• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೋರ್ಬ್ಸ್ ಭವಿಷ್ಯದ ಪ್ರಭಾವಿಗಳ ಪಟ್ಟಿಯಲ್ಲಿ ಪ್ರಶಾಂತ್, ಕನ್ಹಯ್ಯ

|

ಬೆಂಗಳೂರು, ಜನವರಿ 07: ಮುಂದಿನ ದಶಕದಲ್ಲಿ ಅತ್ಯಂತ ಪ್ರಭಾವ ಬೀರಬಲ್ಲ ಟಾಪ್ 20 ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಇಂಡಿಯಾ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಬಿಹಾರದಿಂದ ಇಬ್ಬರು ಸೇರಿದ್ದಾರೆ

ಬಿಹಾರ ಮೂಲದ ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ವಿಶ್ವದ 20 ಭವಿಷ್ಯದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಫೋರ್ಬ್ಸ್ ಇಂಡಿಯಾ ಮ್ಯಾಗಝಿನ್ ಪ್ರಕಟಿಸಿದೆ. ಮುಂದಿನ ದಶಕದಲ್ಲಿನ ನಿರ್ಣಾಯಕ ವ್ಯಕ್ತಿತ್ವಗಳಾಗಬಹುದು ಎಂದು ಹೇಳಲಾಗಿದೆ.

ಜಗತ್ತಿನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್

ಪ್ರಶಾಂತ್ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಂ ಬಳಿಯ ಗ್ರಾಮದವರಾದರು. ಕನ್ಹಯ್ಯ ಅವರು ಬೇಗುಸರಾಯಿ ಜಿಲ್ಲೆಯ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಇವರಿಬ್ಬರಲ್ಲದೆ ಹರ್ಯಾಣದ ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ, ಟಿಎಂಸಿಯ ಸಂಸದೆ ಮಹುವಾ ಮೊಯಿತ್ರಾ, ಉದ್ಯಮಿ ಆದಿ ಗಾದ್ರೆಜ್ ಅವರ ಗಾದ್ರೆಜ್ ಕುಟುಂಬ ಮತ್ತು ಮಿಚೆಲಿಯನ್ ಸ್ಟಾರ್ ಪಡೆದ ಮೊದಲ ಭಾರತಿಯ ಮಹಿಳೆ, ಶೆಫ್ ಗರಿಮಾ ಅರೋರಾ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತೀಯ ಮೂಲದ ಗಣ್ಯರಾದ ಅಮೆರಿಕ ಸಂಜಾತ ಹಾಸ್ಯ ಕಲಾವಿದ ಮತ್ತು ರಾಜಕೀಯ ವೀಕ್ಷಕ ಹಸನ್ ಮಿನ್ಹಾಜ್ ಮತ್ತು ಆರ್ಸೆಲರ್ ಮಿತ್ತಲ್ ಯುರೋಪ್‌ನ ಸಿಇಒ ಆದಿತ್ಯ ಮಿತ್ತಲ್ ಅವರನ್ನು ಪಟ್ಟಿಯಲ್ಲಿ ಕಾಣಬಹುದು.

ಜಾಗತಿಕವಾಗಿ ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸ, ಸೌದಿ ಅರೇಬಿಯಾದ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್, ನ್ಯೂಜಿಲೆಂಡ್ ನ ಪ್ರಧಾನಿ ಜಸಿಂಡಾ ಅರ್ಡೆರ್ನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಫಿನ್ಲೆಂಡ್ ಪ್ರಧಾನಿ ಸನಾ ಮರೀನ್, ಅಮೆರಿಕದ ಸಂಸದೆ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಮತ್ತು ಯುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2011ರಲ್ಲಿ ಗುಜರಾತ್ ನಲ್ಲಿ ಮೋದಿ-ಬಿಜೆಪಿ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್ ಕಿಶೋರ್ 2014ರ ಲೋಕಸಭೆ ಚುನಾವಣೆಯಲ್ಲೂ ನೆರವಾಗಿದ್ದರು. ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಸಂಸ್ಥೆಯ ಮಾರ್ಗದರ್ಶಕರಾಗಿರುವ ಪ್ರಶಾಮ್ತ್ ಅವರು ಸದ್ಯ ಬಿಹಾರದಲ್ಲಿ ಜೆಡಿಯು ಅಧಿಕಾರಕ್ಕೇರುವಂತೆ ಮಾಡಿದ್ದಲ್ಲದೆ, ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದಾರೆ.

ಫೋರ್ಬ್ಸ್ ವಿಶ್ವದ ಅತ್ಯಂತ ಪ್ರಭಾವಿ ನಾಯಕರು: ಮೋದಿಗೆ ಎಷ್ಟನೇ ಸ್ಥಾನ?

2016ರಲ್ಲಿ ದೇಶದ್ರೋಹದ ಆರೋಪ ಹೊತ್ತಿದ್ದ ಕನ್ಹಯ್ಯ ಕುಮಾರ್ ಅವರು ವಿದ್ಯಾರ್ಥಿ ಸಂಘಟನೆ ನಾಯಕರಾಗಿ ಬೆಳೆದು, ರಾಜಕೀಯಕ್ಕೆ ಕಾಲಿಟ್ಟವರು. 2019ರ ಲೋಕಸಭೆ ಚುನಾವಣೆಯಲ್ಲಿ ಬೇಗುಸರಾಯಿಯಲ್ಲಿ ಸ್ಪರ್ಧಿಸಿ, ಶೇ 22 ರಷ್ಟು ಮತಗಳಿಸಿದ್ದರು. ಮೋದಿ ಸರ್ಕಾರದ ನೀತಿ, ನಿಯಮವನ್ನು ಕಾಲಕಾಲಕ್ಕೆ ಪ್ರಶ್ನಿಸುತ್ತಾ ಬಂದಿರುವ ಕನ್ಹಯ್ಯ ಅವರನ್ನು ಮುಂದಿನ ದಶದಕ ಪ್ರಭಾವಿ ವ್ಯಕ್ತಿ ಎಂದು ಫೋರ್ಬ್ಸ್ ಇಂಡಿಯಾ ಹೆಸರಿಸಿದೆ.

English summary
Forbes list of World's top 20 future powerful people includes political strategist Prashanth Kishore, former JNUSU president Kanhaiya Kumar find place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X