ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದ್ರಾಬಾದ್ ಕೊವಿಡ್-19 ಲಸಿಕೆ ಕೇಂದ್ರಕ್ಕೆ ವಿದೇಶಿ ರಾಯಭಾರಿಗಳ ತಂಡ

|
Google Oneindia Kannada News

ಹೈದ್ರಾಬಾದ್, ಡಿಸೆಂಬರ್.03: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಸಂಶೋಧನೆ ಮತ್ತು ವಿತರಣೆ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಡಿಸೆಂಬರ್.09ರಂದು ವಿದೇಶಿ ರಾಯಭಾರಿಗಳು ಹೈದ್ರಾಬಾದ್ ನಲ್ಲಿರುವ ಕೊವಿಡ್-19 ಲಸಿಕೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ಕಳೆದ ಡಿಸೆಂಬರ್.04ರಂದು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಜಿನೇವಾ ಬಯೋಫಾರ್ಮಾಸೆಟಿಕಲ್ಸ್ ಲಿಮಿಟೆಡ್ ಕೇಂದ್ರಕ್ಕೆ 100 ಮಂದಿ ವಿದೇಶಿ ರಾಯಭಾರಿಗಳ ತಂಡವು ಭೇಟಿ ನೀಡಬೇಕಿತ್ತು. ಕೊವಿಡ್-19 ಲಸಿಕೆಗಳ ಅಭಿವೃದ್ಧಿ ಪ್ರಕ್ರಿಯೆ ಬಗ್ಗೆ ಪರಾಮರ್ಶೆ ನಡೆಸುವ ಈ ಕಾರ್ಯಕ್ರಮವನ್ನು ತದನಂತರದಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ವಿದೇಶಿ ರಾಯಭಾರಿ ತಂಡದ ಭೇಟಿ ಕಾರ್ಯಕ್ರಮವನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಡಿಸೆಂಬರ್.09ಕ್ಕೆ ಆಯೋಜಿಸಿದೆ.

ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?ಭಾರತದಲ್ಲಿ ಮೊದಲ ಕೊರೊನಾ ಲಸಿಕೆ ಯಾವುದು, ಸಿಗುವುದು ಯಾವಾಗ?

ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಅವರು ವಿದೇಶಿ ಮುಖ್ಯಸ್ಥರ ಜೊತೆಗೆ ನಡೆಸಿದ ಚರ್ಚೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೊವಿಡ್-19 ಲಸಿಕೆ ಉತ್ಪಾದನೆ ವಿಚಾರದಲ್ಲಿ ಜಾಗತಿಕ ಸಹಕಾರ ಮತ್ತು ಸಹಭಾಗಿತ್ವದ ದೃಷ್ಟಿಯಿಂದ ಕಾರ್ಯಕ್ರಮವನ್ನು ಭಾರತವು ಆಯೋಜಿಸಿದೆ.

Foreign Envoys To Visit Hyderabad On Dec 9 To See Indias Covid Vaccine Programme

ನವೆಂಬರ್.28ರಂದು ಪ್ರಧಾನಿ ಮೋದಿ ಪರಾಮರ್ಶೆ:

ಕಳೆದ ನವೆಂಬರ್.28ರಂದು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕೊರೊನಾವೈರಸ್ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಪ್ರಮುಖ ಮೂರು ಸಂಸ್ಥೆಗಳಿಗೆ ಭೇಟಿ ನೀಡಿದ್ದರು. ಕೊವಿಡ್-19 ಲಸಿಕೆ ಸಂಶೋಧನಾ ಪ್ರಕ್ರಿಯೆ ಯಾವ ಹಂತದಲ್ಲಿದೆ. ವೈದ್ಯಕೀಯ ಪ್ರಯೋಗಗಳು ಮತ್ತು ಲಸಿಕೆ ಸಂಶೋಧನೆಗೆ ಸಿದ್ಧತೆಗಳನ್ನು ಯಾವ ರೀತಿಯಲ್ಲಿ ಮಾಡಿಕೊಳ್ಳಲಾಗುತ್ತಿದೆ ಎನ್ನುವುದರ ಬಗ್ಗೆ ಪರಾಮರ್ಶೆ ನಡೆಸಿದ್ದರು.

ಕಳೆದ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೈದ್ರಾಬಾದ್ ವಾಯುಪಡೆ ನಿಲ್ದಾಣಕ್ಕೆ ತಲುಪಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಲ್ಲಿಂದ 20 ಕಿಲೋ ಮೀಟರ್ ದೂರದಲ್ಲಿರುವ ಭಾರತ್ ಬಯೋಟೆಕ್ ಲಸಿಕೆ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದರು. ಭಾರತ್ ಬಯೋಟೆಕ್ ಸಂಸ್ಥೆಯು ಸಂಶೋಧಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆ ಕುರಿತು ಪರಿಶೀಲನೆ ನಡೆಸಿದರು. ಸಂಸ್ಥೆಯ ಚೇರ್ ಮೆನ್ ಕೃಷ್ಣಾ ಎಲ್ಲಾ ಹಾಗೂ ಸಂಶೋಧಕರು ಮತ್ತು ಹಿರಿಯ ನಿರ್ವಹಣಾಧಿಕಾರಿಗಳ ಜೊತೆಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದರು.

Recommended Video

10 ಕೋಟಿ ಕೊಡ್ತೀನಿ ನನ್ನ ಬಿಡುಗಡೆ ಮಾಡಿ ಅಂತ ಹಟ | Shashikala | Oneindia Kannada

English summary
Foreign Envoys To Visit Hyderabad On Dec.9 To See India's Covid Vaccine Programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X