ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಪೊಲೀಸ್ ವಶಕ್ಕೆ ಅಂತಾರಾಷ್ಟ್ರೀಯ ಬುಕ್ಕಿ: ಭಾರತೀಯ ಕ್ರಿಕೆಟಿಗರ ನಿಜಬಣ್ಣ ಬಯಲು?

|
Google Oneindia Kannada News

ನವದೆಹಲಿ, ಫೆಬ್ರವರಿ 13: ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕ್ರಿಕೆಟ್ ಪಂದ್ಯಗಳನ್ನು ಅಂದಿನ ಆಟಗಾರರು ನಿಯತ್ತಾಗಿ ಆಡುತ್ತಿದ್ದರೋ ಅಥವಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರೋ ಎನ್ನುವ ನಿಜಾಂಶ ಬಯಲಾಗುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಬುಕ್ಕಿ, ಲಂಡನ್ ಮೂಲದ ಸಂಜೀವ್ ಚಾವ್ಲಾನನ್ನು ದೆಹಲಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈತ, ಈ ಹಿಂದೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಜೊತೆ ಮ್ಯಾಚ್ ಫಿಕ್ಸಿಂಗ್ ನಡೆಸಿ ಸಿಕ್ಕಿಹಾಕಿಕೊಂಡಿದ್ದ.

ಫಿಕ್ಸಿಂಗ್‌ ಆರೋಪಿ ಸಂಜೀವ್ ಕುಮಾರ್ ವಶಕ್ಕೆ ಯುಕೆ ಕೋರ್ಟ್ ತೀರ್ಪು

ಲಂಡನ್ ನಗರದ ಹೀಥ್ರೋ ವಿಮಾನ ನಿಲ್ದಾಣದಿಂದ ಪರಾರಿಯಾಗಿದ್ದ ಚಾವ್ಲಾ, ಭಾರತದ ಕ್ರಿಕೆಟ್ ಆಟಗಾರರೂ ಸೇರಿ, ಹಲವು ಅಂತಾರಾಷ್ಟ್ರೀಯ ಆಟಗಾರರ ಜೊತೆಗೆ ಸಂಪರ್ಕದಲ್ಲಿದ್ದ ಎಂದು ದೆಹಲಿ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.

ಕನ್ನಡಿಗ ಕೆಎಲ್ ರಾಹುಲ್ ಸಿಡುಕಿಗೆ ಜೇಮ್ಸ್ ನೀಶಮ್ ತಮಾಷೆಯ ಟ್ವೀಟ್!

ದೆಹಲಿ ಕ್ರೈಂ ಪೊಲೀಸರ ಚಾರ್ಜ್ ಶೀಟ್ ಪ್ರಕಾರ, ಚಾವ್ಲಾನ ನಂಬರ್ 4, ಮಾಂಕ್ ವಿಲ್ಲೆ ಅವೆನ್ಯೂ, ಲಂಡನ್ ನಲ್ಲಿರುವ ಅಪಾರ್ಟ್ಮೆಂಟಿಗೆ ಹಲವು ಭಾರತೀಯ ಆಟಗಾರರು ಭೇಟಿ ನೀಡುತ್ತಿದ್ದ ಅಂಶವೂ ಬಯಲಾಗಿದೆ. ಮುಂದೆ ಓದಿ...

ಅಂತಾರಾಷ್ಟ್ರೀಯ ಬುಕ್ಕಿ ಸಂಜೀವ್ ಚಾವ್ಲಾ

ಅಂತಾರಾಷ್ಟ್ರೀಯ ಬುಕ್ಕಿ ಸಂಜೀವ್ ಚಾವ್ಲಾ

ಜನವರಿ - ಮಾರ್ಚ್ 2000ರ ಅವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ದೂರವಾಣಿ ಸಂಭಾಷಣೆಯ ಸಿಡಿಆರ್ (ಕಾಲ್ ಡೇಟಾ ರೆಕಾರ್ಡ್) ಅನ್ನು ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವು ಭಾರತೀಯ ಆಟಗಾರರ ಫೋನ್ ಲಿಸ್ಟ್ ನಲ್ಲಿ ಬುಕ್ಕಿ ಸಂಜೀವ್ ಚಾವ್ಲಾ ಹೆಸರು ಇರುವುದು ಪತ್ತೆಯಾಗಿದೆ ಎಂದು ಆಂಗ್ಲ ಮಾಧ್ಯಮವೊಂದು (ಐಎಎನ್ಎಸ್) ವರದಿ ಮಾಡಿದೆ.

ಭಾರತದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಸರಣಿ

ಭಾರತದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಸರಣಿ

ಜನವರಿಯಿಂದ ಮಾರ್ಚ್ 2000, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸರಣಿ ನಡೆಯುತ್ತಿದ್ದ ಸಮಯವದು. ಭಾರತದಲ್ಲಿ ನಡೆಯುತ್ತಿದ್ದ ಈ ಕ್ರಿಕೆಟ್ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಎನ್ನುವ ಪೆಡಂಭೂತದ ವಿಚಾರ ಬಹಿರಂಗಗೊಂಡಿತ್ತು. ಈಗ ಬುಕ್ಕಿಯ ಬಂಧನದ ನಂತರ, ಅಂದಿನ ಸತ್ಯದ ಅಸಲಿಯತ್ತು ಏನು ಎನ್ನುವ ಅಂಶ ಬಹಿರಂಗಗೊಳ್ಳುವ ಸಾಧ್ಯತೆಯಿಲ್ಲದಿಲ್ಲ.

ಲಂಡನ್ ಹೀಥ್ರೋ ವಿಮಾನ ನಿಲ್ದಾಣದಿಂದ ಪರಾರಿ

ಲಂಡನ್ ಹೀಥ್ರೋ ವಿಮಾನ ನಿಲ್ದಾಣದಿಂದ ಪರಾರಿ

"ಬುಕ್ಕಿ ಚಾವ್ಲಾ ಲಂಡನ್ ನಲ್ಲಿ ಪರಾರಿಯಾದ ನಂತರ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿಲ್ಲ. ಜೊತೆಗೆ, ಭಾರತೀಯ ಕ್ರಿಕೆಟಿಗರ ಜೊತೆಗಿನ ದೂರವಾಣಿ ಸಂಭಾಷಣೆಯ ಬಗ್ಗೆ ಹೆಚ್ಚಿನ ವಿವರಣೆ ಕೇಳಲು ಸಾಧ್ಯವಾಗಿರಲಿಲ್ಲ" ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸ್

ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸ್

2001ರಲ್ಲಿ ಸಂಜೀವ್ ಚಾವ್ಲಾ ಬಂಧನಕ್ಕೆ ಒಳಗಾಗಿದ್ದಾಗ ಸಂಗ್ರಹಿಸಲಾಗಿದ್ದ ದಾಖಲೆಗಳನ್ನು ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರಿಂದ ಕ್ರೈಂ ಬ್ರಾಂಚ್ ಪೊಲೀಸರು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ತಂಡದ ಆಟಗಾರರ ಜೊತೆಗೂ ಈತ ಸಂಪರ್ಕದಲ್ಲಿದ್ದ. "ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲೆಕ್ ಸ್ಟುವರ್ಟ್ ಗೆ ಈ ಬುಕ್ಕಿ, ಸಣ್ಣಮೊತ್ತಕ್ಕೆ ಔಟ್ ಆಗುವಂತೆ ಆಮಿಷವೊಡ್ದಿದ್ದ" ಇಂಗ್ಲೆಂಡ್ ಮಾಜಿ ಆಲ್ ರೌಂಡರ್ ಕ್ರಿಸ್ ಲೂಯಿಸ್ ಆಪಾದಿಸಿದ್ದರು.

English summary
Former Indian Cricketers Could Be In Trouble As Delhi Police Extradite International Bookie Sanjeev Chawla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X