ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ನಾನು ಸ್ವಾಭಾವಿಕವಾಗಿ ಸೂಕ್ತ: 'ಸಿಂಗಂ' ಅಣ್ಣಾಮಲೈ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಕರ್ನಾಟಕದ 'ಸಿಂಗಂ' ಖ್ಯಾತಿಯ ಅಣ್ಣಾಮಲೈ, ರಾಜಕೀಯ ಸೇರ್ಪಡೆಯ ಕುರಿತಾದ ಅನೇಕ ಊಹಾಪೋಹಗಳ ಬಳಿಕ ಕಮಲದ ಕೈಹಿಡಿದಿದ್ದಾರೆ. 2019ರ ಮೇ ತಿಂಗಳಲ್ಲಿ ಹಠಾತ್ತಾಗಿ ರಾಜೀನಾಮೆ ನಿರ್ಧಾರ ತೆಗೆದುಕೊಂಡು ಆಘಾತ ಮೂಡಿಸಿದ್ದ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಬಿಜೆಪಿ ಸೇರುತ್ತಾರೆ ಎನ್ನುವ ಮಾತು ಆಗಲೇ ಕೇಳಿಬಂದಿತ್ತು.

ರಾಜೀನಾಮೆ ನೀಡಿದ ಒಂದು ವರ್ಷ ಕಳೆದ ನಂತರ ಅವರು ರಾಜಕೀಯ ಸೇರ್ಪಡೆಯ ಇಂಗಿತವನ್ನು ಬಹಿರಂಗವಾಗಿ ಹಂಚಿಕೊಂಡಿದ್ದರು. ಅದಕ್ಕೂ ಮೊದಲೇ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಪ್ರಶಂಸಿಸುವ ಮಾತುಗಳನ್ನಾಡಿದ್ದು, ಬಿಜೆಪಿ ಸೇರಿಕೊಳ್ಳುವ ಬಗ್ಗೆ ಅನುಮಾನಗಳನ್ನು ಬಲಗೊಳಿಸಿತ್ತು.

ಬಿಜೆಪಿ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈಬಿಜೆಪಿ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ

ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಅವರು ಬಿಜೆಪಿ ಮುಖಂಡರಾದ ಪಿ ಮುರಳೀಧರ ರಾವ್ ಮತ್ತು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮುರುಗನ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಮುಂದೆ ಓದಿ...

ರಾಜಕೀಯ ವೃತ್ತಿ ಬದುಕಿನ ಆಯ್ಕೆ

ರಾಜಕೀಯ ವೃತ್ತಿ ಬದುಕಿನ ಆಯ್ಕೆ

ರಾಜಕೀಯವಾಗಿ ಸ್ವತಂತ್ರವಾಗಿ ಇರಬೇಕು ಎಂಬ ಆಲೋಚನೆ ಹೊಂದಿದ್ದೆ. ಕೆಲವು ತಿಂಗಳಿನಿಂದ ನನ್ನ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೆ. ಆದರೆ ನನ್ನ ರಾಜಕೀಯ ವೃತ್ತಿ ಬದುಕನ್ನು ಆರಂಭಿಸಲು ಬಿಜೆಪಿ ಸೇರಲು ನಿರ್ಧರಿಸಿದೆ ಎಂದು ಅಣ್ಣಾಮಲೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮುಂದಿನ ವರ್ಷ ಸ್ಪರ್ಧೆ ಸಾಧ್ಯತೆ

ಮುಂದಿನ ವರ್ಷ ಸ್ಪರ್ಧೆ ಸಾಧ್ಯತೆ

ತಾವು ಸ್ವಾಭಾವಿಕವಾಗಿಯೇ ಬಿಜೆಪಿಗೆ ಹೊಂದಿಕೊಳ್ಳುವುದಾಗಿ ಹೇಳಿಕೊಂಡ ಅವರು, ಪಕ್ಷದಲ್ಲಿ ಬೆಳೆಯಲು ಹೆಚ್ಚಿನ ಅವಕಾಶವಿದೆ ಮತ್ತು ತಮಿಳುನಾಡಿನಲ್ಲಿ ಪಕ್ಷ ಬೆಳೆಸಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. 2021ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

ಅಣ್ಣಾಮಲೈ ಬಿಜೆಪಿ ಸೇರುತ್ತಿರುವುದು ನನಗೆ ಗೊತ್ತಿಲ್ಲ: ಬಿಎಸ್‌ವೈಅಣ್ಣಾಮಲೈ ಬಿಜೆಪಿ ಸೇರುತ್ತಿರುವುದು ನನಗೆ ಗೊತ್ತಿಲ್ಲ: ಬಿಎಸ್‌ವೈ

ಮೂಲತಃ ರಾಷ್ಟ್ರೀಯವಾದಿ

ಮೂಲತಃ ರಾಷ್ಟ್ರೀಯವಾದಿ

ನಾನು ಮೂಲತಃ ರಾಷ್ಟ್ರೀಯವಾದಿ. ಆ ರಾಷ್ಟ್ರೀಯವಾದದ ಕಾರಣದಿಂದಲೇ ಐಪಿಎಸ್ ಸೇರಿಕೊಂಡಿದ್ದೆ. ಯಾವ ರಾಜಕೀಯ ಪಕ್ಷದ ಜತೆಗೂ ಗುರುತಿಸಿಕೊಳ್ಳದೆ ಜನಸೇವೆ ಮಾಡುವ ಉದ್ದೇಶವಿತ್ತು. ಹೀಗಾಗಿ ಐಪಿಎಸ್‌ಗೆ ರಾಜೀನಾಮೆ ನೀಡಿದ್ದೆ. ಆದರೆ ಸಾಮಾಜಿಕ ಬದಲಾವಣೆ ಮಾಡುವ ಗುರಿಗೆ ರಾಜಕೀಯ ಬದಲಾವಣೆಯ ಅಗತ್ಯವೂ ಇದೆ ಎನ್ನುವುದು ಮನಗಂಡಿದ್ದರಿಂದ ರಾಜಕೀಯ ಪಕ್ಷದ ಆಯ್ಕೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೆ ಎಂದು ತಿಳಿಸಿದ್ದಾರೆ.

ತಮಿಳುನಾಡು ರಾಜಕೀಯಕ್ಕೆ ಹೊಸ ದಿಕ್ಕು

ತಮಿಳುನಾಡು ರಾಜಕೀಯಕ್ಕೆ ಹೊಸ ದಿಕ್ಕು

ಪ್ರಸ್ತುತದ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯವೈಖರಿ ನನಗೆ ಇಷ್ಟವಾಗಿತ್ತು. ಸಮಗ್ರವಾಗಿ ಆಲೋಚಿಸಿದ ಬಳಿಕ ಬಿಜೆಪಿ ಅಯ್ಕೆ ಸೂಕ್ತ ಎನಿಸಿತು. ತಮಿಳುನಾಡಿನ ರಾಜಕೀಯಕ್ಕೆ ಕೂಡ ವಿಶೇಷ ದಿಕ್ಕು ತೋರಿಸಬೇಕಿದೆ. ಜತೆಗೆ ಅದರ ಅಸ್ಮಿತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕಿದೆ. ಬಿಜೆಪಿಯಿಂದ ತಮಿಳುನಾಡಿಗೆ ಹೊಸ ದಿಕ್ಕು ನೀಡಲು ಸಾಧ್ಯ ಎನ್ನುವುದು ಅರ್ಥವಾಗಿದೆ ಎಂದಿದ್ದಾರೆ.

ರಾಜಕೀಯಕ್ಕೆ ಧುಮುಕಿದ ಸಿಂಗಂ: 2021 ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧೆ!ರಾಜಕೀಯಕ್ಕೆ ಧುಮುಕಿದ ಸಿಂಗಂ: 2021 ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧೆ!

English summary
Former IPS officer of Karnataka cadre K Annamalai has joined BJP in Delhi on Tuesday. He may contest in the 2021 Tamil Nadu assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X