ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾನು ನೆಲಕಚ್ಚುತ್ತಿದ್ದರೂ ಬಿಜೆಪಿ ಸೋಲಿಗೆ ಕಾಂಗ್ರೆಸ್ ಸಂಭ್ರಮ: ಆತ್ಮಾವಲೋಕನ ಯಾವಾಗ?

|
Google Oneindia Kannada News

ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಹೇಳ ಹೆಸರಿಲ್ಲದಂತೇ ನಿರ್ನಾಮವಾಗಿ ಹೋಗಿದೆ. ಆದರೆ, ಟಿಎಂಸಿ ಕಾರ್ಯಕರ್ತರು ಖುಷಿ ಪಡದಷ್ಟು ಕಾಂಗ್ರೆಸ್ ಮುಖಂಡರು ಹಾಲು ಕುಡಿದಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಮೂರು ಸ್ಥಾನದಿಂದ ಎಂಬತ್ತಕ್ಕೆ ಏರುವುದು ಸಾಮಾನ್ಯವಾದ ವಿಚಾರವಲ್ಲ. ಬಂಗಾಳದಲ್ಲಿ ನಮ್ಮದೇ ಸರಕಾರ ಎಂದು ಬಿಜೆಪಿಯವರು ಬಾಯಿ ಬಡ್ಕೊಂಡು ಬರುತ್ತಿದ್ದರಿಂದ, ಇದು ಬಿಜೆಪಿಗೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ ಅಷ್ಟೇ...

ಟಿಎಂಸಿ, ಬಿಜೆಪಿ ಅಬ್ಬರ: ಹೇಳ ಹೆಸರಿಲ್ಲದಂತೆ ಕಮೂನಿಸ್ಟ್, ಕಾಂಗ್ರೆಸ್ ನಿರ್ನಾಮಟಿಎಂಸಿ, ಬಿಜೆಪಿ ಅಬ್ಬರ: ಹೇಳ ಹೆಸರಿಲ್ಲದಂತೆ ಕಮೂನಿಸ್ಟ್, ಕಾಂಗ್ರೆಸ್ ನಿರ್ನಾಮ

ಆದರೆ, ದಿನದಿಂದ ದಿನಕ್ಕೆ ಪಕ್ಷ ದೈನೇತಿ ಸ್ಥಿತಿಗೆ ಬರುತ್ತಿದ್ದರೂ, ಬಿಜೆಪಿ ಸೋಲಿಗೆ ಖುಷಿ ಪಡುತ್ತಿರುವ ಕಾಂಗ್ರೆಸ್ ಮುಖಂಡರನ್ನು ಕಂಡು ಮರುಗಬೇಕೋ, ಕೊರಗಬೇಕೋ. ಪಕ್ಷದ ಒಂದೊಂದು ಮುಖಂಡರು ಬಿಜೆಪಿ ಸೋಲನ್ನು ವರ್ಣಿಸಿದ್ದೇ..ವರ್ಣಿಸಿದ್ದು. ಬಂಗಾಳದಲ್ಲಿ 44 ರಿಂದ ಶೂನ್ಯಕ್ಕೆ ಬಂದು ನಿಂತ ಬಗ್ಗೆ ಪಕ್ಷದ ಯಾವ ಮುಖಂಡರಿಗೂ ಬೇಸರ ಇದ್ದಂತಿಲ್ಲ.

 ಕೇರಳದಲ್ಲಿ 'ದೊಡ್ಡ ಶೂನ್ಯ' ಸುತ್ತಿದ ಬಿಜೆಪಿ: ಕೊಟ್ಟ ಮಾತು ಉಳಿಸಿಕೊಂಡ ಪಿಣರಾಯಿ ಕೇರಳದಲ್ಲಿ 'ದೊಡ್ಡ ಶೂನ್ಯ' ಸುತ್ತಿದ ಬಿಜೆಪಿ: ಕೊಟ್ಟ ಮಾತು ಉಳಿಸಿಕೊಂಡ ಪಿಣರಾಯಿ

ಅಸಲಿಯಾಗಿ ಕಾಂಗ್ರೆಸ್ಸಿಗೆ ನಾಲ್ಕು ಕಡೆ ತನ್ನ ನೆಲೆಯನ್ನು ಭದ್ರಗೊಳಿಸುವ ಅವಕಾಶವಿತ್ತು. ಆದರೆ, ಬಿಜೆಪಿಗೆ, ಕೇರಳ ಮತ್ತು ತಮಿಳುನಾಡಿನಲ್ಲಿ ಅಂತಹ ಯಾವುದೇ ಅವಕಾಶವಿರಲಿಲ್ಲ. ಆದರೂ, ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೆ ಬಂತು, ಪುದುಚೇರಿಯಲ್ಲಿ ಗೆದ್ದಿತು.

 ಕೇರಳದಲ್ಲಿ ಗೋಲ್ಡನ್ ಚಾನ್ಸ್ ಅನ್ನು ಮಿಸ್ ಮಾಡಿಕೊಂಡಿತು, ಅಲ್ಲೂ ಸೋಲು

ಕೇರಳದಲ್ಲಿ ಗೋಲ್ಡನ್ ಚಾನ್ಸ್ ಅನ್ನು ಮಿಸ್ ಮಾಡಿಕೊಂಡಿತು, ಅಲ್ಲೂ ಸೋಲು

ಇತ್ತ, ಕಾಂಗ್ರೆಸ್, ಪುದುಚೇರಿಯಲ್ಲಿ ಇದ್ದ ಸರಕಾರವನ್ನೂ ಉಳಿಸಿಕೊಳ್ಳಲಾರದೇ ಬಿಜೆಪಿಗೆ ಧಾರೆ ಎರೆಯಿತು. ಇನ್ನು, ವಿರೋಧ ಪಕ್ಷಗಳೇ ಅಧಿಕಾರಕ್ಕೆ ಬರುವ ಪರಿಪಾಠವಿರುವ ಕೇರಳದಲ್ಲಿ (ಯುಡಿಎಫ್) ಅದನ್ನು ಪುನರಾವರ್ತನೆಯಾಗುವಂತೆ ಇದ್ದ ಗೋಲ್ಡನ್ ಚಾನ್ಸ್ ಅನ್ನು ಮಿಸ್ ಮಾಡಿಕೊಂಡಿತು. ತಮಿಳುನಾಡಿನಲ್ಲಿ ತಮ್ಮ ಮೈತ್ರಿಕೂಟದ ಡಿಎಂಕೆ ಅಧಿಕಾರಕ್ಕೆ ಬಂದರೂ, ಕಾಂಗ್ರೆಸ್ಸಿನ ಸಾಧನೆ ಹದಿನೆಂಟು. ಇಲ್ಲಿ ಮಾತ್ರ ಕಳೆದ ಬಾರಿಗಿಂತ ಉತ್ತಮ ಸಾಧನೆಯನ್ನು ಮಾಡಿದೆ.

 ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಹೆಚ್ಚಿನ ವಿರೋಧ ವ್ಯಕ್ತವಾಗಿದ್ದು ಅಸ್ಸಾಂನಲ್ಲೇ

ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಹೆಚ್ಚಿನ ವಿರೋಧ ವ್ಯಕ್ತವಾಗಿದ್ದು ಅಸ್ಸಾಂನಲ್ಲೇ

ಅಸ್ಸಾಂನಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ತೋರಿದರೂ ಅಧಿಕಾರಕ್ಕೆ ಬರಲು ವಿಫಲವಾಯಿತು. ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಹೆಚ್ಚಿನ ವಿರೋಧ ವ್ಯಕ್ತವಾಗಿದ್ದು ಅಸ್ಸಾಂನಲ್ಲೇ. ಅದರ ಲಾಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾದ ಕಾಂಗ್ರೆಸ್, ಬಂಗಾಳದಲ್ಲಿ ಬಿಜೆಪಿ ಸೋತಿದ್ದಕ್ಕೆ ತನ್ನದೇ ಗೆಲುವಿನ ರೀತಿಯಲ್ಲಿ ಸಂಭ್ರಮಿಸುತ್ತಿರುವುದು ವಿಪರ್ಯಾಸ. ಕನಿಷ್ಠ ಪಕ್ಷದ ಮುಖಂಡರು, ಶೂನ್ಯ ಸಂಪಾದನೆಯಾಕಾಯಿತು, ಎಡವಿದ್ದೆಲ್ಲಿ ಎನ್ನುವ ಆತ್ಮವಲೋಕನ ಮಾಡಿಕೊಳ್ಳುವುದು ಯಾವಾಗ? ಕೆಲವೊಂದು ಪಕ್ಷದ ಮುಖಂಡರು ಟ್ವೀಟ್ ಹೀಗಿದೆ:

ಕಾಂಗ್ರೆಸ್ ಸೋಲಿನ ಬಗ್ಗೆ ಚಕಾರವೆತ್ತದೆ ಬಿಜೆಪಿ ಸೋಲನ್ನು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದು ಹೀಗೆ

"ದೇಶದಲ್ಲಿ ಹೊಸ ಆಟ ಶುರುವಾಗಿದೆ. ದುಡ್ಡು,‌ ಕೋಮುವಾದ ಮತ್ತು ಅಧಿಕಾರದ ದುರುಪಯೋಗದ ಮೂಲಕ‌ ಚುನಾವಣೆಯನ್ನು ಗೆಲ್ಲಬಹುದೆಂಬ @BJP4Indiaಯ ಸೊಕ್ಕಿನ ರಾಜಕಾರಣಕ್ಕೆ ಪಶ್ಚಿಮ ಬಂಗಾಳದ ಜನತೆ ಮರೆಯಲಾರದ ಹೊಡೆತ ನೀಡಿದ್ದಾರೆ. ಕೇರಳದಲ್ಲಿ ಈ ಬಾರಿ‌‌ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳಿತ್ತು. ಬಹುಷ: ಕೊರೊನಾ ಕಾಲದ

Recommended Video

IPL ಆಯ್ತು ಈಗ T20 ವರ್ಲ್ಡ್ ಕಪ್ ಸರದಿ | Oneindia Kannada

ಆಕೆ ಅದೆಲ್ಲವನ್ನೂ ಮೆಟ್ಟಿ ನಿಂತು ಜಯಶೀಲರಾದರು, ಕಾಂಗ್ರೆಸ್ಸಿನ ಮುಖಂಡ ಕಪಿಲ್ ಸಿಬಲ್ ಟ್ವೀಟ್

"ಪಶ್ಚಿಮ ಬಂಗಾಳದಲ್ಲಿ ಯಾರು ಪರಾಭವಗೊಂಡರು? ದುರಹಂಕಾರ, ಪ್ರಬಲ ಶಕ್ತಿ, ಹಣದ ಪ್ರಭಾವ, ಜೈಶ್ರೀರಾಮ್ ಅನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು, ಒಡಕು ಉಂಟುಮಾಡುವುದು, ಕೇಂದ್ರ ಚುನಾವಣಾ ಆಯೋಗ. ಆಕೆ ಅದೆಲ್ಲವನ್ನೂ ಮೆಟ್ಟಿ ನಿಂತು ಜಯಶೀಲರಾದರು" ಇದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್ ಮಾಡಿದ ಟ್ವೀಟ್.

English summary
Five State Election Results: Congress Celebrates BJP' Defeat even they lose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X