ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಗುಂಡಿಗೆ ಪಿಡಿಪಿ ಮಾಜಿ ನಾಯಕ ಗುಲಾಂ ನಬಿ ಪಟೇಲ್ ಬಲಿ

|
Google Oneindia Kannada News

ಶ್ರೀನಗರ, ಏಪ್ರಿಲ್ 25: ಜಮ್ಮು ಮತ್ತು ಕಾಶ್ಮೀರದ ಆಡಳಿತಾರೂಢ ಪಿಡಿಪಿಯ ಮಾಜಿ ನಾಯಕ ಗುಲಾಂ ನಬಿ ಪಟೇಲ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಅವರು ತಮ್ಮ ಸ್ಕಾರ್ಪಿಯೊ ಕಾರ್‌ನಲ್ಲಿ ರಾಜಪುರ ಚೌಕದ ಬಳಿ ಸಾಗುತ್ತಿದ್ದಾಗ ದಾಳಿ ನಡೆಸಿದ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದಾರೆ.

ಭಾರತೀಯ ಸೇನೆಯಿಂದ ಉಗ್ರರ ಹೊಸ ಹಿಟ್ ಲಿಸ್ಟ್‌ ಪ್ರಕಟಭಾರತೀಯ ಸೇನೆಯಿಂದ ಉಗ್ರರ ಹೊಸ ಹಿಟ್ ಲಿಸ್ಟ್‌ ಪ್ರಕಟ

ಗುಲಾಂ ನಬಿ ಪಟೇಲ್ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರು. ಪಿಡಿಪಿಯ ಪುಲ್ವಾಮಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪಟೇಲ್ ಕಳೆದ ವರ್ಷ ಕಾರ್ಯ ನಿರ್ವಹಿಸಿದ್ದರು. ಅವರಿಗೆ ಹಿಂದಿನಿಂದಲೂ ಜೀವ ಬೆದರಿಕೆ ಇತ್ತು.


ಪಟೇಲ್ ಅವರ ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿ ಕೂಡ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ಉಗ್ರರು ಕೂಡಲೇ ಪರಾರಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಂಪು ಉಗ್ರರ ಮಾರಣಹೋಮ: ಚಿತ್ರಗಳು ಮಹಾರಾಷ್ಟ್ರದಲ್ಲಿ ಕೆಂಪು ಉಗ್ರರ ಮಾರಣಹೋಮ: ಚಿತ್ರಗಳು

ಪಟೇಲ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪುಲ್ವಾಮಾ ದಕ್ಷಿಣ ಕಾಶ್ಮೀರದ ಅನಂತನಾಗ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇದು ಮೆಹಬೂಬಾ ಮುಫ್ತಿ ಅವರ ಕುಟುಂಬದ ಮೂಲ ಊರು.

English summary
A Former leader of Jammu and Kashmir's ruling PDP was shot dead by terrorists on wednesday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X