ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್: ನಿಮಗೆ ತಿಳಿದಿರಬೇಕಾದ 5 ಪ್ರಮುಖ ಸಂಗತಿಗಳು

|
Google Oneindia Kannada News

Recommended Video

Union Budget 2019: ಜುಲೈ 5 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ನಿರ್ಮಲ ಸೀತಾರಾಮನ್ | 5 ಪ್ರಮುಖ ಸಂಗತಿಗಳು

ನವದೆಹಲಿ, ಜೂನ್ 18: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೆಯ ಅವಧಿಗೆ ಬಂದ ಬಳಿಕ ಮೊದಲ ಕೇಂದ್ರ ಬಜೆಟ್ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಸರ್ಕಾರದ ಹಣಕಾಸು, ಎಲ್ಲ ಮೂಲಗಳಿಂದ ಆದಾಯಗಳನ್ನು ಸಂಗ್ರಹಿಸುವಿಕೆ ಮತ್ತು ಎಲ್ಲ ಚಟುವಟಿಕೆಗಳ ರೂಪುರೇಷೆಯ ವರದಿಯಾಗಿ ಈ ಬಾರಿಯ ಕೇಂದ್ರ ಬಜೆಟ್ ಹೊರಹೊಮ್ಮಲಿದೆ. ಇತರೆ ಸಚಿವಾಲಯಗಳೊಂದಿಗಿನ ಸಮಾಲೋಚನೆ ಬಳಿಕ ಹಣಕಾಸು ಸಚಿವಾಲಯದ ಬಜೆಟ್ ವಿಭಾಗ ವರದಿಯನ್ನು ಸಿದ್ಧಪಡಿಸಿದೆ.

2020ರ ಮಾರ್ಚ್ ಹಣಕಾಸು ವರ್ಷದ ಅಂತ್ಯಕ್ಕೆ ಜುಲೈ 5ರಂದು ಪರಿಪೂರ್ಣ ಬಜೆಟ್‌ಅನ್ನು ನೂತನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಹಿಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಅವರು 2019-20ನೇ ಸಾಲಿನ ಮಧ್ಯಂತರ ಬಜೆಟ್‌ಅನ್ನು ಈ ವರ್ಷದ ಫೆಬ್ರವರಿ 1ರಂದು ಮಂಡಿಸಿದ್ದರು.

ಜುಲೈ 10ರಂದು ಮೋದಿ ಸರ್ಕಾರದ ಪೂರ್ಣ ಬಜೆಟ್? ಈ ಬಾರಿಗೆ ಕೃಷಿಗೆ ಆದ್ಯತೆ ಜುಲೈ 10ರಂದು ಮೋದಿ ಸರ್ಕಾರದ ಪೂರ್ಣ ಬಜೆಟ್? ಈ ಬಾರಿಗೆ ಕೃಷಿಗೆ ಆದ್ಯತೆ

ಆರ್ಥಿಕ ಸಮೀಕ್ಷೆಯು ಕೃಷಿ ಮತ್ತು ಕೈಗಾರಿಕಾ ಉತ್ಪಾದನೆ, ಮೂಲಸೌಕರ್ಯ, ಉದ್ಯೋಗ, ಹಣಕಾಸು ಸರಬರಾಜು, ಬೆಲೆ, ಆಮದು, ರಫ್ತು, ವಿದೇಶಿ ವಿನಿಮಯ ಮೀಸಲು ಮತ್ತು ಇತರೆ ಆರ್ಥಿಕ ಅಂಶಗಳಲ್ಲಿನ ಟ್ರೆಂಡ್‌ಗಳನ್ನು ವಿಶ್ಲೇಷಿಸುತ್ತದೆ.

ದೇಶದ ಕೇಂದ್ರ ಬಜೆಟ್‌ ಕುರಿತು ತಿಳಿಯಬೇಕಾದ ಐದು ಸಂಗತಿಗಳು ಇಲ್ಲಿವೆ...

ಜುಲೈ 5ರಂದು ಬಜೆಟ್ ಮಂಡನೆ

ಜುಲೈ 5ರಂದು ಬಜೆಟ್ ಮಂಡನೆ

ಆರ್ಥಿಕ ಸಮೀಕ್ಷೆಯ ವರದಿಯನ್ನು ಜುಲೈ 4ರಂದು ಸಲ್ಲಿಕೆ ಮಾಡಲಿದ್ದು, ಮರುದಿನ ಬಜೆಟ್ ಮಂಡನೆ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ಕಲಾಪವು ಒಟ್ಟು 30 ಅವಧಿಗಳಲ್ಲಿ ನಡೆಯಲಿದೆ.

ಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ

ಸಂಪನ್ಮೂಲ ಹಂಚಿಕೆ ಮಾಹಿತಿ

ಸಂಪನ್ಮೂಲ ಹಂಚಿಕೆ ಮಾಹಿತಿ

ದೇಶದಲ್ಲಿ ವಾರ್ಷಿಕ ಹಣಕಾಸು ಅಭಿವೃದ್ಧಿಯನ್ನು ಆರ್ಥಿಕ ಸಮೀಕ್ಷೆಯಲ್ಲಿ ಸಾರಾಂಶಗೊಳಿಸಲಾಗುತ್ತದೆ. ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಬಜೆಟ್‌ನಲ್ಲಿ ಅದರ ಹಂಚಿಕೆಯ ಕುರಿತು ಮಾರ್ಗೋಪಾಯಗಳನ್ನು ಅದು ಸೂಚಿಸುತ್ತದೆ.

ಕಲಾಪ ಮುಂದೂಡಿಕೆ

ಕಲಾಪ ಮುಂದೂಡಿಕೆ

2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ 2019ರ ಜುಲೈ 5ರಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಾಗುತ್ತದೆ. ಬಜೆಟ್ ಮಂಡನೆಯಾದ ಬಳಿಕ ಸಂಸತ್‌ನ ಉಭಯ ಸದನಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗುತ್ತದೆ.

ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಸಭೆ ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಸಭೆ

ಸಂಪ್ರದಾಯ ಬದಲಿಸಿದ ಸಿನ್ಹಾ

ಸಂಪ್ರದಾಯ ಬದಲಿಸಿದ ಸಿನ್ಹಾ

1999ರವರೆಗೂ ಫೆಬ್ರವರಿಯ ಕೊನೆಯ ಕೆಲಸದ ದಿನದ ಸಂಜೆ 5 ಗಂಟೆಗೆ ಕೇಂದ್ರ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. 1999ರಲ್ಲಿ ಆಗಿನ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಬಜೆಟ್ ಮಂಡನೆಯ ಸಂಪ್ರದಾಯವನ್ನು ಬದಲಿಸಿ ಬೆಳಿಗ್ಗೆ 11 ಗಂಟೆಗೆ ಮಂಡಿಸಿದರು.

92 ವರ್ಷಗಳ ಅಭ್ಯಾಸ ರದ್ದು

92 ವರ್ಷಗಳ ಅಭ್ಯಾಸ ರದ್ದು

2016ರವರೆಗೂ ಕೇಂದ್ರ ಬಜೆಟ್‌ಗೂ ಕೆಲವು ದಿನಗಳ ಮುನ್ನ ರೈಲ್ವೆ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಆದರೆ, 2016ರ ಸೆಪ್ಟೆಂಬರ್‌ನಲ್ಲಿ ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್‌ಅನ್ನು ಪ್ರತ್ಯೇಕವಾಗಿ ಮಂಡಿಸುವ 92 ವರ್ಷಗಳ ಹಳೆಯ ಅಭ್ಯಾಸವನ್ನು ಕೇಂದ್ರ ಸರ್ಕಾರ ತೆಗೆದುಹಾಕಿ ಎರಡೂ ಬಜೆಟ್‌ಗಳನ್ನು ವಿಲೀನಗೊಳಿಸಿತು.

English summary
Finance Minister Nirmala Sitharaman will present the Union Budget on July 5. Here is the five major things to know about Union Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X