ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ: ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡರ ಸಲಹೆ

|
Google Oneindia Kannada News

ಬೆಂಗಳೂರು, ಜು. 17: ಕೊರೊನಾ ವೈರಸ್ ಸಂಕಷ್ಟದ ಮಧ್ಯೆ ಅಸ್ಸಾಂ ರಾಜ್ಯದಲ್ಲಿ ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಒಂದೆಡೆ ಕೊರೊನಾ ವೈರಸ್ ರಾಜ್ಯದ ಜನರನ್ನು ಕಾಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹ ಪರಿಸ್ಥಿತಿ ಜನರ ಪ್ರಾಣ ಹಾನಿ ಮಾಡುತ್ತಿದೆ.

Recommended Video

Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

ಸತತ ಪ್ರವಾಹದಿಂದ ಅಸ್ಸಾಂ ರಾಜ್ಯದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರೊಂದಿಗೆ ಪ್ರಾಣಿಗಳು ಸಹ ಜೀವ ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿವೆ. ಅಸ್ಸಾಂ ರಾಜ್ಯದ 33 ಜಿಲ್ಲೆಗಳ ಪೈಕಿ ದೇಮಾಜಿ, ಲಾಕೀಂಪುರ್, ಬಿಸ್ವನಾಥ್, ಡರ್ರಾಂಗ್, ನಾಲ್ಬಾರಿ, ಬಾರ್ಪೆಟಾ ಸೇರಿದಂತೆ 27 ಜಿಲ್ಲೆಗಳು ಪ್ರವಾಹದಲ್ಲಿ ಸಿಲುಕಿವೆ. ಇದೇ ಸಂದರ್ಭದಲ್ಲಿ ಅಸ್ಸಾಂನಲ್ಲಿನ ಪ್ರವಾಹ ವರದಿಗಳಿಂದ ತೀವ್ರವಾಗಿ ನೊಂದಿರುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಜೊತೆಗೆ ಅಸ್ಸಾಂನಲ್ಲಿಯ ಪ್ರವಾಹ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಿ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.

ಅಸ್ಸಾಂ ಜಲಾವೃತ

ಅಸ್ಸಾಂ ಜಲಾವೃತ

ಕಳೆದ ಕೆಲವು ದಿನಗಳಿಂದ ಅಲ್ಲಿನ ಪರಿಸ್ಥಿತಿ ಸ್ಥಿರವಾಗಿ ಹದಗೆಡುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದೆ, ಇತ್ತೀಚಿನ ವರದಿಗಳಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ನೋವಿನ ಸಂಗತಿ, ಈ ಪ್ರವಾಹದಿಂದ ಸುಮಾರು 40 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ, ಸುಮಾರು 480 ಪರಿಹಾರ ಶಿಬಿರಗಳನ್ನು ಈಗಾಗಲೇ ಅಲ್ಲಿನ ರಾಜ್ಯ ಸರ್ಕಾರ ಸ್ಥಾಪಿಸಿದ್ದರೂ ಕೂಡ ಸಾರ್ವಜನಿಕರ ಮೂಲಸೌಕರ್ಯಗಳಿಗೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದಿದೆ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನಲ್ಲಿ ಭಾರೀ ಪ್ರವಾಹ, ಜನ ಜೀವನ ಅತಂತ್ರ: ಜನರ ನೆರವಿಗೆ ನಿಂತ ಬಿಜೆಪಿ ಶಾಸಕಅಸ್ಸಾಂನಲ್ಲಿ ಭಾರೀ ಪ್ರವಾಹ, ಜನ ಜೀವನ ಅತಂತ್ರ: ಜನರ ನೆರವಿಗೆ ನಿಂತ ಬಿಜೆಪಿ ಶಾಸಕ

ಕಾಜಿರಂಗಾ ಉದ್ಯಾನವನ

ಕಾಜಿರಂಗಾ ಉದ್ಯಾನವನ

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇಕಡಾ 95ರಷ್ಟು ಭಾಗ ಜಲಾವೃತವಾಗಿದೆ. ಸುಮಾರು 430 ಚದರ ಕಿಲೊಮೀಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಸುಮಾರು 60ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿರುವುದು ಕೂಡ ಬಹಳ ದುಃಖಕರವಾಗಿದೆ ಎಂದು ದೇವೇಗೌಡರು ದುಃಖ ವ್ಯಕ್ತಪಡಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವಾಗ ಅಸ್ಸಾಂನ ಜನರು ಪ್ರವಾಹ ಮತ್ತು ಅದರಿಂದ ಉಂಟಾದ ಸಾವು ನೋವುಗಳ ಜೊತೆ ಹೋರಾಡುತ್ತಿದ್ದಾರೆ ಮತ್ತು ಈ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶದಿಂದ ಸ್ಥಳಾಂತರಗೊಳ್ಳಲು ಹೋರಾಡುತ್ತಿರುವುದು ನೋಡಿದರೆ ಮನಸ್ಸಿಗೆ ಬಹಳ ನೋವುಂಟಾಗಿದೆ ಎಂದಿದ್ದಾರೆ.

ಪ್ರಧಾನಿಗೆ ಮಾಜಿ ಪ್ರಧಾನಿ ಪತ್ರ

ಪ್ರಧಾನಿಗೆ ಮಾಜಿ ಪ್ರಧಾನಿ ಪತ್ರ

ಉದಯೋನ್ಮುಖ ರಾಜ್ಯವಾದ ಅಸ್ಸಾಂನ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಬೇಕೆಂದು ನಾನು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಮತ್ತು ಅಲ್ಲಿನ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡಬೇಕೆಂದು ಪತ್ರದ ಮೂಲಕ ಆಗ್ರಹಿಸುತ್ತೇನೆ ಎಂದು ದೇವೇಗೌಡ ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಕೊರೊನಾವೈರಸ್ ಬೆಂಕಿಗೆ ಪ್ರವಾಹದ ತುಪ್ಪ: ಬದುಕು ಧಗಧಗಅಸ್ಸಾಂನಲ್ಲಿ ಕೊರೊನಾವೈರಸ್ ಬೆಂಕಿಗೆ ಪ್ರವಾಹದ ತುಪ್ಪ: ಬದುಕು ಧಗಧಗ

ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮತ್ತು ಅದಾದ ನಂತರವೂ ಕೂಡ ಅಸ್ಸಾಂ ಜನತೆ ಮತ್ತು ಈಶಾನ್ಯಾ ರಾಜ್ಯಗಳ ಜನರು ನನ್ನ ಬಗ್ಗೆ ಅತೀವ ಪ್ರೀತಿ ಮತ್ತು ವಿಶ್ವಾಸ ತೋರಿಸಿದ್ದಾರೆ , ಅಲ್ಲಿನ ಜನರು ಆದಷ್ಟು ಬೇಗ ಈ ಸಂಕಷ್ಟದಿಂದ ಹೊರ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ

ಅಸ್ಸಾಂ ರಾಜ್ಯಕ್ಕೆ ಭೇಟಿ

ಅಸ್ಸಾಂ ರಾಜ್ಯಕ್ಕೆ ಭೇಟಿ

ಇಡೀ ದೇಶದಲ್ಲಿ ಈಗ ಕೊರೊನಾ ವೈರಸ್ ಸೋಂಕಿನಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ದೇಶಕ್ಕೆ ಆವರಿಸಿರುವ ಸಾಂಕ್ರಾಮಿಕ ರೋಗ ಕಡಿಮೆ ಆದ ತಕ್ಷಣ ನಾನು ಅಸ್ಸಾಂ ಹಾಗು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.

English summary
Former Prime Minister H.D. Deve Gowda appealed to Prime Minister Narendra Modi and the central government to give maximum assistance to the state government to take immediate note of the flood situation in Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X