• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ ಪ್ರಧಾನಿ ಪಠಿಸಿದ ಶಾಂತಿ ಮಂತ್ರ: ಯಾವ ಆಂಗಲ್ ನಿಂದ ನಗೋಣ!

|
   Surgical Strike 2: ಪಾಕ್ ಪ್ರಧಾನಿ ಪಠಿಸಿದ ಮಂತ್ರ: ಯಾವ ಆಂಗಲ್ ನಿಂದ ನಗೋಣ! | Oneindia Kannada

   ಪಾಕಿಸ್ತಾನದ ಯುದ್ದ ವಿಮಾನ ಎಫ್ 16 ಅನ್ನು ಬೆನ್ನಟ್ಟುತ್ತಾ ಸಾಗಿ, ಪಾಕಿಸ್ತಾನದ ನೆಲದಲ್ಲಿ ಬಂಧನಕ್ಕೊಳಗಾದ ನಮ್ಮ ಹೆಮ್ಮೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

   ತಾಯ್ನಾಡಿಗೆ ಆಗಮಿಸುತ್ತಿರುವ ನಮ್ಮ ಹೆಮ್ಮೆಯ ಕುವರನನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಾ, ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ಕರೆಯಲಾಗಿದ್ದ ಜಂಟಿ ಅಧಿವೇಶವನ್ನು ಉದ್ದೇಶಿಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಡಿದ ಮಾತುಗಳನ್ನು ಒಮ್ಮೆ ಅವಲೋಕಿಸೋಣ.

   ಇದಕ್ಕೂ ಮೊದಲು, ಕೆಲವು ದಿನಗಳ ಹಿಂದೆ, ತಾವೇ ಪೋಷಿಸುತ್ತಿರುವ ಉಗ್ರ ಹಫೀಜ್ ಸಯೀದ್ ತನ್ನದೇ ರಾಷ್ಟ್ರದ ಬಗ್ಗೆ ಕೆಲವೊಂದು ಮುತ್ತಿನಂತ ಮಾತನ್ನು ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಡಿದ್ದಾನೆ. ಅವನ ಪ್ರಕಾರ, ಪಾಕಿಸ್ತಾನ ಆರ್ಥಿಕವಾಗಿ ಬರ್ಬಾದ್ ಆಗಿ ಹೋಗಿದೆ, ನಮ್ಮಲ್ಲಿ ಸಿಸ್ಟಂ ಅನ್ನೋದೇ ಇಲ್ಲ. ಎಲ್ಲದಕ್ಕೂ ಅರಬ್, ಅಮೆರಿಕಾ ದೇಶವನ್ನು ಪಾಕ್ ನಂಬಿಕೊಂಡಿದೆ.

   'ಸದ್ಭಾವನೆ'ಗಾಗಿ ಮಾಜಿ ಪತ್ನಿಯರಿಂದ ಹೊಗಳಿಸಿಕೊಂಡ ಇಮ್ರಾನ್

   ವೈಯಕ್ತಿಕವಾಗಿ ಇಮ್ರಾನ್ ಖಾನ್, ಪಾಕಿಸ್ತಾನ ಕಂಡ ಇತರ ಪ್ರಧಾನಿಯಂತಲ್ಲ. ಅವರಿಗೆ ತನ್ನ ದೇಶವನ್ನು ಮುನ್ನಲೆಗೆ ತರಬೇಕು ಎನ್ನುವ ಉದ್ದೇಶ ಇದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ವಿಚಾರ. ಆದರೆ, ಇಮ್ರಾನ್, ದಿ. ಬೇನಜಿರ್, ಮುಷರಫ್, ಷರೀಫ್, ಯಾರೇ ಇರಲಿ, ಇವರನ್ನೆಲ್ಲಾ ಬದಿಗೊತ್ತಿ ಆಡಳಿತ ನಡೆಸುವ ಅಲ್ಟಿಮೇಟ್ ಶಕ್ತಿ ISI ಎನ್ನುವುದು ಲೋಕಕ್ಕೆ ಗೊತ್ತಿರುವ ವಿಚಾರ.

   ಎಲ್ಟಿಟಿಇ ಹಿಂದೆ ಭಾರತ, ಶ್ರೀಲಂಕಾದಲ್ಲಿ ನಡೆಸಿದ ದಾಳಿಯನ್ನು ಉಲ್ಲೇಖಿಸಿದ್ದರು

   ಎಲ್ಟಿಟಿಇ ಹಿಂದೆ ಭಾರತ, ಶ್ರೀಲಂಕಾದಲ್ಲಿ ನಡೆಸಿದ ದಾಳಿಯನ್ನು ಉಲ್ಲೇಖಿಸಿದ್ದರು

   ಇಮ್ರಾನ್ ತಮ್ಮ ಭಾಷಣದಲ್ಲಿ ತಮಿಳು ಉಗ್ರರು (ಎಲ್ಟಿಟಿಇ) ಹಿಂದೆ ಭಾರತ, ಶ್ರೀಲಂಕಾದಲ್ಲಿ ನಡೆಸಿದ ದಾಳಿಯನ್ನು ಉಲ್ಲೇಖಿಸಿದ್ದರು, ಅವರೆಲ್ಲಾ ಹಿಂದೂಗಳು ಎಂದು ಒತ್ತಿ ಹೇಳಿದರು. ಅವರ ಪ್ರಕಾರ, ಅವರಿಗೆಲ್ಲಾ ಜಾತಿಗಿಂತ ಜಾಸ್ತಿ ಗುರಿ ಮುಖ್ಯ ಎನ್ನುವುದು ಇಮ್ರಾನ್ ಅಭಿಪ್ರಾಯ. ಪುಲ್ವಾಮಾದಲ್ಲಿ ಯುವಕ ಆತ್ಮಾಹತ್ಯಾ ದಾಳಿಗೆ ಕಾಶ್ಮೀರದಲ್ಲಿನ ಪ್ರತ್ಯೇಕ ರಾಷ್ಟದ ಕೂಗು ಕಾರಣ ಎಂದು ಪರೋಕ್ಷವಾಗಿ ಹೇಳಿದರು. ಆ ಯುವಕನನ್ನು ಬ್ರೈನ್ ವಾಷ್ ಮಾಡಿದ ರಾಸ್ಕಲ್ ಗಳು ಯಾರು ಎನ್ನುವುದು ಇಮ್ರಾನ್ ಅವರಿಗೆ ಗೊತ್ತಿಲ್ಲವೇ? ಘಟನೆಯ ಜವಾಬ್ದಾರಿಯನ್ನು ಹೊತ್ತ ಜೈಶ್ ಉಗ್ರ ಸಂಘಟನೆ ಎಲ್ಲಿಂದ ಕಾರ್ಯ ನಿರ್ವಹಿಸುತ್ತಿದೆ? ಫೈಸ್ಲಾಬಾದ್, ರಾವಲ್ಪಿಂಡಿ, ಪೇಷಾವರದಲ್ಲಿರುವ ಉಗ್ರರ ಕಾರ್ಖಾನೆಯ ಬಗ್ಗೆ ಇಮ್ರಾನ್ ಚುನಾವಣಾಪೂರ್ವದಲ್ಲಿ ಭಾಷಣ ಬಿಗಿಯುತ್ತಿರಲಿಲ್ಲವೇ?

   ಅಮೆರಿಕ, ಸೌದಿ ಅರೇಬಿಯಾ, ಯುಎಇ ಒತ್ತಡಕ್ಕೆ ಮಣಿದು ಅಭಿನಂದನ್ ಬಿಡುಗಡೆ

   ಬ್ರಿಟಿಷರ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಟಿಪ್ಪು ಸುಲ್ತಾನ್ ನಮ್ಮ ಹೀರೋ

   ಬ್ರಿಟಿಷರ ಜೊತೆ ಹೋರಾಡಿ ವೀರಮರಣವನ್ನಪ್ಪಿದ ಟಿಪ್ಪು ಸುಲ್ತಾನ್ ನಮ್ಮ ಹೀರೋ

   ಇಮ್ರಾನ್ ತಮ್ಮ ಭಾಷಣದಲ್ಲಿ, ನಾವು ಪಾಕಿಸ್ತಾನಿಯರು ಇಬ್ಬರು ರಾಜರ ಚರಿತ್ರೆಯನ್ನು ಓದಿದ್ದೇವೆ. ಒಬ್ಬರು ಬಾದಶಾ ಜಫರ್ ಇನ್ನೊಬ್ಬರು ಟಿಪ್ಪುಸುಲ್ತಾನ್. ಬ್ರಿಟಿಷರು ಇಬ್ಬರೂ ಆ ರಾಜರಿಗೆ ಗುಲಾಮರಾಗಿತ್ತೀರೋ ಅಥವಾ ಸಾಯುತ್ತೀರೋ ಎನ್ನುವ ಆಯ್ಕೆಯನ್ನು ನೀಡಿತ್ತು. ಜಫರ್ ಗುಲಾಮಗಿರಿಯನ್ನು ಒಪ್ಪಿಕೊಂಡರು. ಟಿಪ್ಪುಸುಲ್ತಾನ್, ಬ್ರಿಟಿಷರ ಜೊತೆ ಹೋರಾಡಿ ವೀರಮರಣವನ್ನಪ್ಪಿದ. ನಮ್ಮ ನೆಲದ ಹೀರೋ ಟಿಪ್ಪು ಸುಲ್ತಾನ್ ಎಂದು ಇಮ್ರಾನ್ ಖಾನ್ ಹೇಳಿದರು. ಆದರೆ, ಟಿಪ್ಪು ಸುಲ್ತಾನ್ ರೀತಿಯಲ್ಲಿ ಪಾಕಿಸ್ತಾನಿಯರು ಇದ್ದಾರಾ ಅಥವಾ ಅಲ್ಲಿನ ಜನತೆಯಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳಲು ಇಮ್ರಾನ್ ಈ ಡೈಲಾಗ್ ಹೊಡೆದರಾ?

   ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್

   ಇಮ್ರಾನ್ ಖಾನ್ ಅವರನ್ನು ಕುಣಿಸುತ್ತಿರುವುದು ಇನ್ನೊಬ್ಬರು

   ಇಮ್ರಾನ್ ಖಾನ್ ಅವರನ್ನು ಕುಣಿಸುತ್ತಿರುವುದು ಇನ್ನೊಬ್ಬರು

   ಪುಲ್ವಾಮಾ ಘಟನೆಯ ಎರಡು ದಿನಗಳ ನಂತರ ಇಮ್ರಾನ್ ಖಾನ್ ಸಾಕ್ಷಿ ಕೇಳಿದಾಗಲೇ ಅವರನ್ನು ಕುಣಿಸುತ್ತಿರುವುದು ಇನ್ನೊಬ್ಬರು ಎಂದು ಗೊತ್ತಾಗಿ ಹೋಯಿತು. ಪಾಕ್ ಭೇಟಿಯ ನಂತರ ಅರಬ್ ದೊರೆ, ಭಾರತಕ್ಕೆ ಬರುವ ಕಾರ್ಯಕ್ರಮವಿತ್ತು. ಆದರೆ ಪಾಕ್ ನೆಲೆಯಿಂದ ವಿಮಾನ ಪ್ರವೇಶಕ್ಕೆ ಭಾರತ ಅನುಮತಿ ನೀಡದೇ ಇದ್ದಾಗ, ದೊರೆ, ರಿಯಾದ್ ಗೆ ವಾಪಸ್ ಹೋಗಿ ಅಲ್ಲಿಂದ ಭಾರತಕ್ಕೆ ಬಂದರು. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಹೋಗಿದ್ದ ಪಾಕಿಸ್ತಾನಕ್ಕೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನನ್ನು ಬೆತ್ತಲೆ ಮಾಡಲು ಹೊರಟಿದೆ ಎನ್ನುವ ಸೂಚನೆ ಸಿಕ್ಕಿದ್ದು ಇಲ್ಲೇ.

   ಪಾಕಿಸ್ತಾನ ಪ್ರತಿರೋಧ ತೋರಿದಾಗ, ಭಾರತ ತೋರಿದ ಆಕ್ರಮಣಕಾರಿ ಧೋರಣೆ

   ಪಾಕಿಸ್ತಾನ ಪ್ರತಿರೋಧ ತೋರಿದಾಗ, ಭಾರತ ತೋರಿದ ಆಕ್ರಮಣಕಾರಿ ಧೋರಣೆ

   ಸರ್ಜಿಕಲ್ ಸ್ಟ್ರೈಕ್ - 2 ಮರುದಿನ ಪಾಕಿಸ್ತಾನ ಪ್ರತಿರೋಧ ತೋರಿದಾಗ, ಭಾರತ ತೋರಿದ ಆಕ್ರಮಣಕಾರಿ ಧೋರಣೆ, ಪಾಕಿಸ್ತಾನವನ್ನು ಶಾಂತಿ ಮಂತ್ರ ಜಪಿಸುವಂತೆ ಮಾಡಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಒಂದು ವೇಳೆ ಸಂಘರ್ಷ ತಾರಕಕ್ಕೇರಿ, ಯುದ್ದದ ಸನ್ನಿವೇಶ ಏನಾದರೂ ಉಂಟಾದರೆ, ಈಗಿರುವ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯಲ್ಲಿ ಐದರಿಂದ ಆರುದಿನ ಮಾತ್ರ ಯುದ್ದ ಮುಂದುವರಿಸಿಕೊಂಡು ಹೋಗುವ ಶಕ್ತಿ ಪಾಕಿಸ್ತಾನಕ್ಕೆ ಇರುವುದು ಎನ್ನುವುದು ಡಿಫೆನ್ಸ್ ಎಕ್ಸ್ ಪರ್ಟ್ ಗಳ ಮಾತು. ಅದಕ್ಕೇ ಈಗ ಈ ಶಾಂತಿಮಂತ್ರ..

   ಯುದ್ದ ಖೈದಿಗಳನ್ನು ಜಿನೀವಾ ಒಪ್ಪಂದದ ಪ್ರಕಾರ, ಗೌರವಯುತವಾಗಿ ಬಿಡುಗಡೆ ಮಾಡಬೇಕು

   ಯುದ್ದ ಖೈದಿಗಳನ್ನು ಜಿನೀವಾ ಒಪ್ಪಂದದ ಪ್ರಕಾರ, ಗೌರವಯುತವಾಗಿ ಬಿಡುಗಡೆ ಮಾಡಬೇಕು

   ಯುದ್ದ ಖೈದಿಗಳನ್ನು ಜಿನೀವಾ ಒಪ್ಪಂದದ ಪ್ರಕಾರ, ಗೌರವಯುತವಾಗಿ ಬಿಡುಗಡೆ ಮಾಡಬೇಕು ಎನ್ನುವ ಕಾನೂನು ಇದ್ದರೂ, ಮುಸ್ಲಿಂ ಮೂಲಭೂತವಾದಿಗಳೇ ಪಾಕಿಸ್ತಾನದ ಆಯಕಟ್ಟಿನ ಜಾಗದಲ್ಲಿ ತುಂಬಿದ್ದರೂ, ಜಿನೀವಾ ಒಪ್ಪಂದದ ಹೆಸರಿನಲ್ಲಿ ಶಾಂತಿ ಮಂತ್ರ ಜಪಿಸುವ ಅನಿವಾರ್ಯತೆ ಪಾಕಿಸ್ತಾನಕ್ಕೆ ಸದ್ಯ ಇದೆ. ಯಾಕೆಂದರೆ, ಒಂದು ವೇಳೆ ಅಮೆರಿಕಾ, ಗಲ್ಫ್ ರಾಷ್ಟ್ರಗಳು, ಅಂತರಾಷ್ಟ್ರೀಯ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಆರ್ಥಿಕ ದಿಗ್ಬಂಧನ ಹೇರಿದರೆ, ಪಾಕ್ ಇನ್ನಷ್ಟು ದುರ್ಬಲಗೊಳ್ಳಲಿದೆ ಎನ್ನುವುದು ಅಲ್ಲಿನ ಮೂಲಭೂತವಾದಿಗಳಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.

   ಇಮ್ರಾನ್ ಖಾನ್, ಮೋದಿ ಜೊತೆ ದೂರವಾಣಿ ಮೂಲಕ ಮಾತುಕತೆಗೆ ಯತ್ನಿಸಿದ್ದಾರೆ

   ಇಮ್ರಾನ್ ಖಾನ್, ಮೋದಿ ಜೊತೆ ದೂರವಾಣಿ ಮೂಲಕ ಮಾತುಕತೆಗೆ ಯತ್ನಿಸಿದ್ದಾರೆ

   ಎರಡೆರಡು ಬಾರಿ ಇಮ್ರಾನ್ ಖಾನ್, ಮೋದಿ ಜೊತೆ ದೂರವಾಣಿ ಮೂಲಕ ಮಾತುಕತೆಗೆ ಯತ್ನಿಸಿದ್ದಾರೆ. ಮೊದಲು, ನಿಮ್ಮ ನೆಲದಲ್ಲಿನ ಉಗ್ರರನ್ನು ಮಟ್ಟಹಾಕಿ, ಆಮೇಲೆ ಏನಿದ್ದರೂ ಮಾತುಕತೆ ಎನ್ನುವ ಖಡಕ್ ಸಂದೇಶವನ್ನು ಭಾರತ ರವಾನಿಸಿದೆ. ಭೂ, ನೌಕಾ ಮತ್ತು ವಾಯುಪಡೆಯ ಮುಖ್ಯಸ್ಥರ ಜಂಟಿ ಪತ್ರಿಕಾಗೋಷ್ಟಿ ನಡೆಸಿ, ಎಚ್ಚರಿಕೆ ನೀಡಿದಾಗ, ಪಾಕ್ ಇನ್ನಷ್ಟು ಪತರುಗೊಟ್ಟಿತು. ಒಂದೆಡೆ ಪಾಕ್ ಶಾಂತಿ ಮಂತ್ರ ಜಪಿಸುತ್ತಿದ್ದರೆ, ಭಾರತ ಸೇನೆಯನ್ನು ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ಸೂಚಿಸಿತು. ಇಮ್ರಾನ್, ಪಾಕ್ ಕಂಡ ಇತರ ಪ್ರಧಾನಿಗಳಂತೆ ಅಲ್ಲದೇ ಇರಬಹುದು, ಆದರೆ ಅಭಿನಂದನ್ ಬಿಡುಗಡೆಯ ವಿಚಾರದಲ್ಲಿ ಗೆದ್ದದ್ದು ಭಾರತದ ರಾಜತಾಂತ್ರಿಕ ನಡೆ. ಇಮ್ರಾನ್ ಖಾನ್ ಅವರನ್ನು ಶಾಂತಿಯ ದೂತನಂತೆ ಭಾರತದಲ್ಲಿರುವ ಪಾಕ್ ಪ್ರೇಮಿಗಳು ಏನು ಕಾಣುತ್ತಿದ್ದಾರೋ, ಅವರಿಗೂ ಗೊತ್ತು, ಪಾಕಿಸ್ತಾನದಲ್ಲಿ ಪ್ರಧಾನಿ ಯಾರೇ ಇರಲಿ, ಅಲ್ಲಿ ನಡೆಯುವುದು ಐಎಸ್ಐ ಮಾತು ಎನ್ನುವುದು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   For peace gesture releasing Indain Wing Commander Abhinandan, Pak PM Imran Khan: What is the exact reason.Is it because of international pressure or real peace Pak wants.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more