ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸೃಷ್ಟಿ ಬಿಟ್ಟಾಕಿ, ಇರುವ ಉದ್ಯೋಗವೇ ಕಡಿಮೆಯಾಗುತ್ತಿದೆ!

By Sachhidananda Acharya
|
Google Oneindia Kannada News

ಮುಂಬೈ, ಮಾರ್ಚ್ 29: ನಿರುದ್ಯೋಗ ಸಮಸ್ಯೆ ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದಕ್ಕೆ ಅಂಕಿ ಸಂಖ್ಯೆಗಳ ಸಮೇತ ಈ ವರದಿ ಕನ್ನಡಿ ಹಿಡಿಯುತ್ತಿದೆ.

2015-16ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಇರುವ ಉದ್ಯೋಗ ಶೇಕಡಾ 0.1 ಕಡಿಮೆಯಾಗಿದೆ ಮತ್ತು 2014-15ರಲ್ಲಿ ಶೇಕಡಾ 0.2 ಕಡಿಮೆಯಾಗಿದೆ ಎಂದು 'ಕ್ಲೆಮ್ಸ್ ಇಂಡಿಯಾ' (KLEMS India) ಹೇಳಿದೆ.

2 ಸಾವಿರ ಕೋಟಿ ರು. ಹೂಡಿಕೆ, 14 ಸಾವಿರ ಉದ್ಯೋಗ ಸೃಷ್ಟಿ2 ಸಾವಿರ ಕೋಟಿ ರು. ಹೂಡಿಕೆ, 14 ಸಾವಿರ ಉದ್ಯೋಗ ಸೃಷ್ಟಿ

ಭಾರತದ ಆರ್ಥಿಕತೆಯ ಉತ್ಫಾದನೆಯನ್ನು ಅಳೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ಷೆಮ್ಸ್ ಇಂಡಿಯಾ ಸಂಸ್ಥೆಯನ್ನು ನೇಮಕ ಮಾಡಿತ್ತು. ಇದೀಗ ಸಂಸ್ಥೆ ಈ ಅಂಕಿ ಅಂಶಗಳನ್ನು ಹೊರಹಾಕಿದೆ. ಆರ್.ಬಿ.ಐ ವೆಬ್ಸೈಟ್ ನಲ್ಲಿ ಈ ಅಂಕಿ ಅಂಶಗಳು ಲಭ್ಯ ಇದೆ.

Forget job growth, employment in India is declining

ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ, ಆಹಾರ ಉತ್ಪಾದನಾ ಕ್ಷೇತ್ರ, ಜವಳಿ, ಚರ್ಮೋದ್ಯಮ, ಪೇಪರ್, ಸಾರಿಗೆ ಸಲಕರಣೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ಪಾದನೆ ಕುಸಿತವಾಗಿದೆ.

ವಿಶೇಷ ಎಂದರೆ 2014-15ರಲ್ಲಿ ಶೇಕಡಾ 7.4 ಮತ್ತು 2015-16ರಲ್ಲಿ ಶೇಕಡಾ 8.2 ಜಿಡಿಪಿ ಬೆಳವಣಿಗೆ ಇದ್ದಾಗಲೂ ಉದ್ಯೋಗ ಕಡಿತವಾಗಿದೆ.

ಇದೇ ವೇಳೆ ಕೃಷಿ ಬಿಟ್ಟವರು ಎಲ್ಲಿ ಉದ್ಯೋಗ ಕಂಡುಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಇವರಲ್ಲಿ 2015-16ರಲ್ಲಿ ಶೇಕಡಾ 70ರಷ್ಟು ಜನರು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಇದು ನೀಡುತ್ತಿದೆ.

726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ726 ಹುದ್ದೆಗಳನ್ನು ಭರ್ತಿ ಮಾಡಲು ಆರ್ಜಿ ಆಹ್ವಾನಿಸಿದ ಕೆಎಸ್ಆರ್‌ಟಿಸಿ

ಇನ್ನು ಭಾರತದ ಯಾವ ವಲಯವೂ ಹೆಚ್ಚಿನ ಉದ್ಯೋಗದಾತ ಕ್ಷೇತ್ರವಾಗಿಯೇ ಇಲ್ಲ. 2015-16ರವರೆಗೆ ಕಳೆದ 10 ವರ್ಷಗಳಲ್ಲಿ ಉದ್ಯೋಗ ಪ್ರಮಾಣ ಕೇವಲ ಶೇಕಡಾ 0.53 ಹೆಚ್ಚಳವಾಗಿದೆ ಆಷ್ಟೆ. ಆದರೆ ಇದೀಗ ಕುಸಿತ ಕಂಡಿರುವುದು ಮತ್ತಷ್ಟು ಆತಂಕವನ್ನು ಹೊರಹಾಕಿದೆ.

2015-16ಲ್ಲೇ ಪರಿಸ್ಥಿತಿ ಹೀಗಿದ್ದರೆ 2017-18ರಲ್ಲಿ ಪರಿಸ್ಥಿತಿ ಏನಾಗಿರಬಹುದು ಎಂಬ ಮತ್ತಷ್ಟು ಆತಂಕ ಈ ವರದಿಯಲ್ಲಿ ಕಾಣಿಸಿಕೊಂಡಿದೆ.

English summary
Employment in the total Indian economy shrank by 0.1% in financial year 2015-16 and by 0.2% in 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X