ಯವನ್ನು ಬಯಸುತ್ತೇವೆ ಎಂದು ಯೋಚಿಸುವ ಸಮಯ ಇದು. ಯುಎಪಿಎ ಅಡಿಯಲ್ಲಿ ಜನರನ್ನು ಜೈಲಿನಲ್ಲಿ ಇರಿಸುವ ಪ್ರಬಲ ರಾಜ್ಯವೇ ಇದು. ಶಾಂತಿಯುತ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳನ್ನು ಒಟ್ಟಿಗೆ ಒಟ್ಟುಗೂಡಿಸಿ ಯುಎಪಿಎ ಅಡಿಯಲ್ಲಿ ದಾಖಲಿಸಲಾಗಿದೆ. ಭಿನ್ನಾಭಿಪ್ರಾಯದ ಹಕ್ಕು ಮತ್ತು ವಾಕ್‌ ಸ್ವಾತಂತ್ಯ್ರದ ಹಾಗೂ ಹಿಂಸಾತ್ಮಕ ಕೃತ್ಯಗಳನ್ನು ಎಸಗುವ ಅಪರಾಧಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ," ಎಂದು ಮಾಜಿ ನ್ಯಾಯಮೂರ್ತಿ ಹೇಳಿದರು.

 ಮಾನವ ಹಕ್ಕುಗಳ ರಕ್ಷಣೆ: ಭಯೋತ್ಪಾದನೆ ಸಾವು

ಮಾನವ ಹಕ್ಕುಗಳ ರಕ್ಷಣೆ: ಭಯೋತ್ಪಾದನೆ ಸಾವು

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಗೋಪಾಲಗೌಡ, ''ಭಯೋತ್ಪಾದನೆ ಮತ್ತು ಮಾನವ ಹಕ್ಕುಗಳ ನಡುವಿನ ಯುದ್ಧವನ್ನು ದೇಶದಲ್ಲಿ ಹೇಗೆ ನಡೆದಿದೆ'' ಎಂದು ಉಲ್ಲೇಖಿಸಿದ್ದಾರೆ. ''ಮಾನವ ಹಕ್ಕುಗಳನ್ನು ರಕ್ಷಿಸಿದರೆ ಭಯೋತ್ಪಾದನೆ ನೈಸರ್ಗಿಕವಾಗಿ ಸಾವನ್ನಪ್ಪುತ್ತದೆ'' ಎಂದು ಹೇಳಿದ್ದಾರೆ. ಯುಎಪಿಎ ಒದಗಿಸುವ ನ್ಯಾಯಾಂಗ ಪರಿಶೀಲನೆಯ ಸೀಮಿತ ಅಧಿಕಾರದ ಬಗ್ಗೆ ಗಮನಿಸಿದ ನ್ಯಾಯಮೂರ್ತಿ ಗೌಡ, ''ಜಾಮೀನು ನೀಡುವ ಸಾಂವಿಧಾನಿಕ ನ್ಯಾಯಾಲಯಗಳ ಅಧಿಕಾರವನ್ನು ಕಸಿದುಕೊಳ್ಳುವ ಕಾನೂನು ಸ್ವತಃ ಅಸಂವಿಧಾನಿಕವಾಗಿದೆ,'' ಎಂದು ಹೇಳಿದರು.

"ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಯುಎಪಿಎ ಅಡಿಯಲ್ಲಿ ರಾಜ್ಯವು ಜನರ ವಿರುದ್ದ ಪ್ರಕರಣ ದಾಖಲು ಮಾಡಿದಾಗ ಹಾಗೂ ಜೈಲಿನಲ್ಲಿ ಇರಿಸಿದಾಗ ನ್ಯಾಯಾಲಯಗಳು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಲು ಸಾಧ್ಯವಿಲ್ಲ," ಎಂದು ನ್ಯಾಯಮೂರ್ತಿ ಗೌಡ ಹೇಳಿದರು. ಫಾದರ್
ಹಾಗೆಯೇ "ಸ್ವಾಮಿಯ ಸಾವಿಗೆ ಕಾರಣವಾದ ಸಂದರ್ಭಗಳು ಆತಂಕಕಾರಿ. ಸ್ಟಾನ್‌ ಸ್ವಾಮಿ ಜಾಮೀನು ಪಡೆಯಲು ಅರ್ಹರು ಎಂದು ಪರಿಗಣಿಸಲು ಎನ್ಐಎ ಮತ್ತು ನ್ಯಾಯಾಲಯಗಳು ವಿಫಲವಾಗಿವೆ," ಎಂದು ಆರೋಪಿಸಿದರು.

(ಒನ್‌ಇಂಡಿಯಾ ಸುದ್ದಿ)

English summary
Former Supreme Court judges raise concerns over misuse of Unlawful Activities (Prevention) Act (UAPA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X