ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್; ಸಿಬಿಐ ಮುಖ್ಯಸ್ಥರ ಕರೆ ಮೇಲೂ ನಿಗಾ ವಹಿಸಲಾಗಿತ್ತು!

|
Google Oneindia Kannada News

ನವದೆಹಲಿ, ಜುಲೈ 22; ಪೆಗಾಸಸ್ ಸ್ಪೈವೇರ್ ಬಗ್ಗೆ ದೇಶದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಲವಾರು ನಾಯಕರ ಫೋನ್ ಕರೆಗಳ ಮೇಲೆ ಕಣ್ಗಾವಲು ಇಡಲಾಗಿತ್ತು ಎಂಬ ವಿಚಾರ ಸಂಸತ್ ಅಧಿವೇಶನದಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿದೆ.

ಗುರುವಾರ ಕಣ್ಗಾವಲು ಕುರಿತು ಮತ್ತಷ್ಟು ವರದಿಗಳು ಬಂದಿವೆ. ಸಿಬಿಐನ ಮಾಜಿ ಮುಖ್ಯಸ್ಥ ಮತ್ತು ಐಪಿಎಸ್ ಅಧಿಕಾರಿಯಾಗಿದ್ದ ಅಲೋಕ್ ವರ್ಮಾ ಕರೆಗಳ ಮೇಲೂ ಕಣ್ಗಾವಲು ಇಡಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

 ದಲೈ ಲಾಮಾ ಸಲಹೆಗಾರರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದ್ದರು: ವರದಿ ದಲೈ ಲಾಮಾ ಸಲಹೆಗಾರರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದ್ದರು: ವರದಿ

2018ರಲ್ಲಿ ಸರ್ಕಾರದ ಜೊತೆಗಿನ ಜಟಾಪಟಿ ಕಾರಣದಿಂದಾಗಿ ಅಲೋಕ್ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಫೋನ್ ಕರೆಗಳ ಮೇಲೆ ಕಣ್ಗಾವಲು ಇಡಲಾಗಿತ್ತು ಎಂದು ದಿ ವೈರ್ ಗುರುವಾರ ವರದಿ ಮಾಡಿದೆ.

ಪೆಗಾಸಸ್ ಬೇಹುಗಾರಿಕೆ ಆರೋಪಕ್ಕೆ ಆಧಾರವಿಲ್ಲ ಎಂದ ಐಟಿ ಸಚಿವರು ಪೆಗಾಸಸ್ ಬೇಹುಗಾರಿಕೆ ಆರೋಪಕ್ಕೆ ಆಧಾರವಿಲ್ಲ ಎಂದ ಐಟಿ ಸಚಿವರು

 Former CBI Chief Added To Pegasus List

ಅಕ್ಟೋಬರ್ 23ರಂದು ಅಲಕ್ ವರ್ಮಾ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಸಂಬಂಧಿಸಿದ 3 ದೂರವಾಣಿ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿತ್ತು. ವರ್ಮಾ ಅವರ ಪತ್ನಿ, ಮಗಳು ಮತ್ತು ಅಳಿಯ ನಂಬರ್‌ಗಳ ಕರೆಗಳ ಮೇಲೆ ನಿಗಾವಹಿಸಲಾಗಿತ್ತು ಎಂದು ವರದಿ ಹೇಳಿದೆ.

ನನ್ನ ಮೇಲೆಯೇ ಪೆಗಾಸಸ್ ಗೂಡಚರ್ಯ ಮಾಡಲಾಗಿತ್ತು: ಮಾಜಿ ಮುಖ್ಯಮಂತ್ರಿಯ ಗಂಭೀರ ಆರೋಪ!ನನ್ನ ಮೇಲೆಯೇ ಪೆಗಾಸಸ್ ಗೂಡಚರ್ಯ ಮಾಡಲಾಗಿತ್ತು: ಮಾಜಿ ಮುಖ್ಯಮಂತ್ರಿಯ ಗಂಭೀರ ಆರೋಪ!

ಅಲೋಕ್ ವರ್ಮಾ ಜೊತೆಗೆ ಸಿಬಿಐನ ಇನ್ನಿಬ್ಬರು ಹಿರಿಯ ಅಧಿಕಾರಿಗಳಾದ ರಾಕೇಶ್ ಆಸ್ಥಾನ ಮತ್ತು ಎ. ಕೆ. ಶರ್ಮಾ ಕರೆಗಳ ಮೇಲೂ ನಿಗಾವಹಿಸಲಾಗಿತ್ತು. ಪೆಗಾಸಸ್‌ ಸ್ಪೈವೇರ್ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಒಂದೊಂದೇ ಹೆಸರುಗಳು ಬಹಿರಂಗವಾಗುತ್ತಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್, ಕೇಂದ್ರ ಸಚಿವರು, ಹಲವಾರು ಪರ್ತಕರ್ತರ ಕರೆಗಳ ಮೇಲೆ ನಿಗಾವಹಿಸಿರುವ ಮಾಹಿತಿ ಈಗಾಗಲೇ ಬಹಿರಂಗವಾಗಿದೆ. ಪ್ರತಿಪಕ್ಷಗಳು ಇದನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ.

English summary
Former CBI chief Alok Verma was added to a list of targets for surveillance with the Israeli spyware Pegasus. CBI officials Rakesh Asthana and AK Sharma also in the list said report of the Wire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X