ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಪಾಲಿಗೆ ಇಂಡಿಯಾ ಈಸ್ ಇಂದಿರಾ: ಬಿಜೆಪಿ ವ್ಯಂಗ್ಯ

|
Google Oneindia Kannada News

ನವದೆಹಲಿ, ಜೂನ್ 25: 'ಕಾಂಗ್ರೆಸ್ಸಿನ ಪಾಲಿಗೆ ಇಂದಿಗೂ ಇಂಡಿಯಾ ಎಂದರೆ ಇಂದಿರಾ' ಎಂದು ಬಿಜೆಪಿ ಮುಖಂಡ ಸುಧಾಂಶು ತ್ರಿವೇದಿ ಲೇವಡಿ ಮಾಡಿದ್ದಾರೆ.

ತುರ್ತು ಪರಿಸ್ಥಿತಿ ದಿನ(ಜೂನ್ 25)ದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಭಾರತದ ಪಾಲಿಗೆ ಕರಾಳ ಎನ್ನಿಸಿದ ತುರ್ತು ಪರಿಸ್ಥಿಯ ಸಮಯದಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರು 'ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ' ಎಂಬ ಘೋಷಣೆ ಆರಂಭಿಸಿದ್ದರು. ಈಗಲೂ ಸಹ ಕಾಂಗ್ರೆಸ್ಸಿಗರ ಪಾಲಿಗೆ ಇಂಡಿಯಾ ಎಂದರೆ ಇಂದಿರಾ! ಅವರು ಎಂದಿಗೂ ಈ ವಿಷಯದಲ್ಲಿ ಕ್ಷಮೆ ಕೇಳುವುದಿಲ್ಲ" ಎಂದು ಸುಧಾಂಶು ಹೇಳಿದ್ದಾರೆ.

ನೆಹರೂ, ಇಂದಿರಾಗೂ ಇತ್ತು ಆರ್‌ಎಸ್‌ಎಸ್‌ ಜತೆ ಬಾಂಧವ್ಯ ನೆಹರೂ, ಇಂದಿರಾಗೂ ಇತ್ತು ಆರ್‌ಎಸ್‌ಎಸ್‌ ಜತೆ ಬಾಂಧವ್ಯ

"ಹಿಂದುತ್ವವನ್ನು ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರ ಪಾಲಿಗೆ ಈ ದೇಶ ಕೇವಲ ಭಾರತ ಮಾತೆ. ಆದರೆ ಕಾಂಗ್ರೆಸ್ಸಿಗರಿಗೆ ಮಾತ್ರ ಇಂಡಿಯಾ ಎಂದರೆ ಇಂಡಿಯಾ" ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.

For Congress India is still Indira: BJP

ಭಾರತೀಯರ ಪಾಲಿಗೆ ಕರಾಳ ಎನ್ನಿಸಿದ 'ತುರ್ತು ಪರಿಸ್ಥಿತಿಗೆ' ಇಂದಿಗೆ 43 ವರ್ಷ. ಜೂನ್ 25 ರ 1975 ರಂದು ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ದೇಶದಲ್ಲಿ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. 21 ತಿಂಗಳುಗಳ ಕಾಲ ಹೇರಲಾದ ಈ ತುರ್ತು ಪರಿಸ್ಥಿತಿಯನ್ನು ಮಾರ್ಚ್ 21, 1977 ರಲ್ಲಿ ಹಿಂತೆಗೆದುಕೊಳ್ಳಲಾಯ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಜೈಲುಪಾಲಾದರು, ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು.

ಇಂದಿರಾ ಹತ್ಯೆಗೆ ಕಾರಣವಾದ ಆಪರೇಶನ್ ಬ್ಲೂ ಸ್ಟಾರ್: 10 ಸಂಗತಿಇಂದಿರಾ ಹತ್ಯೆಗೆ ಕಾರಣವಾದ ಆಪರೇಶನ್ ಬ್ಲೂ ಸ್ಟಾರ್: 10 ಸಂಗತಿ

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲೇ ಇದು ಅತ್ಯಂತ ವಿವಾದಾತ್ಮಕ ತುರ್ತುಪರಿಸ್ಥಿತಿ ಎಂದು ದಾಖಲಾಗಿದೆ.

English summary
"For Congress leaders, India is still Indira! During emergency Congress's then president gave this slogan but till today they are using it!" BJP leader Sudhanshu Trivedi told. On 1975, June 25th, then prime minister of India, Indira Gandhi declared state of emergency across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X