ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿಗೆ ರಾಷ್ಟ್ರ ಮಟ್ಟದ ಬಾಕ್ಸರ್ ಬಲಿ

Posted By:
Subscribe to Oneindia Kannada

ನೋಯ್ಡಾ, ಜನವರಿ 13: ರಾಷ್ಟ್ರಮಟ್ಟದ ಮಾಜಿ ಬಾಕ್ಸರ್ ಒಬ್ಬರನ್ನು ಅವರ ಅಪಾರ್ಟ್ಮೆಂಟಿನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಸಾಯಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಸುರಜ್ಪುರದಲ್ಲಿ ಇಂದು(ಜ.13) ನಡೆದಿದೆ.

ಪ್ರಸ್ತುತ ಆಲ್ಫಾ 1 ಜಿಮ್ ನಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ ಬಾಕ್ಸರ್ ಜಿತೇಂದ್ರ ಮನ್ ಅವರನ್ನು ಅವರ ನಿವಾಸದಲ್ಲೇ ಸಾಯಿಸಿದ ದುಷ್ಕರ್ಮಿ, ಕೊಲೆಯ ನಂತರ ಮನೆಯ ಬಾಗಿಲು ಮುಚ್ಚಿಕೊಂಡುಹೋಗಿದ್ದಲ್ಲದೆ, ಜಿತೇಂದ್ರ ಅವರ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಹೋಗಿದ್ದಾನೆ.

ಈಗಾಗಲೇ ಅಪಾರ್ಟ್ಮೆಂಟಿನ ಸಿಸಿಟಿವಿ ಫೋಟೇಜ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.

Former national-level boxer shot dead in his Greater Noida flat

ಜಿತೇಂದ್ರ ಮನ್ ರಾಷ್ಟ್ರೀಯ ಮಟ್ಟದಲ್ಲಿ ಕಿರಿಯರ ವಿಭಾಗದ ಬಾಕ್ಸರ್ ಆಗಿ ಹಲವು ಪ್ರದರ್ಶನಗಳನ್ನು ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A former national-level boxer was shot dead in his apartment by unidentified men in Greater Noida's Surajpur locality on Friday. Boxer, Jitendra Mann was currently working as a trainer in a gym in Alpha 1.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ