ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಬಾರಿಗೆ ಲಡಾಖ್‌ಗೆ ಮಹಿಳಾ ವೈದ್ಯರನ್ನು ನೇಮಿಸಿದ ಐಟಿಬಿಪಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 08 : ಇದೇ ಮೊದಲ ಬಾರಿಗೆ ಐಟಿಬಿಪಿ ಲಡಾಖ್‌ನಂತಹ ಪ್ರದೇಶಗಳಿಗೆ ಮಹಿಳಾ ವೈದ್ಯರನ್ನು ನಿಯೋಜನೆ ಮಾಡಿದೆ. ಗಡಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಮಾರ್ಗಸೂಚಿಯನ್ನು ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ಕಳೆದ ವಾರ ಲಡಾಖ್‌ ಕಣಿವೆ ಭಾಗಕ್ಕೆ ಪಡೆಯನ್ನು ನಿಯೋಜನೆ ಮಾಡಿದೆ. ಇದರಲ್ಲಿ ಮಹಿಳಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಇದ್ದಾರೆ.

ಲಡಾಖ್ ಪ್ರಸ್ತುತ ಸ್ಥಿತಿ ತುಂಬಾ ಗಂಭೀರವಾಗಿದೆ: ಸಚಿವ ಜೈ ಶಂಕರ್ ಲಡಾಖ್ ಪ್ರಸ್ತುತ ಸ್ಥಿತಿ ತುಂಬಾ ಗಂಭೀರವಾಗಿದೆ: ಸಚಿವ ಜೈ ಶಂಕರ್

ಲಡಾಖ್‌ನಂತಹ ಪ್ರದೇಶದಲ್ಲಿ ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತಿರಲಿಲ್ಲ. ಈಗ ಭಾರತ-ಚೀನಾ ಗಡಿ ಭಾಗದಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಆದ್ದರಿಂದ, ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ.

ಲಡಾಖ್ ನಲ್ಲಿ ಭಾರತೀಯ ಸೇನೆಗಾಗಿ ಗೌಪ್ಯ ರಸ್ತೆ ಮಾರ್ಗ! ಲಡಾಖ್ ನಲ್ಲಿ ಭಾರತೀಯ ಸೇನೆಗಾಗಿ ಗೌಪ್ಯ ರಸ್ತೆ ಮಾರ್ಗ!

For First Time ITBP Deploys Female Doctors At Ladakh

ಇಷ್ಟು ದಿನ ಲಡಾಖ್‌ ಭಾಗದಲ್ಲಿ ಸೈನಿಕರಿಗೆ ಚಿಕಿತ್ಸೆ ನೀಡಲು ಪುರುಷ ವೈದ್ಯರನ್ನು ಮಾತ್ರ ನಿಯೋಜನೆ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮಹಿಳಾ ವೈದ್ಯರನ್ನು ಕಳಿಸಲಾಗಿದೆ.

ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಈಗ ಆಟೋ ಚಾಲಕ

ಲಡಾಖ್‌ ಭಾಗದಲ್ಲಿ ಪಹರೆ ಕಾಯವ ಯೋಧರ ಆರೋಗ್ಯದ ಬಗ್ಗೆ ಈ ವೈದ್ಯರು ಕಾಳಜಿ ವಹಿಸಲಿದ್ದಾರೆ. ಪಡೆಯಲ್ಲಿ ಇರಬೇಕಾದ ಔಷಧ, ಸಲಕರಣೆಗಳ ಬಗ್ಗೆಯೂ ಗಮನಹರಿಸಲಿದ್ದಾರೆ.

ಭಾರತ-ಚೀನಾ ಯೋಧರ ಸಂಘರ್ಷದ ಬಳಿಕ ಗಡಿಯಲ್ಲಿ ಪರಿಸ್ಥಿತಿ ಬಿಗುವಾಗಿದೆ. ಒಂದು ವೇಳೆ ಅಗತ್ಯವಿದ್ದರೆ ಇನ್ನಷ್ಟು ವೈದ್ಯಕೀಯ ಸಿಬ್ಬಂದಿಗಳನ್ನು ಕಳಿಸಲಾಗುತ್ತದೆ ಎಂದು ಐಟಿಬಿಪಿ ಹೇಳಿದೆ.

ಗಡಿ ಭಾಗಕ್ಕೆ ಸೈನಿಕರನ್ನು ನಿಯೋಜನೆ ಮಾಡುವ ಮೊದಲು ಮೂರು ಹಂತದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅವರು ಸದೃಢವಾಗಿದ್ದಾರೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ ಬಳಿಕವೇ ಗಡಿ ಪಹರೆಗೆ ಕಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿ ಪಹರೆಯಿಂದ ವಾಪಸ್ ಬಂದ ಪಡೆಗಳ ಸದಸ್ಯರು ಕ್ವಾರಂಟೈನ್‌ನಲ್ಲಿರಬೇಕು. ಅವರಿಗೆ ಕೋವಿಡ್ ಸೋಂಕು ತಗುಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಅವರನ್ನು ಬೇರೆ ಸ್ಥಳಗಳಿಗೆ ನಿಯೋಜನೆ ಮಾಡಲಾಗುತ್ತದೆ.

English summary
For the first time Indo Tibetan Border Police deployed female doctors at forward locations in Ladakh. ITBP changed SOP which allow female staff in Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X