ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್‌ ವಿಡಿಯೋ; ಅಸ್ಸಾಂ ಪ್ರವಾಹ, ಮಗು ರಕ್ಷಿಸಿ ಬುಟ್ಟಿಯಲ್ಲಿ ಸಾಗಣೆ

|
Google Oneindia Kannada News

ಗುವಾಹಟಿ, ಜೂನ್ 21: ಅಸ್ಸಾಂನಲ್ಲಿ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ತಂದೆಯೊಬ್ಬರು ತನ್ನ ಎಳೆಯ ಮಗುವನ್ನು ಬುಟ್ಟಿಯೊಂದರಲ್ಲಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಅಸ್ಸಾಂನಲ್ಲಿ ಕೆಲವು ದಿನಗಳಿಂದ ಎಡೆಬಿಡದೇ ನಿರಂತರ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ನಾಗರಿಕರು ಕಂಗಾಲಾಗಿದ್ದಾರೆ. ಮಹಿಳೆಯರು ಮಕ್ಕಳಿಗೆ ವಸತಿಗೆ ಸ್ಥಳವಿಲ್ಲದೇ ಪರಿತಪಿಸುತ್ತಿದ್ದಾರೆ.

ರಾಜ್ಯದ ಒಟ್ಟು 36 ಜಿಲ್ಲೆಗಳ ಪೈಕಿ 32 ಜಿಲ್ಲೆಗಳು ಮಳೆಯ ರೌದ್ರವತಾರಕ್ಕೆ ಸಿಲುಕಿವೆ. ಇಲ್ಲಿನ ಸಿಲ್ಚಾರ್ ಪ್ರದೇಶದಲ್ಲಿ ಸುಮಾರು 2-3ಅಡಿಯಷ್ಟು ಮಳೆ ನೀರು ನಿಂತಿದೆ. ಅನೇಕ ಮನೆಗಳು ಮುಳಗಡೆಯಾಗಿದ್ದು, ಇಲ್ಲಿಂದ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ತಮ್ಮ ಮಗುವನ್ನು ಪಾಸ್ಟಿಕ್ ಬುಟ್ಟಿಯೊಂದರಲ್ಲಿ ಕೊಂಡೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Flooding Situation in Assam: Trapped Baby Rescued Video Viral

ನೀರು ತುಂಬಿಕೊಂಡಿದ್ದ ಮನೆಯಿಂದ ಮಗುವನ್ನು ಬುಟ್ಟಿಯಲ್ಲಿ ಇರಿಸಿಕೊಂಡು ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ವೇಳೆ ನೆರೆಯ ಮನೆಯವರು ಈ ದೃಶ್ಯ ಸೆರೆಹಿಡಿದಿದ್ದಾರೆ. ಪ್ರವಾಹದಂತ ಸಂಕಷ್ಟದ ಸ್ಥಿತಿಯಲ್ಲೂ ಈ ದೃಶ್ಯ ಸ್ಥಳದಲ್ಲಿದ್ದವರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ತಂದೆಯರ ದಿನ 1ದಿನಕ್ಕೆ ಸೀಮಿತವಲ್ಲ; ಭಗವಾನ್ ಶ್ರೀ ಕೃಷ್ಣನನ್ನು ವಾಸುದೇವ ಯಮುನಾ ನದಿ ದಾಟಿಸಿದ ಘಟನೆ ನೆನಪಿಗೆ ಬರುತ್ತದೆ. ಭಾನುವಾರವಷ್ಟೇ ದೇಶದಲ್ಲಿ ತಂದೆಯರ ದಿನಾಚಣೆ ಆಚರಿಸಲಾಗಿದೆ. ಅದರ ಬೆನ್ನಲ್ಲೇ ಇಂತದ್ದೊಂದು ಘಟನೆ ನಡೆದಿದ್ದು, ಮಕ್ಕಳಿಗಾಗಿ ಪ್ರತಿನಿತ್ಯವು ಶ್ರಮಿಸುವ, ತ್ಯಾಜ ಮಾಡುವ ತಂದೆಯರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ ಎಂದು ಬರೆದುಕೊಂಡು ವಿಡಿಯೋ ಹಂಚಿಕೊಳ್ಳಲಾಗಿದೆ.

ಅಸ್ಸಾಂನಲ್ಲಿ ಮಳೆ ಮುಂದುವರಿದಿದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ದಾಖಲಾಗಿದೆ. ಇದರಿಂದ ಈವರೆಗೆ ರಾಜ್ಯದಲ್ಲಿ 47ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಸೂರಿಲ್ಲದೇ ಉಟ್ಟ ಬಟ್ಟೆಯಲ್ಲೇ ನಿವಾಸಿಗಳು ಬೀದಿಗೆ ಬಿದ್ದಿದ್ದಾರೆ. ಪ್ರವಾಹ ಹಾಗೂ ಭೂ ಕುಸಿತದಿಂದ ಈವರೆಗೆ ಸುಮಾರು 80ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Recommended Video

ಮೋದಿ ಮತ್ತು ಮಹಿಳೆ ನಡುವಿನ ಮಾತುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ | Oneindia Kannada

English summary
Assam rain and flood. baby which trapped in flood rescued. Now video went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X