ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ವಿಸ್ತರಣೆಗೆ ಮನವಿ ಮಾಡಿದ 5 ರಾಜ್ಯಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 26 : ಕೊರೊನಾ ಹರಡದಂತೆ ಜಾರಿಗೊಳಿಸಲಾಗಿರುವ 2ನೇ ಹಂತದ ಲಾಕ್ ಡೌನ್ ಮೇ 3ರಂದು ಮುಕ್ತಾಯಗೊಳ್ಳಲಿದೆ. ಮುಂದೇನು?, ಲಾಕ್ ಡೌನ್ ವಿಸ್ತರಣೆಯಾಗಲಿದೆಯೇ? ಎಂಬುದು ಸದ್ಯದ ಕುತೂಹಲ.

ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶವನ್ನು ಉದ್ದೇಶಿಸಿ ಮನ್ ಕೀ ಬಾತ್ ಮೂಲಕ ಮಾತನಾಡಿದರು. ಆದರೆ, ಲಾಕ್ ಡೌನ್ ಮುಂದೂಡುವ ಯಾವುದೇ ಸುಳಿವನ್ನು ಅವರು ನೀಡಿಲ್ಲ. ಮುಂದಿನ ಭಾನುವಾರಕ್ಕೆ ಲಾಕ್ ಡೌನ್‌ ಅಂತ್ಯಗೊಳ್ಳಲಿದೆ.

ಲಾಕ್ ಡೌನ್; ಬೆರಗುಗೊಳಿಸುವ 5 ಚಿತ್ರಗಳು ಲಾಕ್ ಡೌನ್; ಬೆರಗುಗೊಳಿಸುವ 5 ಚಿತ್ರಗಳು

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚುತ್ತಿದ್ದು, ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಲಾಕ್ ಡೌನ್ ಸಡಿಲಿಕೆ: ಕಟು ಶಬ್ದಗಳಿಂದ ಟೀಕಿಸಿದ ಎಚ್.ಕೆ.ಪಾಟೀಲ್ಲಾಕ್ ಡೌನ್ ಸಡಿಲಿಕೆ: ಕಟು ಶಬ್ದಗಳಿಂದ ಟೀಕಿಸಿದ ಎಚ್.ಕೆ.ಪಾಟೀಲ್

Five States Seeks Extend Of Lock Down After May 3

ಆದರೆ, ಈಗಾಗಲೇ 5 ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ಬೇರೆ ರಾಜ್ಯಗಳು ಮೋದಿ ಜೊತೆಗಿನ ಸಭೆಯಲ್ಲಿ ತಮ್ಮ ತೀರ್ಮಾನವನ್ನು ತಿಳಿಸಲಿವೆ.

ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ

ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಓಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿವೆ. ಉತ್ತರ ಪ್ರದೇಶ ಜೂನ್ 30ರ ತನಕ ಸಾರ್ವಜನಿಕ ಸ್ಥಳದಲ್ಲಿ ಜನರು ಗುಂಪು ಗೂಡುವಂತಿಲ್ಲ ಎಂದು ಹೇಳಿದೆ.

ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ ಸೇರಿದಂತೆ 6 ರಾಜ್ಯಗಳು ಕೇಂದ್ರ ನೀಡುವ ಸೂಚನೆ ಪಾಲನೆ ಮಾಡುವುದಾಗಿ ಹೇಳಿವೆ. ತೆಲಂಗಾಣ ಸರ್ಕಾರ ಈಗಾಲೇ ಮೇ 7ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಕೇರಳ, ಬಿಹಾರ, ಅಸ್ಸಾಂ ಮೋದಿ ಜೊತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ಪ್ರಕಟಿಸಲಿವೆ.

ಕೆಲವು ಸೇವೆಗಳಿಗೆ ಅವಕಾಶ ನೀಡಿ ಲಾಕ್ ಡೌನ್ ವಿಸ್ತರಣೆ ಮಾಡಬಹುದು ಎಂಬ ಸುದ್ದಿಗಳು ಹಬ್ಬಿವೆ. ಆದರೆ, ವಿಮಾನ, ರೈಲು, ಬಸ್ ಸೇವೆ ಆರಂಭಿಸುವ ಕುರಿತು ಇನ್ನೂ ಕೇಂದ್ರ ಸರ್ಕಾರ ಅಧಿಕೃತ ತೀರ್ಮಾನ ಕೈಗೊಂಡಿಲ್ಲ.

English summary
5 states Maharashtra, Madhya Pradesh, Punjab, Odisha and West Bengal requested the union government to extend lock down after May 3, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X