ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ-ಶಾ ಕಲಂ 370 ರದ್ದು ಮಾಡಲು 5 ಕಾರಣಗಳು

|
Google Oneindia Kannada News

Recommended Video

ನರೇಂದ್ರ ಮೋದಿ ಹಾಗು ಅಮಿತ್ ಶಾ ಕಲಂ 370 ರದ್ದು ಮಾಡಲು 5 ಕಾರಣಗಳು | Oneindia Kannada

ನವದೆಹಲಿ, ಆಗಸ್ಟ್ 06: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನ ಪರಿಚ್ಛೇದ 370 ರದ್ದು ಮಾಡಿದ್ದೇಕೆ? ಎಂಬ ಪ್ರಶ್ನೆಗೆ ಅನೇಕ ರೀತಿ ಉತ್ತರಗಳು ಸಿಗಬಹುದು. ಈಗ ಭಾರತದ ಮುಕುಟವನ್ನು ಕಾಪಾಡುವ ಜವಾಬ್ದಾರಿ ಸಂಪೂರ್ಣವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಿಕ್ಕಿದೆ.

ಮೋದಿ ಸರ್ಕಾರ ಈ ಐತಿಹಾಸಿಕ ವಿಧೇಯಕ ಮಂಡನೆಗೆ ಮುಂದಾಗುವ ಮುನ್ನ ಭಾರಿ ಸಿದ್ಧತೆ ನಡೆಸಿಕೊಂಡಿದ್ದು ಸುಳ್ಳಲ್ಲ. ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ, ಚರ್ಚೆ, ಕಣಿವೆ ರಾಜ್ಯದಲ್ಲಿ ಯಾವ ರೀತಿ ವ್ಯವಸ್ಥೆಯಾಗಿರಬೇಕು ಎಂಬುದೆಲ್ಲವನ್ನು ಮೋದಿ-ಅಮಿತ್ ಶಾ-ಅಜಿತ್ ದೋವಲ್ ಚರ್ಚಿಸಿ ವಿನ್ಯಾಸಗೊಳಿಸಿ ಅದರಂತೆ ಕಾರ್ಯಗತಗೊಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ? ಏಕರೂಪ ನಾಗರಿಕ ಸಂಹಿತೆ ಜಾರಿ ಮೋದಿ-ಶಾ ಮುಂದಿನ ಗುರಿ?

ಕಾಶ್ಮೀರ ಪುನರ್ ರಚನೆ ವಿಧೇಯಕ 2019 ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಂಡಿಸಿದ ಮೇಲೆ ಭಾರಿ ಗದ್ದಲ, ಗೊಂದಲ, ಪ್ರತಿಭಟನೆ ಎದುರಾಯಿತು. ಸಂಜೆ ವೇಳೆಗೆ ಕೊನೆಗೂ ಮತದಾನ ಪ್ರಕ್ರಿಯೆಗೆ ಸ್ಪೀಕರ್ ಎಂ ವೆಂಕಯ್ಯ ನಾಯ್ಡು ಸೂಚಿಸಿದರು.

ಬಿಜೆಪಿ ಸ್ಥಾಪಕ ಶ್ಯಾಮ ಪ್ರಸಾದರ ಕಾಶ್ಮೀರ ಕನಸು ಈಗ ನನಸುಬಿಜೆಪಿ ಸ್ಥಾಪಕ ಶ್ಯಾಮ ಪ್ರಸಾದರ ಕಾಶ್ಮೀರ ಕನಸು ಈಗ ನನಸು

ಅಮಿತ್ ಶಾ ಮಂಡಿಸಿದ ವಿಧೇಯಕಗಳ ಪರ 125 ಹಾಗೂ ವಿರೋಧವಾಗಿ 61 ಧ್ವನಿ ಮತಗಳು ಬಿದ್ದವು. ಜಮ್ಮು ಮತ್ತು ಕಾಶ್ಮೀರ, ಲಡಾಕ್ ಪ್ರತ್ಯೇಕ ಕೇಂದ್ರಾಡಳಿತ ವಿಧೇಯಕ, ಕಾಶ್ಮೀರದಲ್ಲಿನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10ರಷ್ಟು ಮೀಸಲಾತಿ ನೀಡುವ Jammu and Kashmir Reservation Bill, 2019 ಬಿಲ್ ಕೂಡಾ ಪಾಸ್ ಆಗಿದೆ.

ನಿಖರವಾಗಿದ ರೂಪುರೇಷೆ ವಿನ್ಯಾಸಗೊಳಿಸಲಾಗಿದೆ

ನಿಖರವಾಗಿದ ರೂಪುರೇಷೆ ವಿನ್ಯಾಸಗೊಳಿಸಲಾಗಿದೆ

ಜಮ್ಮು ಮತ್ತು ಕಾಶ್ಮೀರ ಹೊಸ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆ ಹೊಂದಲಿದೆ, ಲಡಾಕ್ ಹೊಸ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಯಾವುದೇ ವಿಧಾನಸಭೆ ಹೊಂದಿರುವುದಿಲ್ಲ. ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪುದುಚೇರಿಯಂತೆ ಚುನಾವಣೆ ಎದುರಿಸಿ ಜನಾದೇಶ ಪಡೆದ ಸರ್ಕಾರ ರಚನೆಯಾಗಿ ಹೊಸ ಮುಖ್ಯಮಂತ್ರಿ ಹೊಂದಬಹುದು. ಆದರೆ, ಲಡಾಕ್ ಮಾತ್ರ ಅಂಡಮಾನ್ ಮತ್ತು ನಿಕೋಬಾರ್ ಇನ್ನಿತರ ಕೇಂದ್ರಾಡಳಿತ ಪ್ರದೇಶಗಳಂತೆ ಉಳಿಯಲಿದೆ.

ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ

ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ

1. ಜಮ್ಮು ಮತ್ತು ಕಾಶ್ಮೀರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಕಣಿವೆ ರಾಜ್ಯದ ಆರ್ಥಿಕ ಅಭಿವೃದ್ಧಿಗಾಗಿ ಮೋದಿ ಸರ್ಕಾರವು ಎರಡು ಅವಧಿಯಲ್ಲಿ ಸಾವಿರಾರು ಕೋಟಿ ರು ಅನುದಾನ ನೀಡುತ್ತಾ ಬಂದಿತ್ತು. ಆದರೆ, ಸರಿಯಾದ ಯೋಜನೆಗಳಿಲ್ಲದೆ ಈ ಹಿಂದಿನ ಮುಫ್ತಿ ಸರ್ಕಾರ ಸಮಸ್ಯೆಗಳನ್ನು ಎದುರಿಸಿತ್ತು. ಆದರೆ, ಈಗ ಪುದುಚೇರಿ ಮಾದರಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲು ಬೇಕಾದ ಸಮರ್ಥ ಆರ್ಥಿಕ ಮಾರ್ಗದರ್ಶಿ ಸೂತ್ರಗಳನ್ನು ಮೋದಿ ಸರ್ಕಾರ ರೂಪಿಸಿದೆ.

ಭಯೋತ್ಪಾದನೆ ಭೀತಿ ನಿರ್ಮೂಲನೆ

ಭಯೋತ್ಪಾದನೆ ಭೀತಿ ನಿರ್ಮೂಲನೆ

2. ಸಾಮಾಜಿಕ ಭದ್ರತೆ, ಸಮಾನತೆ ಒದಗಿಸುವ ಮೂಲಕ, ಅಸಹಿಷ್ಣುತೆ ಹತ್ತಿಕ್ಕಿ, ಭಯೋತ್ಪಾದನೆ ಭೀತಿ ನಿರ್ಮೂಲನೆ.
ಸರಿಯಾದ ಉದ್ಯೋಗ ಸಿಗದೆ, ಭಾರತೀಯ ಸೇನೆ ವಿರುದ್ಧವೆ ಕಲ್ಲು ಹೊಡೆಯುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಅನೇಕ ಯುವಕರು ನಂತರ ಬೇರೆ ವಿಧಿಯಿಲ್ಲದೆ, ಪಾಕಿಸ್ತಾನಿ ಕೂಟದ ಕೈಬೊಂಬೆಗಳಾದ ನಿದರ್ಶನಗಳನ್ನು ಕಾಣಬಹುದಾಗಿದೆ. ಇದೆಕ್ಕಲ್ಲ ಈಗ ಮುಕ್ತಿ ಹಾಡಬಹುದಾಗಿದ್ದು, ಹೊಸ ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಪ್ರವಾಸೋದ್ಯಮ ಆಧಾರಿತ ಉದ್ಯೋಗ ಹೆಚ್ಚಿಸುವುದರಿಂದ ಸಮಾನತೆ ಸಾಧ್ಯ. ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಬೇರೆ ರಾಜ್ಯಕ್ಕೆ ಇರುವ ಮೀಸಲಾತಿ ಸೌಲಭ್ಯವೂ ಲಭ್ಯವಾಗಲಿದೆ.

ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿ

ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿ

3. ಕಾಶ್ಮೀರದ ಪ್ರವಾಸೋದ್ಯಮ ಅಭಿವೃದ್ಧಿ, ದೇಶ- ವಿದೇಶಕ್ಕೆ ಅಲ್ಲಿನ, ಕಲೆ, ಸಂಸ್ಕೃತಿ, ಪ್ರಾಕೃತಿಕ ಸೌಂದರ್ಯವನ್ನು ಆಸ್ವಾದಿಸಲು ಸುರಕ್ಷಿತ ತಾಣವನ್ನಾಗಿಸುವುದು.

-ವೈಷ್ಣೋದೇವಿ, ಅಮರನಾಥ್ ಯಾತ್ರೆ, ಶಾರಾದಾಪೀಠ ಸೇರಿದಂತೆ ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಿಗೆ ಭಕ್ತಾದಿಗಳು ಹೋಗಿ ಬರುವುದು ಹೆಚ್ಚಾದರೆ, ಟೆಂಪಲ್ ಟೂರಿಸಂ ವೃದ್ಧಿಯಾಗುತ್ತದೆ. ಮಿಕ್ಕಂತೆ ಲಡಾಕ್, ಕಾರ್ಗಿಲ್ ಪ್ರಾಕೃತಿಕ ಸೌಂದರ್ಯವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಕಾಣಬಹುದು. ಕಾಶ್ಮೀರದ ಪಾರಂಪರಿಕ ಕಟ್ಟಡ, ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯಕ್ಕೆ ಚಾಲನೆ ಸಿಗಬಹುದಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರ

ಪಾಕ್ ಆಕ್ರಮಿತ ಕಾಶ್ಮೀರ

4. ಅಂತಾರಾಷ್ಟ್ರೀಯ ಗಡಿ ವಿವಾದ, ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಪಾಕಿಸ್ತಾನದ ಜೊತೆ ದ್ವಿಪಕ್ಷೀಯ, ರಾಜತಾಂತ್ರಿಕ ಮಾತುಕತೆ ನಡೆಸಲು ಸೂಕ್ತ ಅವಕಾಶ.

ಬಿಜೆಪಿ ತನ್ನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ಯೋಜನೆ ರೂಪಿಸಬಹುದಾಗಿದೆ. ಕಾಶ್ಮೀರದಲ್ಲಿ ಅಭಿವೃದ್ಧಿ ಕಂಡರೆ ಆಕ್ರಮಿತ ಪ್ರದೇಶದವರು ಕಾಶ್ಮೀರದ ಮೂಲ ಭಾಗಕ್ಕೆ ಹಿಂತಿರುಗುವಂತೆ ಮಾಡಬಹುದು. ಕಾಶ್ಮೀರದ ಜನಾದೇಶ ಸರ್ಕಾರದ ಪರವಾಗಿದ್ದರೆ, ಪಾಕಿಸ್ತಾನದ ಜೊತೆಗಿನ ಗಡಿ ವಿವಾದ ಇತ್ಯರ್ಥಕ್ಕೆ ಸರಿಯಾದ ಅಂಶಗಳು ಸಿಗಲಿವೆ.

ಕಾಶ್ಮೀರದಲ್ಲಿ ರಾಜ್ಯಭಾರ ಮಾಡಬಹುದು

ಕಾಶ್ಮೀರದಲ್ಲಿ ರಾಜ್ಯಭಾರ ಮಾಡಬಹುದು

5. ಅಭಿವೃದ್ಧಿಯೇ ಮೂಲ ಮಂತ್ರವಾಗಿರುವುದರಿಂದ ಬಿಜೆಪಿಯಷ್ಟೇ ಅಲ್ಲ, ಕರ್ನಾಟಕದ ಜೆಡಿಎಸ್, ಬಿಎಸ್ಪಿ ಅಥವಾ ಯಾವುದೇ ಪಕ್ಷದವರು ತಮ್ಮ ಅಭ್ಯರ್ಥಿಗಳನ್ನು ಕಾಶ್ಮೀರದಲ್ಲಿ ನಿಲ್ಲಿಸಿ ಗೆಲ್ಲಿಸಿ, ಆಡಳಿತ ನಡೆಸಬಹುದು.

English summary
A historic decision to scrap, Article 370 was taken by the Union Government.Five reasons why Article 370 had to go.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X