ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಆರೋಗ್ಯ ಸ್ಥಿತಿ ಗಂಭೀರ

|
Google Oneindia Kannada News

ಗುವಾಹಟಿ, ನ.22: ಕೊವಿಡ್ 19 ಪೀಡಿತ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಾಯ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಸದ್ಯ ವೆಂಟಿಲೇಟರ್ ನೆರವಿನಿಂದ ಉಸಿರಾಟ ಮಾಡುತ್ತಿದ್ದಾರೆ ಎಂದು ವೈದಾಧಿಕಾರಿಗಳು ಹೇಳಿದ್ದಾರೆ.

86 ವರ್ಷ ವಯಸ್ಸಿನ ಹಿರಿಯ ಕಾಂಗ್ರೆಸ್ ನಾಯಕ, ಅಸ್ಸಾಂ ಮಾಜಿ ಸಿಎಂ ತರುಣ್ ಗೊಗಾಯ್ ಅವರು ನವೆಂಬರ್ 2 ರಂದು ಕೊವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ಮತ್ತೆ ಆಸ್ಪತ್ರೆ ಸೇರಿದ್ದರು, ಎನ್ಐವಿ(ಮಷಿನ್ ವೆಂಟಿಲೇಟರ್)ನಲ್ಲಿದ್ದಾರೆ. ಎಂದು ಗುವಾಹಟಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ (ಜಿಎಂಸಿಎಚ್) ಅಧಿಕಾರಿ ಅಭಿಜಿತ್ ಶರ್ಮ ಹೇಳಿದ್ದಾರೆ.

ಭಾರತ; 24 ಗಂಟೆಯಲ್ಲಿ 45,209 ಹೊಸ ಕೋವಿಡ್ ಪ್ರಕರಣ ಭಾರತ; 24 ಗಂಟೆಯಲ್ಲಿ 45,209 ಹೊಸ ಕೋವಿಡ್ ಪ್ರಕರಣ

ಅಸ್ಸಾಂ ಆರೋಗ್ಯ ಸಚಿವ ಹಿಮಂತಾ ಬಿಸ್ವಾ ಶರ್ಮ ಅವರು ತರುಣ್ ಗೊಗಾಯ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿ, ತರುಣ್ ಅವರು ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಬಹು ಅಂಗಾಂಗ ವೈಫಲ್ಯ ಉಂಟಾಗಿದೆ, ಇಂಟ್ಯೂಬೇಷನ್ ವೆಂಟಿಲೇಟರ್ ನಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.

Former Assam CM Tarun Gogoi is on mechanical ventilation

ಮುಂದಿನ 48 ಗಂಟೆಗಳ ಕಾಲ ತೀವ್ರ ನಿಗಾದಲ್ಲಿರಿಸಲಾಗುವುದು, ಇನ್ನೊಂದು ಸುತ್ತಿನ ಡಯಾಲಿಸಿಸ್ ಆರಂಭಿಸಲು ವೈದ್ಯರು ಮುಂದಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸಿದರೆ ಮಾತ್ರ ಏನಾದರೂ ಆರೋಗ್ಯ ಸ್ಥಿತಿ ಸುಧಾರಣೆ ಸಾಧ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಆಗಸ್ಟ್ 25ರಂದು ಕೊವಿಡ್ 19 ಪಾಸಿಟಿವ್ ಎಂದು ಸೋಂಕಿಗೆ ಚಿಕಿತ್ಸೆ ಪಡೆಯಲು ಇದೇ ಆಸ್ಪತ್ರೆಗೆ ತರುಣ್ ಅವರನ್ನು ಸೇರಿಸಲಾಯಿತು. ಸುಮಾರು ಎರಡು ತಿಂಗಳುಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಅಕ್ಟೋಬರ್ 25ರಂದು ಬಿಡುಗಡೆಯಾಗಿದ್ದರು.

ಆದರೆ, ನವೆಂಬರ್ 2ರಂದು ಕೊವಿಡ್ 19 ನಂತರದ ದೇಹಾರೋಗ್ಯ ಸ್ಥಿತಿ ಸುಧಾರಿಸದೆ ಮತ್ತೊಮ್ಮೆ ಆಸ್ಪತ್ರೆಗೆ ಸೇರಬೇಕಾಯಿತು. ಮೂರು ಬಾರಿ ಸಿಎಂ ಗೊಗಾಯ್ ಅವರ ಆರೋಗ್ಯ ಸ್ಥಿತಿ ಸುಧಾರಣೆಗಾಗಿ ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದು, ದೆಹಲಿ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡುವ ಬಗ್ಗೆ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.

English summary
Former Chief Minister Tarun Gogoi's health condition is critical: Abhijeet Sharma, Superintendent, Gauhati Medical College and Hospital (GMCH), Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X