ಸರಕಾರಕ್ಕೆ ಚಿದಂಬರಂ ಎಸೆದ ಒಂದು ರೂಪಾಯಿಯ ಸವಾಲು!

Posted By:
Subscribe to Oneindia Kannada

ತನ್ನ ಪುತ್ರ ಕಾರ್ತಿ ಚಿದಂಬರಂ ವಿರುದ್ದ ಅಕ್ರಮ ಆಸ್ತಿಗಳಿಕೆ ಆರೋಪದ ಬಗ್ಗೆ ಕೆಂಡಾಮಂಡಲವಾಗಿರುವ ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ, ಸರಕಾರಕ್ಕೆ ಒಂದು ರೂಪಾಯಿಯ ಸವಾಲೆಸೆದಿದ್ದಾರೆ.

ಕಾರ್ತಿಯನ್ನು ನನ್ನ ಪುತ್ರ ಎನ್ನುವ ಕಾರಣಕ್ಕಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನ ಪುತ್ರ ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾನೆಂದು ಆರೋಪಿಸಲಾಗುತ್ತಿದೆ. ವಿದೇಶಗಳಲ್ಲಿನ ಆಸ್ತಿಯ ಪಟ್ಟಿಯನ್ನು ಜಾರಿ ನಿರ್ದೇಶಾನಲಯ ನೀಡಲಿ.

ವಿದೇಶದಲ್ಲಿದೆ ಎಂದು ಆರೋಪಿಸಲಾಗಿರುವ ಆಸ್ತಿಯನ್ನು ದಾಖಲೆ ಸಮೇತ ಸಾಬೀತು ಪಡಿಸಿದರೆ ಕೇವಲ ಒಂದು ರೂಪಾಯಿಗೆ ಎಲ್ಲಾ ಆಸ್ತಿಗಳನ್ನು ಸರಕಾರಕ್ಕೆ ಬರೆದುಕೊಡಲು ನಾನು ಸಿದ್ದ ಎಂದು ಪಿಸಿ, ಕೇಂದ್ರ ಸರಕಾರಕ್ಕೆ ಸವಾಲೆಸೆದಿದ್ದಾರೆ. (ಚಿದಂಬರಂ ಪುತ್ರ ಕಾರ್ತಿ ಜನ್ಮ ಜಾಲಾಡಿದ ಇಡಿ)

ಕಾರ್ತಿ ಚಿದಂಬರಂ ಅವರು ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆಂದು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಮಾಹಿತಿ ಹೊರಹಾಕಿತ್ತು.

ಭಾನುವಾರ (ಮಾ 7) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚಿದಂಬರಂ, ನನ್ನ ಮಗನ ಕಚೇರಿಯ ಮೇಲೆ ಇಡಿ ದಾಳಿ ನಡೆಸಿದ್ದು ಸಂಪೂರ್ಣ ರಾಜಕೀಯ ಪ್ರೇರಿತ. ಬಜೆಟ್ ಅಧಿವೇಶನದ ವೇಳೆ ಕಾಂಗ್ರೆಸ್ ಬಾಯಿಮುಚ್ಚಿಸಲು ಕೇಂದ್ರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಮುಂದಿನ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸಂಸ್ಥೆಯೊಂದರ ಮಾಲೀಕ

ಸಂಸ್ಥೆಯೊಂದರ ಮಾಲೀಕ

ನನ್ನ ಮಗ ಸಂಸ್ಥೆಯೊಂದರ ಮಾಲೀಕನಾಗಿದ್ದು, ಸಂಸ್ಥೆಯ ಎಲ್ಲಾ ವಹಿವಾಟುಗಳು ಆದಾಯ ತೆರಿಗೆ ಕಾಯ್ದೆಯನ್ವಯ ಪಾರದರ್ಶಕವಾಗಿದೆ. ಸತ್ಯ ಇಂದಲ್ಲಾ ನಾಳೆ ಹೊರಬರಲಿದೆ ಎಂದು ಚಿದಂಬರಂ ಹೇಳಿದ್ದಾರೆ.

ಸರಕಾರಕ್ಕೆ ಬರೆದುಕೊಡಲು ಹೇಳುತ್ತೇನೆ

ಸರಕಾರಕ್ಕೆ ಬರೆದುಕೊಡಲು ಹೇಳುತ್ತೇನೆ

ನನ್ನ ಮಗನ ಅಕ್ರಮ ಆಸ್ತಿ ಹೊಂದಿರುವ ಪಟ್ಟಿಯನ್ನು ಸರಕಾರ ಸಿದ್ದಪಡಿಸಲಿ, ನನ್ನ ಮಗನಿಗೆ ಒಂದು ರೂಪಾಯಿಗೆ ಅದನ್ನೆಲ್ಲಾ ಸರಕಾರಕ್ಕೆ ಬರೆದುಕೊಡಲು ಹೇಳುತ್ತೇನೆ. ಸರಕಾರವೇ ಅಂತಹ ಜಾಗದ ಮಾಲೀಕರಾಗಲಿ ಎಂದು ಚಿದಂಬರಂ ಸರಕಾರಕ್ಕೆ ನೇರ ಸವಾಲೆಸೆದಿದ್ದಾರೆ.

ಆದಾಯ ತೆರಿಗೆ

ಆದಾಯ ತೆರಿಗೆ

ನನ್ನ ಮಗ ಕಾರ್ತಿ ಹೆಸರಿನಲ್ಲಿ ಏನು ಆಸ್ತಿ, ಸಾಲ ಇದೆಯೋ ಎಲ್ಲವನ್ನೂ ಆದಾಯ ತೆರಿಗೆ ರಿಟರ್ನ್ ನಲ್ಲಿ ಹೇಳಲಾಗಿದೆ. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಐಟಿ ರಿಟರ್ನ್ ನಲ್ಲಿ ಘೋಷಿಸಿದ ಆಸ್ತಿಯಿಂದ ಹೊರತಾಗಿ ನನ್ನ ಮಗ ಯಾವ ಆಸ್ತಿಯನ್ನೂ ಹೊಂದಿಲ್ಲ ಎಂದು ಚಿದಂಬರಂ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾರೆ.

ಜಾರಿ ನಿರ್ದೇಶನಾಲಯ

ಜಾರಿ ನಿರ್ದೇಶನಾಲಯ

ಕಾರ್ತಿ ಚಿದಂಬರಂ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ತನಿಖಾ ತಂಡ ಹೊರ ಹಾಕಿರುವ ಮಾಹಿತಿ ಪ್ರಕಾರ, ಕಾರ್ತಿ ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆಂದು ತನಿಖೆಯಲ್ಲಿ ಹೇಳಲಾಗಿದೆ.

ವಿದೇಶದಲ್ಲಿ ಆಸ್ತಿ

ವಿದೇಶದಲ್ಲಿ ಆಸ್ತಿ

ಇಂಗ್ಲೆಂಡ್, ಅಮೆರಿಕ, ದಕ್ಷಿಣ ಆಫ್ರಿಕಾ, ಯುಎಸ್ಎ, ಫಿಲಿಪೈನ್ಸ್, ಶ್ರೀಲಂಕಾ, ಫ್ರಾನ್ಸ್, ಸ್ಪೇನ್ ಸೇರಿ 14 ದೇಶಗಳಲ್ಲಿ ಕಾರ್ತಿ ಚಿದಂಬರಂ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದಾರೆ ಎಂದು ತನಿಖಾ ತಂಡದಿಂದ ಮಾಹಿತಿ ಬಹಿರಂಗವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Union Finance Minister P Chidambaram offers sons undisclosed assets to government for One Rupee, If the government is of the view that Karti Chidambaram has undisclosed assets.
Please Wait while comments are loading...