ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಮಾಜಿ ರಾಷ್ಟ್ರಪತಿ, ಪ್ರಣಬ್ ಮುಖರ್ಜಿ ವಿಧಿವಶ

|
Google Oneindia Kannada News

ನವದೆಹಲಿ, ಆ. 31: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿಧನರಾಗಿದ್ದಾರೆ ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ದುಃಖತಪ್ತರಾಗಿ ಪ್ರಕಟಿಸಿದ್ದಾರೆ.

Recommended Video

ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

84 ವರ್ಷದ ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು. ಕೊರೊನಾವೈರಸ್ ಸೋಂಕಿನಿಂದಲೂ ಬಳಲುತ್ತಿದ್ದರು. ಬಂಗಾಳದಲ್ಲಿ 1935, ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಮುಖರ್ಜಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಪ್ರಾರಂಭಿಸಿದರು. 2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದರು.

Former President Pranab Mukherjee has passed away

ಅಭಿಜಿತ್ ಮುಖರ್ಜಿ ಟ್ವೀಟ್ ಮಾಡಿ


ಆರ್ ಆರ್ ಆಸ್ಪತ್ರೆಯ ನುರಿತ ವೈದ್ಯರ ಸತತ ಪ್ರಯತ್ನದ ನಡುವೆ ಚಿಕಿತ್ಸೆ ಫಲಕಾರಿಯಾಗದೆ ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಭಾರವಾದ ಹೃದಯದಿಂದ ತಿಳಿಸುತ್ತಿದ್ದೇನೆ. ದೇಶದ ವಿವಿಧೆಡೆಗಳಿಂದ ನನ್ನ ತಂದೆಗಾಗಿ ಪ್ರಾರ್ಥಿಸಿದ ಎಲ್ಲರಿಗೂ ನನ್ನ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.

ಕಾಳಿ ದೇವಿ ಉಪಾಸಕ, ಕಾಂಗ್ರೆಸ್ ಕಟ್ಟಾಳು ಪ್ರಣಬ್ ದಾದಾಕಾಳಿ ದೇವಿ ಉಪಾಸಕ, ಕಾಂಗ್ರೆಸ್ ಕಟ್ಟಾಳು ಪ್ರಣಬ್ ದಾದಾ

84 ವರ್ಷದ ಪ್ರಣಬ್ ಮುಖರ್ಜಿ ಅವರು ಭಾರತ ಕಂಡ ಉತ್ತಮ ರಾಜಕೀಯ ಮುಖಂಡರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ಪ್ರಣಬ್ ಮುಖರ್ಜಿ ಅವರು ರಕ್ಷಣ, ವಿತ್ತ, ಬಾಹ್ಯ ಇಲಾಖೆ, ಆದಾಯ, ನೌಕಾ, ಸಾರಿಗೆ, ಸಂಪರ್ಕ ವ್ಯವಸ್ಥೆ, ಆರ್ಥಿಕ ಇಲಾಖೆ, ವಾಣಿಜ್ಯ ಹಾಗು ಉದ್ದಿಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಬೆಂಗಾಳದ ಮಿರಾತಿ ಎಂಬಲ್ಲಿ ಜನಿಸಿದ ಪ್ರಣಬ್ ಅವರು ಎಂಎ, ಸ್ನಾತಕೋತ್ತರ(ರಾಜಕೀಯ), ಎಲ್ ಎಲ್ ಬಿ ಪದವೀಧರರಾಗಿದ್ದರು. ಉಪಾಧ್ಯಾಯರಾಗಿ, ಪತ್ರಕರ್ತರಾಗಿ ವೃತ್ತಿ ಬದುಕು ಆರಂಭಿಸಿದವರು ಕೊನೆಗೆ ತಮ್ಮ ತಂದೆಯ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ತಮ್ಮಲ್ಲೂ ಬೆಳೆಸಿಕೊಂಡು ರಾಜಕೀಯ ರಂಗಕ್ಕೆ ಧುಮುಕಿದರು. ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆ, ಸಚಿವ ಸ್ಥಾನ ಪಡೆದು ಕೊನೆಗೆ ರೈಸಿನಾ ಹಿಲ್ಸ್ ನ ಮಾಲೀಕರಾಗಿ ದೇಶದ ಪ್ರಥಮ ಪ್ರಜೆಯಾಗಿ ಕಾರ್ಯ ನಿರ್ವಹಿಸಿದ್ದು ಈಗ ಇತಿಹಾಸ.

English summary
Former president Pranab Mukherjee passed away today(Aug 31). He was getting treatment for Lubg infection at the Army’s Research and Referral Hospital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X