• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾಗೆ ಜಬರ್ ದಸ್ತ್ ಉತ್ತರ ನೀಡಿದ ಜೇಟ್ಲಿ

|

ನವದೆಹಲಿ, ಮಾರ್ಚ್ 22: "ನಾವು ಏನು ಮಾಡಿದೆವೋ ಅದು ತಪ್ಪು ಎಂದು ಅವರು ಭಾವಿಸುತ್ತಾರೆ. ಜಗತ್ತಿನ ಯಾವುದೇ ದೇಶ ಈ ಮಾತನ್ನು ಹೇಳಿಲ್ಲ. ಇಸ್ಲಾಮಿಕ ಸಹಕಾರ ಒಕ್ಕೂಟ (ಒಐಸಿ)ಕೂಡ ಈ ಮಾತನ್ನು ಹೇಳಿದೆ. ಕೇವಲ ಪಾಕಿಸ್ತಾನಕ್ಕೆ ಮಾತ್ರ ಈ ದೃಷ್ಟಿಕೋನ ಇದೆ. ದುರದೃಷ್ಟ ಏನೆಂದರೆ, ಇಂಥ ಜನರು ರಾಜಕೀಯ ಪಕ್ಷವೊಂದರ ಸಿದ್ಧಾಂತವನ್ನು ಪ್ರತಿಪಾದಿಸುವವರು" ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ಹೇಳಿದ್ದಾರೆ.

'ನಾಚಿಕೆಯಾಗಬೇಕು!' ಪಿತ್ರೋಡಾಗೆ ಮೋದಿ ಅಂಥ ಖಡಕ್ ಉತ್ತರ ನೀಡಿದ್ದೇಕೆ?

ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತೀಯ ವಾಯು ಸೇನೆ ನಡೆಸಿದ ಬಾಲಕೋಟ್ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸ್ಯಾಮ್ ಪಿತ್ರೋಡಾ ಅವರು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಅರುಣ್ ಜೇಟ್ಲಿ ಅವರು ಮಾತನಾಡಿದ್ದಾರೆ.

ಇನ್ನೂ ಮುಂದುವರಿದು, ಗುರುವೇ (ಸ್ಯಾಮ್ ಪಿತ್ರೋಡಾ) ಹೀಗಿದ್ದರೆ ಇನ್ನು ಶಿಷ್ಯ (ರಾಹುಲ್ ಗಾಂಧಿ) ಇನ್ನೆಷ್ಟು ನಿಷ್ಪ್ರಯೋಜಕ ಆಗಬಹುದು. ಈ ದೇಶ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.

ಸ್ಯಾಮ್ ಪಿತ್ರೋಡಾ ಪ್ರಶ್ನೆಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ನೀಡಿ, ವಿಪಕ್ಷಗಳು ಹಾಗೂ ಬಿಜೆಪಿ ಮಧ್ಯದ ವ್ಯತ್ಯಾಸ ಸ್ಪಷ್ಟವಾಗಿದೆ. ಅವರು ನಮ್ಮ ಸೈನ್ಯವನ್ನು ಅನುಮಾನಿಸುತ್ತಾರೆ, ನಮಗೆ ಸೈನ್ಯದ ಬಗ್ಗೆ ಹೆಮ್ಮೆಯಿದೆ. ಅವರ ಹೃದಯ ಭಯೋತ್ಪಾದಕರಿಗಾಗಿ ತುಡಿಯುತ್ತದೆ, ನಮಗೆ ತಿರಂಗಾಕ್ಕಾಗಿ ಮಿಡಿಯುತ್ತದೆ. ಈ ಚುನಾವಣೆಯಲ್ಲಿ ನಿಮ್ಮ ಮತ ಎಂಬ ಶಕ್ತಿಯ ಮೂಲಕ ಕಾಂಗ್ರೆಸ್ ಸಂಸ್ಕೃತಿ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದಿದ್ದಾರೆ.

 ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ

ಸ್ಯಾಮ್ ಪಿತ್ರೋಡಾ ಪ್ರಶ್ನೆಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ನೀಡಿ, ವಿಪಕ್ಷಗಳು ಹಾಗೂ ಬಿಜೆಪಿ ಮಧ್ಯದ ವ್ಯತ್ಯಾಸ ಸ್ಪಷ್ಟವಾಗಿದೆ. ಅವರು ನಮ್ಮ ಸೈನ್ಯವನ್ನು ಅನುಮಾನಿಸುತ್ತಾರೆ, ನಮಗೆ ಸೈನ್ಯದ ಬಗ್ಗೆ ಹೆಮ್ಮೆಯಿದೆ. ಅವರ ಹೃದಯ ಭಯೋತ್ಪಾದಕರಿಗಾಗಿ ತುಡಿಯುತ್ತದೆ, ನಮಗೆ ತಿರಂಗಾಕ್ಕಾಗಿ ಮಿಡಿಯುತ್ತದೆ. ಈ ಚುನಾವಣೆಯಲ್ಲಿ ನಿಮ್ಮ ಮತ ಎಂಬ ಶಕ್ತಿಯ ಮೂಲಕ ಕಾಂಗ್ರೆಸ್ ಸಂಸ್ಕೃತಿ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಸ್ಯಾಮ್ ಪಿತ್ರೋಡಾ ಅವರು ಕೇಳಿದ್ದ ಪ್ರಶ್ನೆಗಳು ಹೀಗಿದ್ದವು

* ನಾನು ನ್ಯೂಯಾರ್ಕ್ ಟೈಮ್ಸ್ ಹಾಗೂ ಇತರ ಪತ್ರಿಕೆಗಳಲ್ಲಿ ಓದಿದಂತೆ ಹೆಚ್ಚು ತಿಳಿದುಕೊಳ್ಳಲು ಬಯಸುತ್ತೇನೆ. ನಾವು ನಿಜವಾಗಲೂ ಯಾವುದರ ಮೇಲೆ ದಾಳಿ ಮಾಡಿದೆವು, ನಾವು ನಿಜವಾಗಲೂ ಮುನ್ನೂರು ಜನರನ್ನು ಕೊಂದೆವಾ?

ಎಲ್ಲ ನಾಗರಿಕರನ್ನು ನಿಂದಿಸುವುದಕ್ಕೆ ಆಗಲ್ಲ

* ಮುಂಬೈಗೆ ಎಂಟು ಮಂದಿ ಬಂದರು ಮತ್ತು ಏನೋ ಮಾಡಿದರು. ನಾವು ಇಡೀ ದೇಶದ ಮೇಲೆ ಎಗರಿ ಬೀಳುವುದಕ್ಕೆ ಆಗಲ್ಲ. ಯಾರೋ ಕೆಲವರು ಇಲ್ಲಿಗೆ ಬಂದರು ಮತ್ತು ದಾಳಿ ಮಾಡಿದರು ಅಂತ ಆ ದೇಶದ ಎಲ್ಲ ನಾಗರಿಕರನ್ನು ನಿಂದಿಸುವುದಕ್ಕೆ ಆಗಲ್ಲ. ನನಗೆ ಆ ದಾರಿಯಲ್ಲಿ ನಂಬಿಕೆ ಇಲ್ಲ.

* ಪುಲ್ವಾಮಾ ದಾಳಿ ಬಗ್ಗೆ ಮಾತನಾಡಿ: ನನಗೆ ಆ ದಾಳಿ ಬಗ್ಗೆ ಹೆಚ್ಚು ಗೊತ್ತಿಲ್ಲ. ಇದು ಯಾವಾಗಲೂ ಆಗ್ತಿದೆ. ಮುಂಬೈ ದಾಳಿ ಆದ ಮೇಲೆ ನಾವು ಪ್ರತಿಕ್ರಿಯೆ ನೀಡಿದ್ದೆವು. ನಮ್ಮ ವಿಮಾನಗಳನ್ನು ಕಳುಹಿಸಿದೆವು. ಆದರೆ ಅದು ಸರಿಯಾದ ವಿಧಾನವಲ್ಲ. ನನ್ನ ಪ್ರಕಾರ, ಜಗತ್ತಿನ ಜತೆಗೆ ನಡೆದುಕೊಳ್ಳುವ ವಿಧಾನ ಅದಲ್ಲ.

ಈ ಪ್ರತಿಕ್ರಿಯೆಯಿಂದ ನನಗೆ ನಿರಾಶೆ ಆಗಿದೆ

* ನಾನು ಹೇಳಿದ್ದು, ಒಬ್ಬ ನಾಗರಿಕನಾಗಿ ವಾಯು ದಾಳಿ ಏನಾಯಿತು ಎಂದು ತಿಳಿಯುವ ಹಕ್ಕಿದೆ. ಇದರಲ್ಲಿ ಏನು ವಿವಾದ ಇದೆ ಅಂತ ನನಗೆ ಅರ್ಥ ಆಗ್ತಿಲ್ಲ. ಈ ಪ್ರತಿಕ್ರಿಯೆಯಿಂದ ನನಗೆ ನಿರಾಶೆ ಆಗಿದೆ. ಇಂಥ ಸಣ್ಣ ವಿಚಾರಗಳಿಗೆ ಭಾರತದಲ್ಲಿ ಜನ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತೋರಿಸುತ್ತದೆ.

ವಿಪಕ್ಷಗಳ ಪೈಕಿ ಬಹುತೇಕ ಭಾರತದ ವಾಯು ದಾಳಿಯನ್ನು ಲೋಕಸಭೆ ಚುನಾವಣೆಗೆ ಪೂರ್ವವಾಗಿ ಮಾಡಿದ ಗಿಮಿಕ್ ಎಂದು ಜರಿದಿವೆ. ಕೆಲವು ಪಕ್ಷಗಳು ದಾಳಿಗೆ ಸಂಬಂಧಿಸಿದ ಸಾಕ್ಷ್ಯಾಧಾರ ಕೇಳಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಆದರೆ ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ್ದ ಸಿಆರ್ ಪಿಎಫ್ ಸಿಬ್ಬಂದಿ ಕುಟುಂಬದವರೇ ಉತ್ತರಪ್ರದೇಶದಲ್ಲಿ ವಾಯು ದಾಳಿಯ ಮತ್ತು ಉಗ್ರರು ಹತ್ಯೆಯಾಗಿದ್ದಕ್ಕೆ ಸಾಕ್ಷಿ ಕೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
FM Arun Jaitley on Sam Pitroda's airstrike remark: He believes what we did was wrong. No country in the world said this, not even Organisation of Islamic Cooperation said this, only Pakistan was of this view. Unfortunate such people are ideologues of a political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more