ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷಾಂತ್ಯ ವಿಶೇಷ : ತಡರಾತ್ರಿ ಬಾಗಿಲು ತೆರೆದ ಸುಪ್ರೀಂಕೋರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಯಾಕೂಬ್ ಮೆಮನ್‌ ಗಲ್ಲಿಗೇರಿಸಿದ್ದು 2015ರ ಒಂದು ಪ್ರಮುಖ ವಿದ್ಯಮಾನ. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರಲು ಹೈಡ್ರಾಮ ನಡೆಯಿತು. ಸುಪ್ರೀಂಕೋರ್ಟ್ ತಡರಾತ್ರಿ ಬಾಗಿಲು ತೆರೆದು ಯಾಕೂಬ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ನನ್ನು ಜುಲೈ 30ರ ಬೆಳಗ್ಗೆ ಗಲ್ಲಿಗೇರಿಸಲಾಯಿತು. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಲು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ತಡರಾತ್ರಿ 1.30ಕ್ಕೆ ಆರಂಭಿಸಿದ ಕೋರ್ಟ್, 4.45ಕ್ಕೆ ಅಂತಿಮ ತೀರ್ಪು ನೀಡಿ, ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು. [ಮುಂಬೈ ಸರಣಿ ಬಾಂಬ್ ಸ್ಫೋಟ : Timeline]

yakub memon

ಯಾಕೂಬ್ ಮೆಮನ್‌ಗೆ ಟಾಡಾ ಕೋರ್ಟ್ ಮೊದಲು ಗಲ್ಲು ಶಿಕ್ಷೆ ವಿಧಿಸಿತು. ಈ ಆದೇಶ ಪ್ರಶ್ನಿಸಿ ಮೆಮನ್ ಸುಪ್ರೀಂಕೋರ್ಟ್ ಮೊರೆ ಹೋದ. ಕೋರ್ಟ್ ಸಹ ಗಲ್ಲು ಶಿಕ್ಷೆ ಎತ್ತಿ ಹಿಡಿದ ಬಳಿಕ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ. [ಯಾಕೂಬ್ ಗೆ ಗಲ್ಲು, ರಾತ್ರಿಯ ಹೈಡ್ರಾಮ]

ಮತ್ತೆ ಮೇಲ್ಮನವಿ ಸಲ್ಲಿಕೆ : ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಬಳಿಕ ಮೆಮನ್ ಪುನಃ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ. ಕೇಂದ್ರ ಸರ್ಕಾರ ಆಗ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿತು. ಇದನ್ನು ಪರಿಗಣಿಸಿದ ಕೋರ್ಟ್ ಅರ್ಜಿ ವಜಾಗೊಳಿಸಿತು. [ವರ್ಷಾಂತ್ಯ ವಿಶೇಷ : ಕರ್ನಾಟಕದಲ್ಲಿ ಏನಾಯ್ತ?]

ರಾಜ್ಯಪಾಲರ ಬಳಿ ಹೋದ : ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡ ಬಳಿಕ ಮೆಮನ್ ಮಹಾರಾಷ್ಟ್ರ ರಾಜ್ಯಪಾಲರಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ. ಅದೇ ಸಮುದಲ್ಲಿ ರಾಷ್ಟ್ರಪತಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ. ಮೊದಲು ರಾಜ್ಯಪಾಲರು ನಂತರ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದರು.

ಗಲ್ಲು ಶಿಕ್ಷೆಗೆ ಸಿದ್ಧತೆ : ಎಲ್ಲಾ ಅರ್ಜಿಗಳು ತಿರಸ್ಕಾರವಾದ ಬಳಿಕ ಜುಲೈ 30ರಂದು ನಾಗ್ಪುರ ಜೈಲಿನಲ್ಲಿ ಯಾಕೂಬ್‌ನನ್ನು ಗಲ್ಲಿಗೇರಿಸಲು ನಿರ್ಧರಿಸಲಾಯಿತು. ಅದಕ್ಕಾಗಿ ತಯಾರಿ ಆರಂಭವಾಯಿತು. ಆದರೆ, ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿ ಎಂದು ಯಾಕೂಬ್ ಮತ್ತೆ ಸುಪ್ರೀಂ ಮೊರೆ ಹೋದ.

ಮುಖ್ಯ ನ್ಯಾಯಮೂರ್ತಿಗಳ ಭೇಟಿ : ಜುಲೈ 29ರ ರಾತ್ರಿ 11 ಗಂಟೆ ವೇಳೆಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಮೂವರು ವಕೀಲರು ಯಾಕೂಬ್ ಗಲ್ಲು ಶಿಕ್ಷೆಗೆ ತಡೆ ಕೋರಿ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನಿವಾಸಕ್ಕೆ ತೆರಳಿದರು. ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಸಿಜೆ ಅವರನ್ನು ಭೇಟಿ ಮಾಡಿ, ಪ್ರಶಾಂತ್ ಭೂಷಣ್ ನೇತೃತ್ವದ ತಂಡ ತಂದಿದ್ದ ಅರ್ಜಿಯನ್ನು ಹಸ್ತಾಂತರ ಮಾಡಿದರು. 12.45ಕ್ಕೆ ದತ್ತು ಅವರು ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದರು.

ಎಚ್.ಎಲ್.ದತ್ತು ಅವರು ರಚನೆ ಮಾಡಿದ್ದ ತ್ರಿ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಪ್ರಫುಲ್ಲಾ ಸಿ ಪಂತ್ ಹಾಗೂ ಅಮಿತಾವ್ ರಾಯ್ ಅವರು ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ಹಾಲ್‌ ನಂ 4ರಲ್ಲಿ ಜುಲೈ 30ರ ಮುಂಜಾನೆ 1.30ಕ್ಕೆ ಆರಂಭಿಸಿದರು. ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು 4.45ಕ್ಕೆ ತೀರ್ಪು ಕೊಟ್ಟರು. ಬೆಳಗ್ಗೆ 5 ಗಂಟೆಗೆ ಯಾಕೂಬ್‌ಗೆ ಗಲ್ಲುಶಿಕ್ಷೆ ಜಾರಿಗೊಳಿಸಲಾಯಿತು.

English summary
One of the most eventful incidents of the year 2015 was the hanging of 1993 Mumbai blasts convict, Yakub Memon. Supreme Court kept its doors open at midnight to dispose off the last and final appeal of Memon. Yakub Memon was hanged at Nagpur central jail on July 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X