ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪ್ರಯಾಣಿಕರಿಗೆ ಕಹಿ ಸುದ್ದಿ: ಸೆ. 1ರಿಂದ ಟಿಕೆಟ್ ದರ ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 20: ವಿಮಾನ ಬಳಗೆ ಶುಲ್ಕವನ್ನು (ಎಎಸ್‌ಎಫ್) ಹೆಚ್ಚಿಸಲು ನಾಗರಿಕ ವಿಮಾನಯಾನ ಸಚಿವಾಲಯ (ಎಂಸಿಎ) ಮುಂದಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರು ಮುಂದಿನ ತಿಂಗಳಿನಿಂದ ವಿಮಾನ ಪ್ರಯಾಣಕ್ಕೆ ಅಧಿಕ ಮೊತ್ತ ಪಾವತಿಸಬೇಕಾಗಲಿದೆ. ಇದರಿಂದ ವಿಮಾನ ಪ್ರಯಾಣಿಕರು ಪ್ರತಿ ಟಿಕೆಟ್ ಮೇಲೆ ಹೆಚ್ಚಿನ ದರ ತೆರುವುದು ಅನಿವಾರ್ಯವಾಗಲಿದೆ.

ದೇಶೀ ಪ್ರಯಾಣಿಕರಿಗೆ ಎಎಸ್‌ಎಫ್‌ಅನ್ನು ಈಗಿರುವ 150 ರೂ.ದಿಂದ 160 ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಹಾಗೆಯೇ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಎಎಸ್‌ಎಫ್ ಶುಲ್ಕವು ಈಗಿರುವ 4.85 ಡಾಲರ್‌ನಿಂದ 5.2 ಡಾಲರ್‌ಗೆ ಏರಿಕೆಯಾಗಲಿದೆ.

ಬೆಂಗಳೂರಿನಿಂದ ಈ 14 ನಗರಗಳಿಗೆ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭಬೆಂಗಳೂರಿನಿಂದ ಈ 14 ನಗರಗಳಿಗೆ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭ

ಮುಂದಿನ ಸೆಪ್ಟೆಂಬರ್ 1ರಿಂದ ದೇಶಿ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ದರಗಳಲ್ಲಿನ ಎಎಸ್ಎಫ್ ಹೆಚ್ಚಳ ಅನ್ವಯವಾಗಲಿದೆ. ಎಎಸ್‌ಎಫ್ ಶುಲ್ಕವು ವಿಮಾನಯಾನ ಸಂಸ್ಥೆ ವಿಮಾನ ಪ್ರಯಾಣಿಕರಿಗೆ ವಿಧಿಸುವ ದರವಾಗಿದ್ದು, ಬಳಿಕ ಈ ಮೊತ್ತವನ್ನು ಅದು ಸರ್ಕಾರಕ್ಕೆ ನೀಡಲಿದೆ. ಎಎಸ್‌ಎಫ್ ಶುಲ್ಕದಿಂದ ಸಂಗ್ರಹಿಸಲಾಗುವ ಹಣವನ್ನು ಭಾರತದೆಲ್ಲೆಡೆಗಿನ ವಿಮಾನ ನಿಲ್ದಾಣಗಳ ಭದ್ರತೆಯ ನಿಧಿಗೆ ಬಳಸಿಕೊಳ್ಳಲಾಗುತ್ತದೆ. ಮುಂದೆ ಓದಿ...

ಕಳೆದ ವರ್ಷವೂ ಏರಿಕೆ ಮಾಡಲಾಗಿತ್ತು

ಕಳೆದ ವರ್ಷವೂ ಏರಿಕೆ ಮಾಡಲಾಗಿತ್ತು

ಎಎಸ್‌ಎಫ್ ದರವನ್ನು ಈ ಮೊದಲು 2019ರ ಜುಲೈನಲ್ಲಿ 130 ರೂ ದಿಂದ 150 ರೂ.ಗೆ ದೇಶಿ ವಿಮಾನಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಹಾಗೆಯೇ ಅಂತಾರಾಷ್ಟ್ರೀಯ ವಿಮಾನಗಳ ಓಡಾಟಕ್ಕೆ 3.25 ಡಾಲರ್‌ನಿಂದ 4.85 ಡಾಲರ್‌ಗೆ ಏರಿಕೆ ಮಾಡಲಾಗಿತ್ತು.

ವಿಮಾನಯಾನ ಉದ್ಯಮಕ್ಕೆ ಭಾರಿ ನಷ್ಟ

ವಿಮಾನಯಾನ ಉದ್ಯಮಕ್ಕೆ ಭಾರಿ ನಷ್ಟ

ಕೊರೊನಾ ವೈರಸ್ ಹಾವಳಿಯಿಂದಾಗಿ ದೇಶಿ ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಮಾರ್ಚ್ ತಿಂಗಳಿನಿಂದಲೂ ದೇಶದ ವಿಮಾನಯಾನ ಉದ್ಯಮ ಭಾರಿ ಪ್ರಮಾಣದ ನಷ್ಟ ಅನುಭವಿಸುತ್ತಿದೆ. ಈ ನಷ್ಟವನ್ನು ಭರಿಸಲು ದರ ಏರಿಕೆಯನ್ನು ಮಾಡಲಾಗಿದೆ. 2020ರಲ್ಲಿ ಕೊರೊನಾ ವೈರಸ್ ಪಿಡುಗಿನ ಕಾರಣದಿಂದ ವೈಮಾನಿಕ ಪ್ರಯಾಣಿಕರಿಂದ ದೊರಕುವ ಆದಾಯದಲ್ಲಿ ಶೇ 55ರಷ್ಟು, ಅಂದರೆ 314 ಬಿಲಿಯನ್ ಡಾಲರ್‌ನಷ್ಟು ಕುಸಿತ ಉಂಟಾಗಲಿದೆ ಎಂದು ಜಾಗತಿಕ ವಿಮಾನಯಾನ ಸಂಘಟನೆಯಾದ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಅಂದಾಜಿಸಿದೆ.

ವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್‌ಪೋರ್ಟ್ ಬಬಲ್ಸ್? ಇಲ್ಲಿದೆ ವಿವರವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್‌ಪೋರ್ಟ್ ಬಬಲ್ಸ್? ಇಲ್ಲಿದೆ ವಿವರ

ವೆಚ್ಚ ಉಳಿತಾಯದ ಕ್ರಮಗಳು

ವೆಚ್ಚ ಉಳಿತಾಯದ ಕ್ರಮಗಳು

ಭಾರತದಲ್ಲಿಯೂ ಬಹುತೇಕ ಎಲ್ಲ ವಿಮಾನಯಾನ ಸಂಸ್ಥೆಗಳೂ ಉದ್ಯೋಗ ಕಡಿತ, ವೇತನ ಕಡಿತ ಮತ್ತು ವೇತನ ರಹಿತ ರಜೆಯಲ್ಲಿ ಉದ್ಯೋಗಿಗಳನ್ನು ಕಳುಹಿಸುವುದು ಮುಂತಾದ ಹಣ ಉಳಿತಾಯ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದ ಅತಿ ದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ, ಈ ಮೊದಲು ತನ್ನ ಶೇ 10ರಷ್ಟು ಸಿಬ್ಬಂದಿಯನ್ನು ತೆಗೆದುಹಾಕುತ್ತಿರುವುದಾಗಿ ತಿಳಿಸಿತ್ತು.

ವೇತನ ಕಡಿತ ಮಾಡಿರುವ ಏರ್ ಇಂಡಿಯಾ

ವೇತನ ಕಡಿತ ಮಾಡಿರುವ ಏರ್ ಇಂಡಿಯಾ

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮಾಸಿಕ 25,000ಕ್ಕೂ ಹೆಚ್ಚು ಒಟ್ಟು ವೇತನವುಳ್ಳ ಉದ್ಯೋಗಿಗಳ ಸಂಬಳವನ್ನು ಶೇ 50ರಷ್ಟು ತಗ್ಗಿಸಿದೆ. ಆದರೆ ಇತರೆ ವಿಮಾನಯಾನ ಸಂಸ್ಥೆಗಳಂತೆ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿಲ್ಲ. ಮೇ 25ರಿಂದ ದೇಶಿ ವಿಮಾನ ಹಾರಾಟ ಆರಂಭವಾಗಿದ್ದರೂ ಶೇ 50-60ರಷ್ಟು ಮಾತ್ರವೇ ಸೀಟುಗಳು ಭರ್ತಿಯಾಗುತ್ತಿವೆ.

ಅದಾನಿಗೆ 3 ವಿಮಾನ ನಿಲ್ದಾಣಗಳ ನಿರ್ವಹಣೆ ಜವಾಬ್ದಾರಿ ನೀಡಲು ಕೇಂದ್ರ ಅಸ್ತುಅದಾನಿಗೆ 3 ವಿಮಾನ ನಿಲ್ದಾಣಗಳ ನಿರ್ವಹಣೆ ಜವಾಬ್ದಾರಿ ನೀಡಲು ಕೇಂದ್ರ ಅಸ್ತು

English summary
Domestic and International flight passengers have to pay more price per ticket as the Ministry of Aviation is set to hike ASF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X