ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚರಾಜ್ಯ ಚುನಾವಣೆ: ಸ್ಟಾರ್ ಪ್ರಚಾರಕರ ಮೇಲಿನ ನಿರ್ಬಂಧ ತೆರವು

|
Google Oneindia Kannada News

ನವದೆಹಲಿ, ಫೆಬ್ರವರಿ 21: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದ ಹಿನ್ನೆಲೆ ಕೇಂದ್ರ ಚುನಾವಣಾ ಆಯೋಗವು ಪಂಚರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಮೇಲಿನ ನಿರ್ಬಂಧವನ್ನು ಕಡಿತಗೊಳಿಸಿದೆ.

ದೇಶದಲ್ಲಿ ಓಮಿಕ್ರಾನ್ ಹರಡುವಿಕೆ ಮತ್ತು ಹೆಚ್ಚುತ್ತಿರುವ COVID-19 ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮತದಾನ ನಡೆಸುವ ಕ್ಷೇತ್ರದಲ್ಲಿ ಈ ಹಿಂದೆ ಪ್ರತಿ ರಾಜಕೀಯ ಪಕ್ಷಕ್ಕೆ ಗರಿಷ್ಠ ಸಂಖ್ಯೆಯ (ಸ್ಟಾರ್ ಕ್ಯಾಂಪೇನರ್) ಗಣ್ಯ ಪ್ರಚಾರಕರನ್ನು ಮಿತಿಗೊಳಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಪ್ರಚಾರ ನಿರ್ಬಂಧಕ್ಕೂ ಮೊದಲೇ 250 ಕ್ಷೇತ್ರ ಸುತ್ತಿರುವ ಬಿಜೆಪಿಉತ್ತರ ಪ್ರದೇಶದಲ್ಲಿ ಪ್ರಚಾರ ನಿರ್ಬಂಧಕ್ಕೂ ಮೊದಲೇ 250 ಕ್ಷೇತ್ರ ಸುತ್ತಿರುವ ಬಿಜೆಪಿ

ಉತ್ತರ ಪ್ರದೇಶ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರನ್ನು ಹೆಚ್ಚಿಸಿಕೊಳ್ಳುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಮಾನ್ಯತೆ ಪಡೆದ ರಾಜ್ಯ ಮತ್ತು ರಾಷ್ಟ್ರೀಯ ಪಕ್ಷಗಳು 40 ಸ್ಟಾರ್ ಪ್ರಚಾರಕರನ್ನು ಅಖಾಡಕ್ಕೆ ಇಳಿಸಲು ಅವಕಾಶ ನೀಡಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಥಳೀಯ ಪಕ್ಷಗಳು 20 ಸ್ಟಾರ್ ಪ್ರಚಾರಕರನ್ನು ನೇಮಿಸಲು ಅನುಮತಿ ನೀಡಲಾಗಿದೆ.

Five States Election: Indian EC Lift the restrictions placed on the number of star campaigner

ಸ್ಟಾರ್ ಪ್ರಚಾರಕರ ಹೆಚ್ಚಳಕ್ಕೆ ಆಯೋಗದ ಪ್ರಕಟಣೆ:

"ಭಾರತೀಯ ಚುನಾವಣಾ ಆಯೋಗವು ಸುದೀರ್ಘ ಚರ್ಚೆಯ ನಂತರ ಜನತಾ ಪ್ರಾತಿನಿಧ್ಯ ಕಾಯಿದೆ, 1951 ಮತ್ತು ಸೆಕ್ಷನ್ 77 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಸ್ಟಾರ್ ಪ್ರಚಾರಕರ ಸಂಖ್ಯೆಯ ಗರಿಷ್ಠ ಮಿತಿಯನ್ನು ಮರುಸ್ಥಾಪಿಸಲು ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ನಡೆಯುತ್ತಿರುವ ಮತ್ತು ಭವಿಷ್ಯದ ಚುನಾವಣೆಗಳಿಗೆ ಸ್ಟಾರ್ ಕ್ಯಾಂಪೇನರ್‌ಗಳ ಪಟ್ಟಿಯನ್ನು ಸಲ್ಲಿಸಲು ಸಮಯಾವಧಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ," ಎಂದು EC ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಕೊವಿಡ್-19 ಪರಿಸ್ಥಿತಿ ಪರಿಶೀಲಿಸಿ ಕ್ರಮ:

ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸನ್ನಿವೇಶವನ್ನು ಕೂಲಂಕುಷವಾಗಿ ಚರ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ವಿವರಿಸಿದೆ. "ಸಕ್ರಿಯ ಮತ್ತು ಹೊಸ COVID-19 ಪ್ರಕರಣಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ನಿರ್ಬಂಧಗಳನ್ನು ಕ್ರಮೇಣ ತೆಗೆದುಹಾಕಲಾಗುತ್ತಿದೆ ಅಥವಾ ಸಡಿಲಿಸಲಾಗುತ್ತಿದೆ" ಎಂದು ಚುನಾವಣಾ ಆಯೋಗದ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಫೆಬ್ರವರಿ 23ರಂದು ಅಂತಿಮ ಪಟ್ಟಿ ಸಲ್ಲಿಕೆ:

ಮಣಿಪುರದ ಎರಡೂ ಹಂತಗಳ ಚುನಾವಣೆ ಮತ್ತು ಉತ್ತರ ಪ್ರದೇಶದ ಐದು, ಆರು ಮತ್ತು ಏಳನೇ ಹಂತದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಮತ್ತು ಅಸ್ಸಾಂನ 99-ಮಜುಲಿ (ST) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಸಲ್ಲಿಸಲಾಗಿದೆ. ಅದರ ಹೊರತಾಗಿ ಹೆಚ್ಚುವರಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಫೆಬ್ರವರಿ 23ರ ಸಂಜೆ 5 ಗಂಟೆಯೊಳಗೆ ಚುನಾವಣಾ ಆಯೋಗದ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಮಣಿಪುರ ಚುನಾವಣಾ ಮತದಾನ ದಿನಾಂಕ ಪರಿಷ್ಕರಣೆ:

ಕಳೆದ 10 ದಿನಗಳ ಹಿಂದೆ ಅಂದರೆ ಫೆಬ್ರವರಿ 10 ರಂದು, ಕೇಂದ್ರ ಚುನಾವಣಾ ಆಯೋಗವು ಮಣಿಪುರ ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕಗಳನ್ನು ಪರಿಷ್ಕರಿಸಿತ್ತು. ಮೊದಲ ಹಂತ ಮತ್ತು ಎರಡನೇ ಹಂತದ ಮತದಾನವನ್ನು ಮುಂದೂಡಿತ್ತು. ಪರಿಷ್ಕೃತ ದಿನಾಂಕಗಳ ಪ್ರಕಾರ, ಮೊದಲ ಹಂತದ ಚುನಾವಣೆಗೆ ಫೆಬ್ರವರಿ 27ರ ಬದಲಿಗೆ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಅದೇ ರೀತಿ ಮಾರ್ಚ್ 3ರ ಬದಲಿಗೆ ಮಾರ್ಚ್ 5ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಅಂತಿಮವಾಗಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

English summary
Five States Election: Indian Election commission (EC) Lifted the restrictions placed on the number of star campaigner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X