ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ 'ಲೋಕ' ವಿಜಯಕ್ಕೆ ಒಂದು ವರ್ಷ

|
Google Oneindia Kannada News

ನವದೆಹಲಿ, ಮೇ 16: ಕಳೆದ ವರ್ಷ ಇದೇ ದಿನ ಅಂದರೆ 2014 ರ ಮೇ 16 ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ವಿಶ್ವವೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ನರೇಂದ್ರ ಮೋದಿ ಬರೋಬ್ಬರಿ 3 ದಶಕದ ನಂತರ ಕೇಂದ್ರದಲ್ಲಿ ಬಹುಮತ ಪಡೆದುಕೊಂಡಿದ್ದರು. ಬಿಜೆಪಿ ನೇತೃತ್ವದ ಎನ್ ಡಿಎ 333 ಸ್ಥಾನಗಳನ್ನು ಪಡೆದುಕೊಂಡು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ದಾಖಲೆ ನಿರ್ಮಿಸಿದ್ದು ಈಗ ಇತಿಹಾಸ.

ಮೋದಿ ಸರ್ಕಾರದ ಒಂದು ವರ್ಷದ ಅವಧಿಯನ್ನು ಪರಾಮರ್ಶಿಸಿದರೆ ಅನೇಕ ಅಂಶಗಳನ್ನು ಗುರುತಿಸಬಹುದು. ಇಲ್ಲಿ ಸಾಧನೆಗಳು ಇವೆ, ವೈಫಲ್ಯಗಳು ಇವೆ. ಒಂದು ವರ್ಷದ ಹಾದಿಯಲ್ಲಿನ ಪ್ರಮುಖ ಹೆಜ್ಜೆಗಳನ್ನು ಗುರುತು ಮಾಡಿದರೆ ಕೆಲವನ್ನು ಉಲ್ಲೇಖಿಸಬಹುದು. ಜನಧನ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಛ ಭಾರತ ಅಭಿಯಾನಗಳು ಗಮನ ಸೆಳೆದರೆ ಕಪ್ಪು ಹಣ ವಾಪಸಾತಿ ಚರ್ಚೆ ನಡೆದೇ ಇದೆ. ಮೋದಿ ವಿದೇಶ ಬಾಂಧವ್ಯ ವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳು ಮುಖ್ಯವಾದವು.[2014 ರ ಲೋಕಸಭೆ ಫಲಿತಾಂಶ ನೋಡಿಕೊಂಡು ಬನ್ನಿ]

ಬಿಜೆಪಿ ಮತ್ತು ನರೇಂದ್ರ ಮೋದಿ ವಿಜಯದ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳು ಬಿಚ್ಚಿಟ್ಟಿವೆ. ಹೆಸರಿನಲ್ಲಿ ದೇಶಾದ್ಯಂತ ನಾಗರೀಕರು ಜಯದ ಘಳಿಗೆಯನ್ನು #NamoVictoryDay ಎಂಬ ಹೆಸರಿನಲ್ಲಿ ಮೆಲಕು ಹಾಕಿದ್ದಾರೆ.

250 ಮೆರವಣಿಗೆಗೆ ಸಿದ್ಧತೆ

250 ಮೆರವಣಿಗೆಗೆ ಸಿದ್ಧತೆ

ವಿಜಯದ ದಿನವನ್ನು ನೆನಪು ಮಾಡಿಕೊಳ್ಳಲು ಬಿಜೆಪಿ ದೇಶಾದ್ಯಂತ 250 ಮೆರವಣಿಗೆ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. 2014 ರ ಲೋಕಸಭೆ ಚುನಾವಣಾ ಫಲಿತಾಂಶದ ದಿನವನ್ನು ಒಂದು ಮೈಲಿಗಲ್ಲು ಎಂದೇ ಬಣ್ಣಿಸಿದೆ.

ಕಾಂಗ್ರೆಸ್ ಚಕ್ರಾಧಿಪತ್ಯ ಕೊನೆ

ಕಾಂಗ್ರೆಸ್ ಚಕ್ರಾಧಿಪತ್ಯ ಕೊನೆ

ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಂದೇ ಪಕ್ಷ ಬಹುಮತ ಸಾಧಿಸುವುದು ಕಷ್ಟ ಎಂಬ ಸ್ಥಿತಿ ಎದುರಾಗಿತ್ತು. ರಾಜಕಾರಣದ ತಜ್ಞರೇ ಇದನ್ನು ಒಪ್ಪಿಕೊಂಡಿದ್ದರು. ಆದರೆ ಮೋದಿ ಹವಾ ಎಲ್ಲವನ್ನು ತಲೆಕೆಳಗೆ ಮಾಡಿತು.

ಯುವಜನತೆಯೇ ಕಾರಣ

ಯುವಜನತೆಯೇ ಕಾರಣ

ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಿಭೂತರಾಗಿದ್ದು ಯುವಕರು. ಪ್ರತಿ ಚುನಾವಣೆಗಿಂತ ಹೆಚ್ಚಿನ ಪ್ರಮಾಣದ ಮತದಾನ ನಡೆದಾಗಲೇ ಕಮಲ ಅರಳುತ್ತದೆ ಎಂದು ಹೇಳಲಾಗಿತ್ತು.

ವಿರೋಧ ಪಕ್ಷವೇ ಇಲ್ಲ!

ವಿರೋಧ ಪಕ್ಷವೇ ಇಲ್ಲ!

ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಹೊಸ ಇತಿಹಾಸ. ರಾಜೀವ್-ಇಂದಿರಾ ಕಾಲದ ನಂತರ ಅಂಥ ಸ್ಥಿತಿ ಬಂದಿದ್ದು ಮೋದಿ ಹವಾಕ್ಕೆ ತಕ್ಕ ಉದಾಹರಣೆ.

ಎಲ್ಲ ಕಡೆ ಕೇಸರಿ ಮಯ

ಎಲ್ಲ ಕಡೆ ಕೇಸರಿ ಮಯ

ಉತ್ತರ ಪ್ರದೇಶದ ಶೇ.90 ಕ್ಷೇತ್ರಗಳು ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಜನ ಮೋದಿ ಅವರನ್ನು ಬರಮಾಡಿಕೊಂಡಿದ್ದರು. ನಂತರ ನಡೆದ ಕೆಲ ರಾಜ್ಯಗಳ ವಿಧಾನಸಭೆ ಚುನಾಚಣೆಗಳು ಇದನ್ನೇ ಸಾಬೀತು ಮಾಡಿದವು.

English summary
Even as Prime Minister Narendra Modi completes one year in office, mixed reactions have been pouring in from various sections about his one year performance. The BJP is making grand plans to celebrate one year of the Modi government at Centre. The party is planning to hold around 250 rallies in India to mark the first anniversary of the party being in power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X