ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

500 ಬಾರಿ Sorry, Sorry, Sorry: ಇದು ಪೊಲೀಸರೇ ಕೊಟ್ಟ ಶಿಕ್ಷೆ!

|
Google Oneindia Kannada News

ಡೆಹರಾಡೂನ್, ಏಪ್ರಿಲ್.13: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಮಹಾಮಾರಿಗೆ ಬೆದರಿ ಜನರು ಮನೆಯಲ್ಲೇ ಕುಳಿತಿದ್ದರೆ ಇದರ ಮಧ್ಯೆ ರಸ್ತೆ ರಸ್ತೆ ಸುತ್ತಿದ ವಿದೇಶಿ ಪ್ರಜೆಗೆ ಉತ್ತರಾಖಂಡ್ ಪೊಲೀಸರು ವಿಭಿನ್ನ ರೀತಿ ಶಿಕ್ಷೆ ನೀಡಿದ್ದಾರೆ.

ಉತ್ತರಾಖಂಡ್ ನ ರಿಶಿಕೇಶ್ ನಲ್ಲಿ ಭಾರತ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಿದೇಶಿ ಪ್ರಜೆಯಿಂದ 'I Didn't Follow Lockdown Rules, I Am Sorry' ಎಂದು 500 ಬಾರಿ ಬರೆಸುವ ಮೂಲಕ ವಿಭಿನ್ನ ಶಿಕ್ಷೆಯನ್ನು ನೀಡಿದ್ದಾರೆ.

ಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನ ಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನ

ಗಂಗಾ ನದಿ ತೀರದಲ್ಲಿ ವಿದೇಶಿ ಪ್ರಜೆಗಳು ಅಲೆದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ರೀತಿಯ ಶಿಕ್ಷೆಯನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Foreigners Writes 500 Times Sorry After Violation Of India Lockdown

ಸುಖಾಸುಮ್ಮನೆ ಅಲೆದಾಡಿದ್ದಕ್ಕೂ ಸ್ಪಷ್ಟನೆ:

ಇನ್ನು, ಉತ್ತರಾಖಂಡ್ ನಲ್ಲಿ ಸುಖಾಸುಮ್ಮನೆ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಪ್ರಶ್ನೆ ಮಾಡಿದಾಗ ತಾನು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ವಾದಿಸಿದ್ದಾರೆ. ಅಲ್ಲದೇ ನಿಯಮ ಸಡಲಿಕೆ ವೇಳೆಯಲ್ಲಿ ತಾವು ಹೊರಗಡೆ ಬಂದಿದ್ದೇನೆ ಎಂದಿದ್ದಾರೆ. ಆದರೆ ನಿಯಮ ಸಡಿಲಿಕೆ ಮಾಡುವುದು ಅಗತ್ಯ ವಸ್ತುಗಳ ಖರೀದಿಯ ಉದ್ದೇಶದಿಂದಲೇ ಹೊರತೂ ಸುಖಾಸುಮ್ಮನೆ ತಿರುಗಾಡುವುದಕ್ಕೆ ಅಲ್ಲ ಎಂದು ವಿದೇಶಿ ವ್ಯಕ್ತಿಗೆ ಪೊಲೀಸರು ತಿಳಿ ಹೇಳಿದ್ದಾರೆ. ನಂತರ ಮನೆಯಲ್ಲಿ ಇರುವಂತೆ ಸಲಹೆ ನೀಡಿ ವಿದೇಶಿ ಪ್ರಜೆಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.

English summary
Foreigners Writes 500 Times Sorry After Violation Of India Lockdown. Different Punishment From UttaraKhand Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X