ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿರುವ ಕಾಶ್ಮೀರ

|
Google Oneindia Kannada News

ನವದೆಹಲಿ: ಸೆ. 17 : ಪ್ರವಾಹದಿಂದ ತತ್ತರಿಸಿದ್ದ ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಮರಳುತ್ತಿದೆ. ಅಲ್ಲಲ್ಲಿ ಸಿಲುಕಿಕೊಂಡಿರುವ ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರಿದಿದೆ. ಪ್ರವಾಹದಿಂದ ಆದ ಪ್ರಾಣ ಹಾನಿ ಮತ್ತು ನಷ್ಟದ ಅಂದಾಜು ಇನ್ನು ಸರಿಯಾಗಿ ಲೆಕ್ಕಕ್ಕೆ ಸಿಕ್ಕಿಲ್ಲ.

ಅಂಗಡಿ ಮಾಲೀಕರು ಮತ್ತೆ ವ್ಯಾಪಾರಕ್ಕೆ ಸಜ್ಜಾಗುತ್ತಿದ್ದು ಒಳಗೆ ನುಗ್ಗಿರುವ ನೀರನ್ನು ಹೊರಹಾಕುತ್ತಿದ್ದಾರೆ. ಸೈನಿಕರು ಅಗತ್ಯವಿದ್ದೆಡೆ ಸೇತುವೆಗಳನ್ನು ನಿರ್ಮಿಸಿ ನಾಗರಿಕರನ್ನು ನಿರಂತರವಾಗಿ ರಕ್ಷಿಸುತ್ತಿದ್ದಾರೆ.

ದೇಶದ ವಿವಿಧ ಮೂಲಗೆಳಿಂದ ಸಂತ್ರಸ್ತರಿಗೆ ಆಹಾರ, ಬಟ್ಟೆ ಮುಂತಾದ ಅಗತ್ಯ ವಸ್ತುಗಳು ಬರುತ್ತಿದ್ದು ಭಾರತೀಯ ಸೇನೆ ಎಲ್ಲರ ರಕ್ಷಣೆಗೆ ಶ್ರಮಿಸುತ್ತಿದೆ. ಪ್ರಮುಖ ರಸ್ತೆಗಳು ಸಹ ಕೊಚ್ಚಿ ಹೋಗಿದ್ದು ಎಲ್ಲದರ ಪುನರ್ ನಿರ್ಮಾಣ ಆಗಬೇಕಿದೆ. (ಪಿಟಿಐ ಚಿತ್ರಗಳು)

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಜಮ್ಮು ಕಾಶ್ಮೀರದ ದಾಲ್ ಸರೋವರದ ಬಳಿ ಯೋಧರಿಂದ ಮುಂದುವರಿದಿರುವ ರಕ್ಷಣಾ ಕಾರ್ಯಾಚರಣೆ.

ಅಂಗಡಿ ಸ್ವಚ್ಛ

ಅಂಗಡಿ ಸ್ವಚ್ಛ

ಪ್ರವಾಹಕ್ಕೆ ತುತ್ತಾಗಿರುವ ಶ್ರೀನಗರದ ಲಾಲ್ ಚೌಕದ ಅಂಗಡಿಯೊಂದನ್ನು ಸ್ವಚ್ಛಮಾಡುತ್ತಿರುವ ಅಂಗಡಿ ಮಾಲೀಕರು.

ಮೊದಲಿನ ಸ್ಥತಿಗೆ ಮರಳುವುದು ಯಾವಾಗ?

ಮೊದಲಿನ ಸ್ಥತಿಗೆ ಮರಳುವುದು ಯಾವಾಗ?

ಮಳೆ ನೀರು ನುಗ್ಗಿ ಹಾನಿಯಾಗಿದ್ದ ಅಂಗಡಿಯನ್ನು ಮೊದಲಿನ ಸ್ಥಿತಿಗೆ ತರಲು ಹೊರಟ ಯುವಕರು.

ರಸ್ತೆಯ ದುಸ್ಥಿತಿ

ರಸ್ತೆಯ ದುಸ್ಥಿತಿ

ಶ್ರೀನಗರದ ಮುನಾರಾಬಾದ್ ರಸ್ತೆಯಲ್ಲಿ ಕೊಚ್ಚಿಕೊಂಡು ಬಂದು ನಿಂತಿರುವ ಲಾರಿಯನ್ನು ವೀಕ್ಷಿಸುತ್ತಿರುವ ತಾಯಿ ಮಗ.

ನೀರು ಖಾಲಿಯಾಗದು!

ನೀರು ಖಾಲಿಯಾಗದು!

ವ್ಯಾಪಾರ ನಿಂತು ವಾರಗಳೇ ಕಳೆದಿದ್ದು ಅಂಗಡಿ ಒಳಗೆ ಸೇರಿರುವ ಮಳೆ ನೀರು ಹೊರಹಾಕುವುದರಲ್ಲಿ ನಿರತ ಶ್ರೀನಗರದ ಯುವಕ.

ಜೈ ಜವಾನ್

ಜೈ ಜವಾನ್

ಸಂತ್ರಸ್ತರ ರಕ್ಷಣೆಗೆ ರಾಜೌರಿ ಪ್ರಾಂತ್ಯದ ಬಳಿ ಕೃತಕ ಸೇತುವೆ ನಿರ್ಮಾಣದಲ್ಲಿ ನಿರತವಾಗಿರುವ ಸೇನೆ.

English summary
After flood effect Jammu and Kashmir slowly taking their normal stage. Shopkeepers cleaning their shops at a flood hit Kokar Bazar of Lal Chowk area in Srinagar. Indian Army personnel continue the rescue work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X