ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರವಿ ನರೇನ್ ಬಂಧನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 6: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಎಸ್‌ಇ ಮಾಜಿ ಸಿಇಒ ಮತ್ತು ಎಂಡಿ ರವಿ ನರೇನ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ವಂಚನೆ ಮತ್ತು ಉದ್ಯೋಗಿಗಳ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ರವಿ ನರೇನ್ ಅನ್ನು ಬಂಧಿಸಲಾಗಿದೆ.

ಆಪಾದಿತ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಇಡಿ ಮತ್ತೊಬ್ಬ ಮಾಜಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಆದರೆ ಈ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಸಿಬಿಐ ವಂಚನೆ ಪ್ರಕರಣದಲ್ಲಿ ಅವರನ್ನು ಬಂಧಿಸಿತ್ತು. ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆಯನ್ನೂ ಬಂಧಿಸಿತ್ತು.

Former NSE Chief Ravi Narain Arrested by ED Officials In Money Laundering Case

ಎನ್ಎಸ್ಇ ಮುಖ್ಯಸ್ಥರಾಗಿದ್ದ ರವಿ ನರೇನ್: ರವಿ ನರೇನ್ 1994ರಿಂದ 2013ರವರೆಗೆ ಎನ್‌ಎಸ್‌ಇ ಮುಖ್ಯಸ್ಥರಾಗಿದ್ದರು. ಚಿತ್ರಾ ನಂತರ 2013 ಮತ್ತು 2016ರ ನಡುವೆ ವಿನಿಮಯ ಕೇಂದ್ರದ ಮುಖ್ಯಸ್ಥರಾಗಿದ್ದರು. ಕೋ- ಲೊಕೇಷನ್ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳೆಂದು ಪಟ್ಟಿ ಮಾಡಲಾಗಿದೆ. ಆಗಿನ ಎನ್‌ಎಸ್‌ಇ ಮುಖ್ಯಸ್ಥರಾಗಿದ್ದವರು ಹೈ ಫ್ರೀಕ್ವೆನ್ಸಿ ವ್ಯಾಪಾರಿಗಳ ಒಂದು ಗುಂಪಿಗೆ ಅಲ್ಗಾರಿದಮಿಕ್ ಟ್ರೇಡಿಂಗ್ ಅನ್ನು ವೇಗಗೊಳಿಸಲು ನ್ಯಾಯಸಮ್ಮತ ಅಲ್ಲದ ಮಾರ್ಗದಲ್ಲಿ ಸಂಪರ್ಕವನ್ನು ಒದಗಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.

English summary
Former NSE Chief Ravi Narain Arrested by ED Officials In Money Laundering Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X