ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಬ್ಸ್‌ ಭಾರತದ ಶ್ರೀಮಂತರ ಪಟ್ಟಿ ಪ್ರಕಟ: ಹಲವು ಅಚ್ಚರಿಯ ಹೆಸರುಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ಭಾರತದ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು ಮುಖೇಶ್ ಅಂಬಾನಿ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಇದರ ಹೊರತಾಗಿಯೂ ಈ ಬಾರಿಯ ಪಟ್ಟಿಯಲ್ಲಿ ಸಾಕಷ್ಟು ಕುತೂಹಲದ ಅಂಶಗಳು ಇವೆ.

ರಿಲಯನ್ಸ್‌ ಸಮೂಹ ಮಾಲೀಕ ಮುಖೇಶ್ ಅಂಬಾನಿ ಅವರು 365 ಲಕ್ಷ ಕೋಟಿ ಸಂಪತ್ತು ಹೊಂದುವ ಮೂಲಕ ಭಾರತದ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ.

ಎರಡನೇ ಸ್ಥಾನವನ್ನು ಗೌತಮ್ ಅದಾನಿ ಪಡೆದುಕೊಂಡಿದ್ದು, ಒಂದೇ ವರ್ಷದಲ್ಲಿ ಎಂಟು ಸ್ಥಾನ ಮೇಲೇರಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಗೌತಮ್ ಅದಾನಿಯ ಒಟ್ಟು ಆಸ್ತಿ 1 ಲಕ್ಷ ಕೋಟಿಗೂ ಹೆಚ್ಚು.

ಮೂರನೇ ಸ್ಥಾನವನ್ನು ಅಶೋಕ್ ಲೈಲಾಂಡ್ ಸಂಸ್ಥೆಯ ಮಾಲೀಕರಾದ ಹಿಂದೂಜಾ ಸಹೋದರರು ಹೊಂದಿದ್ದಾರೆ. ಇವರ ಒಟ್ಟು ಆಸ್ತಿಯೂ ಸಹ 1 ಲಕ್ಷ ಕೋಟಿಗೂ ಹೆಚ್ಚು ಇದೆ, ಆದರೆ ಗೌತಮ್ ಅದಾನಿಗಿಂತಲೂ ಸ್ವಲ್ಪವೇ ಕಡಿಮೆ ಸಂಪತ್ತು ಹೊಂದಿದ್ದಾರೆ.

ಪಲ್ಲೋಂಜಿ ಮಿಸ್ತ್ರಿ ನಾಲ್ಕನೇ ಸ್ಥಾನದಲ್ಲಿ

ಪಲ್ಲೋಂಜಿ ಮಿಸ್ತ್ರಿ ನಾಲ್ಕನೇ ಸ್ಥಾನದಲ್ಲಿ

ಶಪೂರ್ಜಿ ಪಲ್ಲೋಂಜಿ ಗ್ರೂಪ್‌ನ ಪಲ್ಲೋಂಜಿ ಮಿಸ್ತ್ರಿ ಅವರು ಸಹ ಒಂದು ಲಕ್ಷ ಕೋಟಿಗಿಂತಲೂ ಅಧಿಕ ಆಸ್ತಿಯನ್ನು ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಅವರು ಐದನೇ ಸ್ಥಾನದಲ್ಲಿದ್ದು ಅವರ ಒಟ್ಟು ಆಸ್ತಿ ಒಂದು ಲಕ್ಷ ಕೋಟಿಗೆ ಸ್ವಲ್ಪವೇ ಕಡಿಮೆ ಇದೆ.

ಸತತ 12ನೇ ವರ್ಷ ಮುಖೇಶ್ ಅಂಬಾನಿ ಟಾಪ್‌

ಸತತ 12ನೇ ವರ್ಷ ಮುಖೇಶ್ ಅಂಬಾನಿ ಟಾಪ್‌

ಮುಖೇಶ್ ಅಂಬಾನಿ ಅವರು ಸತತ 12 ನೇ ವರ್ಷ ಭಾರತದ ದೊಡ್ಡ ಶ್ರೀಮಂತ ಪಟ್ಟವನ್ನು ಕಾಯ್ದುಕೊಂಡಿದ್ದಾರೆ. ವಿಶೇಷವೆಂದರೆ ಭಾರತದ ಎರಡನೇ ಶ್ರೀಮಂತ ಪಟ್ಟಿಯಲ್ಲಿರುವವರಿಗೂ ಮುಖೇಶ್‌ ಅಂಬಾನಿಗೂ ಅಜಗಜಾಂತರ ಅಂತರವಿದ್ದು, ಅಂಬಾನಿಯನ್ನು ಹಿಂದಿಕ್ಕುವುದು ಸುಲಭದ ಮಾತಲ್ಲ.

ಭಾರಿ ಕುಸಿತ ಕಂಡಿರುವ ಅಜೀಮ್ ಪ್ರೇಮ್‌ಜಿ

ಭಾರಿ ಕುಸಿತ ಕಂಡಿರುವ ಅಜೀಮ್ ಪ್ರೇಮ್‌ಜಿ

ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಸಾಫ್ಟ್‌ವೇರ್ ದಿಗ್ಗಜ ಅಜೀಮ್ ಪ್ರೇಮ್‌ಜೀ ಭಾರಿ ಕುಸಿತ ಕಂಡಿದ್ದು 17 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ತಮ್ಮ ಪಾಲಿನ ಆಸ್ತಿಯನ್ನು ದಾನ ಮಾಡಿದ ಕಾರಣ ಹೀಗೆ ಹಠಾತ್ ಕುಸಿತ ಕಂಡಿದ್ದಾರೆ.

ಹೊಸ ಹೆಸರುಗಳು ಸಹ ಸೇರ್ಪಡೆಗೊಂಡಿವೆ

ಹೊಸ ಹೆಸರುಗಳು ಸಹ ಸೇರ್ಪಡೆಗೊಂಡಿವೆ

ನೂರು ಶ್ರೀಮಂತರ ಪಟ್ಟಿಯಲ್ಲಿ ಕೆಲವರು ಹೊಸಬರು ಸಹ ಸೇರಿಕೊಂಡಿದ್ದಾರೆ. ಬೈಜೂಸ್ ಆಪ್‌ನ ಮಾಲೀಕ ಮತ್ತು ಸಿಇಒ ಬೈಜೂ ರವಿಂದ್ರನ್ 72 ನೇ ಸ್ಥಾನದಲ್ಲಿದ್ದಾರೆ. ಹಲ್ದಿರಾಮ್ ಸ್ನ್ಯಾಕ್ಸ್‌ನ ಮನೋಹರ್ ಲಾಲ್ ಮತ್ತು ಮಧುಸೂದನ್ ಅಗರ್ವಾಲ್ 86 ನೇ ಸ್ಥಾನದಲ್ಲಿದ್ದಾರೆ.

ಶ್ರೀಮಂತಿಕೆಯಲ್ಲಿ ಇಳಿಕೆ

ಶ್ರೀಮಂತಿಕೆಯಲ್ಲಿ ಇಳಿಕೆ

ಆದರೆ ಫೋರ್ಬ್ಸ್‌ ಹೇಳಿರುವ ಪ್ರಕಾರ ದೇಶದ ಶ್ರೀಮಂತರ ಶ್ರೀಮಂತಿಕೆಯಲ್ಲಿ ಸಹ ಇಳಿಕೆ ಆಗಿದೆ. ಶ್ರೀಮಂತರ ಆಸ್ತಿ, ಹಣದಲ್ಲಿ 8% ಇಳಿಕೆ ಆಗಿದೆಯೆಂದು ಫೋರ್ಬ್ಸ್‌ ಹೇಳಿದೆ.

English summary
Forbes release 100 top richest people of India. Mukesh Ambani tops the list for continues 12 year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X