ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇವು ಹಗರಣ: ಲಾಲೂ ಪ್ರಸಾದ್ ವಿರುದ್ಧ ಮತ್ತೆ ತನಿಖೆಗೆ ಆದೇಶ

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಸೋಮವಾರದಂದು ಮಹತ್ವದ ತೀರ್ಪು ಹೊರ ಬಂದಿದೆ. ಬಿಹಾರದ ಮಾಜಿ ಸಿಎಂ ಲಾಲೂ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 08: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಸೋಮವಾರದಂದು ಮಹತ್ವದ ತೀರ್ಪು ಹೊರ ಬಂದಿದೆ. ಬಿಹಾರದ ಮಾಜಿ ಸಿಎಂ ಲಾಲೂ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪ ಕೈ ಬಿಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳ ತನಿಖೆಯನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ. [2013: ಮೇವು ಹಗರಣ: ಲಾಲೂ ಯಾದವ್ ಗೆ ಜಾಮೀನು]

ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸಿಯಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸುಪ್ರೀಂಕೋರ್ಟಿನಿಂದ 2013ರಲ್ಲಿ ಜಾಮೀನು ಮಂಜೂರಾಗಿತ್ತು. ಆರ್ ಜೆಡಿ ಮುಖ್ಯಸ್ಥ ಲಾಲೂ ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು 5 ವರ್ಷ ಕಾಲ ಜೈಲುಶಿಕ್ಷೆ ವಿಧಿಸಿತ್ತು.

ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ನಂತರ 65 ವರ್ಷದ ಲಾಲು ಬಿರ್ಸಾ ಮುಂಡಾ ಜೈಲಿನಲ್ಲಿದ್ದರು.ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲು ಸಂಸತ್ ಸ್ಥಾನವನ್ನು ಕಳೆದುಕೊಂಡಿದ್ದಲ್ಲದೆ 11 ವರ್ಷ ಸಂಸತ್ತಿನತ್ತ ಸುಳಿದಾಡುವಂತೆಯೂ ಇಲ್ಲ.

ಸುಮಾರು 21 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ.

ಲಾಲೂ ವಿರುದ್ಧ ತನಿಖೆಗೆ ಆದೇಶ

ಲಾಲೂ ವಿರುದ್ಧ ತನಿಖೆಗೆ ಆದೇಶ

ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 20 ವರ್ಷಗಳ ಕಾಲ ನಡೆದ ಈ ಲೂಟಿ ತಡವಾಗಿ ಬೆಳಕಿಗೆ ಬಂದಿತ್ತು.

ವಿಚಾರಣೆ ಜಾರಿಯಲ್ಲಿದೆ

ವಿಚಾರಣೆ ಜಾರಿಯಲ್ಲಿದೆ

ಈ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಲಾಲು ಪ್ರಸಾದ್‌ ಯಾದವ್‌ ಜೈಲಿಗೂ ಹೋಗಿಬಂದಿದ್ದರು. ಲಾಲು ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳ ಪೈಕಿ ಐದರ ವಿಚಾರಣೆ ಜಾರ್ಖಂಡ್ ನ‌ಲ್ಲಿ, ಒಂದು ಪ್ರಕರಣದ ವಿಚಾರಣೆ ಬಿಹಾರದಲ್ಲೂ ನಡೆಯುತ್ತಿದೆ. ಜಾರ್ಖಂಡ್ ರಚನೆಯಾದ ಬಳಿಕ ಬಹುತೇಕ ಪ್ರಕರಣಗಳ ವಿಚಾರಣೆಯನ್ನು ಆ ರಾಜ್ಯಕ್ಕೆ ವರ್ಗಾಯಿಸಲಾಗಿತ್ತು. ಜಾರ್ಖಂಡ್ ನಿಂದ ಹಾಗೂ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದು ಮತ್ತೆ ರಾಜಕೀಯರಂಗಕ್ಕೆ ಇಳಿದಿದ್ದರು.

ದೋಷಾರೋಪ ಪಟ್ಟಿ ಕಥೆ

ದೋಷಾರೋಪ ಪಟ್ಟಿ ಕಥೆ

ಲಾಲೂ ವಿರುದ್ಧದ ಕ್ರಿಮಿನಲ್ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಎಲ್ಲಾ ಆರೋಪಗಳನ್ನು ಪ್ರತ್ಯೇಕವಾಗಿ ತನಿಖೆಗೊಳಪಡಿಸಿ, ಹೊಸದಾಗಿ ಚಾರ್ಜ್ ಶೀಟ್ ಸಲ್ಲಿಸಲು ಸಿಬಿಐಗೆ ಅವಕಾಶ ಸಿಕ್ಕಿದೆ.

ಆದರೆ, ಚಾರ್ಜ್ ಶೀಟ್ ರದ್ದುಗೊಳಿಸದಂತೆ ಕೋರಿ ಸಿಬಿಐ ಸಲ್ಲಿಸಿರುವ ಅರ್ಜಿಯ ತೀರ್ಪು ಇನ್ನೂ ಬಾಕಿಯಿದೆ.
ಅವಿಭಜಿತ ಬಿಹಾರದ ಭ್ರಷ್ಟಾಚಾರ

ಅವಿಭಜಿತ ಬಿಹಾರದ ಭ್ರಷ್ಟಾಚಾರ

ಅವಿಭಜಿತ ಬಿಹಾರದ ಈ ಮಹಾನ್ ಭ್ರಷ್ಟಾಚಾರ ಪ್ರಕರಣದಲ್ಲಿ ಲಾಲೂ ಪ್ರಸಾದ್ ಅಲ್ಲದೆ. ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ, ಮಾಜಿ ಪಶುಸಂಗೋಪಣಾ ಸಚಿವ ವಿದ್ಯಾಸಾಗ್ರ್ ನಿಶಾದ್ ಹಾಗೂ ಚಂದ್ರದೇವ್ ಪ್ರಸಾದ್ ವರ್ಮ, ಜೆಡಿಯು ಸಂಸದ ಜಗದೀಶ್ ಶರ್ಮ, ಬಿಜೆಪಿ ಮುಖಂಡ ಧ್ರುವ ಭಗತ್, ಮಾಜಿ ಆರ್ ಜೆ ಡಿ ಸಂಸದ ಆರ್ ಕೆ ರಾಣಾ ಕೂಡಾ ಆರೋಪಿಗಳಾಗಿದ್ದಾರೆ.

{promotion-urls}

English summary
Lalu Prasad will have to face trial in the fodder scam case. The Supreme Court on Monday allowed a plea by the Central Bureau of Investigation which had challenged the dropping of charges in the fodder scam against Yadav, the former chief minister of Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X