• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಗಾಳದಲ್ಲಿ ಕಾಂಗ್ರೆಸ್, ಕೇರಳದಲ್ಲಿ ಬಿಜೆಪಿ ಶೂನ್ಯ ಸಾಧನೆ

|

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದ್ದು ಫಲಿತಾಂಶ ಘೋಷಣೆಯ ಔಪಚಾರಿಕತೆ ಮಾತ್ರವೇ ಉಳಿದಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಸೆಗೆ ತಣ್ಣೀರು ಎರಚಿದೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ. ತಮಿಳುನಾಡಿನಲ್ಲಿ ಹತ್ತು ವರ್ಷದ ನಂತರ ಡಿಎಂಕೆ ಮತ್ತೆ ಅಧಿಕಾಕ್ಕೆ ಏರಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್‌ ಅವರ ಉತ್ತಮ ಕಾರ್ಯಕ್ಕೆ ಮತದಾರರು ತಲೆದೂಗಿ ಮತ್ತೊಂದು ಅವಕಾಶ ನೀಡಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಹಾಗೂ ಪುದುಚೆರಿಯಲ್ಲಿ ಎನ್‌ಡಿಎ ಸರ್ಕಾರ ರಚಿಸಲಿವೆ.

ಆದರೆ ಎರಡು ದೊಡ್ಡ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸಹ ಎರಡು ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಿವೆ. ಅದರಲ್ಲಿಯೂ ಕಾಂಗ್ರೆಸ್‌ ಪಕ್ಷವಂತೂ ಈ ಚುನಾವಣೆಯಲ್ಲಿ ತಮ್ಮ ಕಳಪೆ ಸಾಧನೆಯನ್ನು ಮುಂದುವರೆಸಿದೆ.

ಕೇರಳ ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಪಕ್ಷ ಈ ಬಾರಿ ಆ ಸ್ಥಾನವನ್ನೂ ಕಳೆದುಕೊಂಡಿದೆ. ಈ ಬಾರಿ ಕನಿಷ್ಟ 4-5 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇರಿಸಿತ್ತು. ಆದರೆ ಕಳೆದ ಬಾರಿ ಗೆದ್ದಿದ್ದ ಸ್ಥಾನವನ್ನೂ ಉಳಿಸಿಕೊಳ್ಳಲು ವಿಫಲವಾಗಿದೆ ಬಿಜೆಪಿ.

113 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿತ್ತು ಬಿಜೆಪಿ. ಈ ಬಾರಿ ಮೆಟ್ರೊ ಮ್ಯಾನ್ ಶ್ರೀಧರನ್ ಅವರನ್ನು ಕರೆತಂದಿತ್ತು, ಕೇರಳದ ಬಿಜೆಪಿ ಮುಖವನ್ನಾಗಿ ಶ್ರೀಧರನ್ ಅನ್ನು ಪ್ರೊಜೆಕ್ಟ್ ಮಾಡಲಾಗಿತ್ತು. ಪಲ್ಲಕ್ಕಾಡ್‌ನಿಂದ ಸ್ಪರ್ಧಿಸಿದ್ದ ಶ್ರೀಧರನ್ ಅವರು ಆರಂಭಿಕ ಮುನ್ನಡೆ ಪಡೆದರಾದರೂ ಅವರೂ ಸಹ ಕೊನೆಗೆ ಸೋಲು ಕಂಡರು.

   ಕೊರೊನಾದಿಂದ ಜನ ಸಾಯ್ತಿಲ್ಲ ಸರ್ಕಾರದ ವ್ಯವಸ್ಥೆಯಿಂದ ಜನ ಸಾಯ್ತಿದ್ದಾರೆ | Oneindia Kannada

   ಇನ್ನು ಕಾಂಗ್ರೆಸ್‌ ಪಕ್ಷ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರೆಸಿದ್ದು ಪಂಚ ರಾಜ್ಯಗಳಲ್ಲಿಯೂ ಚೇತೋಹಾರಿ ಪ್ರದರ್ಶನ ತೋರಲು ವಿಫಲವಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಒಂದು ಕ್ಷೇತ್ರದಲ್ಲೂ ಗೆಲುವು ಕಂಡಿಲ್ಲ ಕಾಂಗ್ರೆಸ್.

   English summary
   Five State Assembly Election Result 2021: Congress zero seats in West Bengal Kerala did not win single seat in Kerala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X