ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೇ ಗುಜರಾತ್ ಚುನಾವಣೆ ದಿನಾಂಕ ಘೋಷಣೆ ಅಧಿಕಾರ: ಚಿದು ವ್ಯಂಗ್ಯ

|
Google Oneindia Kannada News

ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡದ ಚುನಾವಣೆ ನಿಯೋಗವನ್ನು ಕೇಂದ್ರದ ಮಾಜಿ ಸಚಿವ- ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ತರಾಟೆಗೆ ತೆಗೆದುಕೊಂಡಿದ್ದಾರೆ. "ಚುನಾವಣೆ ಆಯೋಗವು ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಅಧಿಕಾರವನ್ನು ಪ್ರಧಾನಿ ಮೋದಿಗೆ ನೀಡಿದೆ" ಎಂದಿದ್ದಾರೆ.

ಚುನಾವಣೆ ಆಯೋಗವು ಹಲ್ಲಿಲ್ಲದ ಹುಲಿ, ವರುಣ್ ಗಾಂಧಿ ವ್ಯಂಗ್ಯಚುನಾವಣೆ ಆಯೋಗವು ಹಲ್ಲಿಲ್ಲದ ಹುಲಿ, ವರುಣ್ ಗಾಂಧಿ ವ್ಯಂಗ್ಯ

ಈ ತಿಂಗಳ ಕೊನೆಗೆ ನಡೆಸುವ ಚುನಾವಣೆ ಪ್ರಚಾರದಲ್ಲಿ ಮೋದಿ ಮತದಾನದ ದಿನಾಂಕ ಘೋಷಿಸಲಿದ್ದಾರೆ ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.

Former FM P Chidambaram takes dig at EC for delaying Gujarat poll announcement

ಗುಜರಾತ್ ಸರಕಾರವು ಎಲ್ಲ ಪುಕ್ಕಟೆ ಕೊಡುಗೆ ಹಾಗೂ ವಿನಾಯಿತಿಗಳನ್ನು ಘೋಷಿಸಿದ ಮೇಲೆ ದೀರ್ಘ ಕಾಲದ ರಜಾ ಮುಗಿಸಿ ಬರುವಂತೆ ಕರೆ ನೀಡಲಾಗುತ್ತದೆ. ಗುಜರಾತ್ ನಲ್ಲಿ ಚುನಾವಣೆ ಪ್ರಚಾರದ ಕೊನೆ ಸಭೆಯಲ್ಲಿ ಮತದಾನ ದಿನದ ಘೋಷಣೆ ಮಾಡಲು ಮೋದಿ ಅವರಿಗೇ ಚುನಾವಣೆ ಆಯೋಗ ಅಧಿಕಾರ ನೀಡಿದೆ ಎಂದು ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ - ಕಾಂಗ್ರೆಸ್ ಟೀಕೆಚುನಾವಣಾ ಆಯೋಗದ ಮೇಲೆ ಬಿಜೆಪಿ ಒತ್ತಡ - ಕಾಂಗ್ರೆಸ್ ಟೀಕೆ

ಚುನಾವಣೆ ಆಯೋಗವು ಹಿಮಾಚಲ ಪ್ರದೇಶದ ಚುನಾವಣೆ ದಿನಾಂಕವನ್ನು ಘೋಷಿಸಿತ್ತು. ಆದರೆ ಗುಜರಾತ್ ವಿಧಾನಸಭಾ ಚುನಾವಣೆ ದಿನ ಘೋಷಣೆ ಮಾಡಿರಲಿಲ್ಲ. ಪುಕ್ಕಟೆ ಕೊಡುಗೆಗಳನ್ನು ಗುಜರಾತ್ ನಲ್ಲಿ ಘೋಷಣೆ ಮಾಡುವುದಕ್ಕೆ ಬಿಜೆಪಿಗೆ ಅವಕಾಶ ನೀಡಲಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು.

ಅಕ್ಟೋಬರ್ ಹದಿನಾರರಂದು ಗುಜರಾತ್ ಗೆ ಭೇಟಿ ನೀಡಿದ್ದ ಮೋದಿ, ಇದೇ ತಿಂಗಳ 22ರಂದು ಮತ್ತೊಮ್ಮೆ ಭೇಟಿ ನೀಡಲಿದ್ದಾರೆ.

English summary
Senior Congress leader P. Chidambaram on Friday took a dig at the Election Commission (EC) for not announcing the Gujarat Assembly poll dates, saying it has "authorised" Prime Minister Narendra Modi to "announce" the dates at his last poll rally this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X