ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Corona Alert: ಯಾವ ರಾಜ್ಯಗಳು ಅತಿಹೆಚ್ಚು ಅಪಾಯ ಎದುರಿಸುತ್ತಿವೆ?

|
Google Oneindia Kannada News

ನವದೆಹಲಿ, ಏಪ್ರಿಲ್ 08: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಜನರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಪ್ರತಿನಿತ್ಯ ಕೊವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಐದು ರಾಜ್ಯಗಳಲ್ಲಿ ಪರಿಸ್ಥಿತಿ ಕೈತಪ್ಪಿ ಹೋಗುತ್ತಿದೆ.

ದೇಶದಲ್ಲಿ ಒಂದೇ ದಿನ 1,52,879 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಹೊಸ ದಾಖಲೆಯಾಗಿದೆ. ಕಳೆದ 24 ಗಂಟೆಗಳಲ್ಲಿ 839 ಜನರು ಮಹಾಮಾರಿಗೆ ಬಲಿಯಾಗಿದ್ದರೆ, 90,584 ಸೋಂಕಿತರು ಗುಣಮುಖರಾಗಿದ್ದಾರೆ.

ಲಾಕ್‌ಡೌನ್ ಜಾರಿಯಾಗುವುದು ಯಾವಾಗ?; ಇಲ್ಲಿದೆ ಸಿಎಂ ಕೊಟ್ಟ ಉತ್ತರಲಾಕ್‌ಡೌನ್ ಜಾರಿಯಾಗುವುದು ಯಾವಾಗ?; ಇಲ್ಲಿದೆ ಸಿಎಂ ಕೊಟ್ಟ ಉತ್ತರ

ಭಾನುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,33,58,805ಕ್ಕೆ ಏರಿಕೆಯಾಗಿದೆ. ಈವರೆಗೂ 1,20,81,443 ಸೋಂಕಿತರು ಗುಣಮುಖರಾಗಿದ್ದು, 1,69,275 ಮಂದಿ ಪ್ರಾಣ ಬಿಟ್ಟಿದ್ದಾರೆ. 11,08,087 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ. ಇದರ ಹೊರತಾಗಿ ಕೊವಿಡ್-19 ಸೋಂಕಿನಿಂದ ಅಪಾಯ ಎದುರಿಸುತ್ತಿರುವ ರಾಜ್ಯಗಳು ಯಾವುದು, ಸಾವಿನ ಪ್ರಮಾಣ, ಲಸಿಕೆ ವಿತರಣೆಯಲ್ಲಿ ಯಾವ ರಾಜ್ಯ ಉತ್ತಮವಾಗಿದೆ ಎನ್ನುವುದರ ಕುರಿತು ವಿವರಣಾತ್ಮಕ ವರದಿ ಇಲ್ಲಿದೆ ನೋಡಿ.

24 ಗಂಟೆಗಳಲ್ಲಿ ಶೇ.81ರಷ್ಟು ಕೇಸ್ ಪತ್ತೆಯಾದ ರಾಜ್ಯಗಳು

24 ಗಂಟೆಗಳಲ್ಲಿ ಶೇ.81ರಷ್ಟು ಕೇಸ್ ಪತ್ತೆಯಾದ ರಾಜ್ಯಗಳು

ಭಾರತದಲ್ಲಿ ಒಂದು ದಿನದಲ್ಲಿ ಪತ್ತೆಯಾಗಿರುವ 1,52,879 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳಲ್ಲಿ ಶೇ.81ರಷ್ಟು ಪ್ರಕರಣಗಳು ಕೇವಲ 10 ರಾಜ್ಯಗಳಿಗೆ ಸೇರಿದ್ದಾಗಿದೆ. ಮಹಾರಾಷ್ಟ್ರ, ಛತ್ತೀಸ್ ಗಢ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಪತ್ತೆಯಾಗಿವೆ. ಆಯಾ ರಾಜ್ಯಗಳಿಗೆ ಸಂಬಂಧಿಸಿದಂ ಅಂಕಿ-ಅಂಶಗಳು ಮೇಲಿನ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ.

ಶೇ.71ರಷ್ಟು ಸಕ್ರಿಯ ಪ್ರಕರಣಗಳು 5 ರಾಜ್ಯಗಳಲ್ಲಿ ಪತ್ತೆ

ಶೇ.71ರಷ್ಟು ಸಕ್ರಿಯ ಪ್ರಕರಣಗಳು 5 ರಾಜ್ಯಗಳಲ್ಲಿ ಪತ್ತೆ

ದೇಶದಲ್ಲಿ 11,08,087 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಪೈಕಿ ಶೇ.71ರಷ್ಟು ಸಕ್ರಿಯ ಪ್ರಕರಣಗಳು ಕೇವಲ ಐದು ರಾಜ್ಯಗಳಿಗೆ ಸಂಬಂಧಿಸಿವೆ ಎಂದು ಗೊತ್ತಾಗಿದೆ. ಮಹಾರಾಷ್ಟ್ರ ಶೇ.48.57, ಛತ್ತೀಸ್ ಗಢ್ ಶೇ.7.75, ಕರ್ನಾಟಕ ಶೇ.5.57, ಉತ್ತರ ಪ್ರದೇಶ ಶೇ.5.31, ಕೇರಳ ಶೇ.3.62 ಹಾಗೂ ಉಳಿದ ರಾಜ್ಯಗಳಲ್ಲಿ ಶೇ.29.18ರಷ್ಟು ಸಕ್ರಿಯ ಪ್ರಕರಣಗಳಿವೆ.

Weekend Lockdown: ಮಹಾರಾಷ್ಟ್ರದಲ್ಲಿ 3 ದಿನ ಖಾಸಗಿ ಲಸಿಕೆ ಕೇಂದ್ರಗಳಿಗೆ ಬೀಗ!Weekend Lockdown: ಮಹಾರಾಷ್ಟ್ರದಲ್ಲಿ 3 ದಿನ ಖಾಸಗಿ ಲಸಿಕೆ ಕೇಂದ್ರಗಳಿಗೆ ಬೀಗ!

10 ರಾಜ್ಯಗಳಲ್ಲೇ ಶೇ.86ರಷ್ಟು ಜನರು ಕೊರೊನಾಗೆ ಬಲಿ

10 ರಾಜ್ಯಗಳಲ್ಲೇ ಶೇ.86ರಷ್ಟು ಜನರು ಕೊರೊನಾಗೆ ಬಲಿ

ಕೊರೊನಾವೈರಸ್ ಸೋಂಕಿಗೆ ಒಂದೇ ದಿನದಲ್ಲಿ 839 ಮಂದಿ ಪ್ರಾಣ ಬಿಟ್ಟಿದ್ದು, ಈ ಪೈಕಿ ಶೇ.86ರಷ್ಟು ಸಾವಿನ ಪ್ರಕರಣಗಳು ಕೇವಲ 10 ರಾಜ್ಯಗಳಿಗೆ ಸೇರಿವೆ. ಮಹಾರಾಷ್ಟ್ರ - 309, ಛತ್ತೀಸ್ ಗಢ - 123, ಪಂಜಾಬ್ -58, ಗುಜರಾತ್ - 49, ಉತ್ತರ ಪ್ರದೇಶ - 46, ದೆಹಲಿ - 39, ಕರ್ನಾಟಕ - 36, ಮಧ್ಯ ಪ್ರದೇಶ - 24, ತಮಿಳುನಾಡು - 23, ರಾಜಸ್ಥಾನ - 18 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಈವರೆಗೂ ಕೊವಿಡ್-19 ಸೋಂಕಿಗೆ 1,69,275 ಜನರು ಬಲಿಯಾಗಿದ್ದಾರೆ.

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ವೇಗ

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ವೇಗ

ಭಾರತದಲ್ಲಿ ಇದುವರೆಗೂ 10,15,95,147 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ ಶೇ.60ರಷ್ಟು ಲಸಿಕೆಯನ್ನು ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳ ರಾಜ್ಯಗಳಲ್ಲೇ ವಿತರಣೆ ಮಾಡಲಾಗಿದೆ

English summary
Five States Have 71 Per cent Of Total Coronavirus Active Cases In The Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X