• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರಿಗಣ್ಣಿಗೆ ಗ್ರಹಗಳು ಗೋಚರ ಖಗೋಳ ವಿದ್ಯಮಾನ ತಪ್ಪದೇ ವೀಕ್ಷಿಸಿ!

|

ಬೆಂಗಳೂರು, ಜುಲೈ 20: ಕೊರೊನಾವೈರಸ್ ಲಾಕ್ಡೌನ್ ದೆಸೆಯಿಂದ ಮನೆಯಲ್ಲೇ ಇದ್ದವರಿಗೆ ಆಕಾಶ ನೋಡುವ ಸಮಯ ಸಿಕ್ಕರೆ ಅಪರೂಪದ ವಿದ್ಯಮಾನವೊಂದನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಬರಿಗಣ್ಣಿಗೆ ಗ್ರಹಗಳು ಗೋಚರಿಸಲಿದ್ದು ಈ ಖಗೋಳ ವಿದ್ಯಮಾನ ತಪ್ಪದೇ ವೀಕ್ಷಿಸಿ ಎಂದು ಖಗೊಳ ವಿಜ್ಞಾನಿಗಳು ಹೇಳಿದ್ದಾರೆ

ಬರಿಗಣ್ಣಿನಿಂದ ಎಷ್ಟು ಗ್ರಹಗಳು ವೀಕ್ಷಿಸಿದ್ದೀರಾ? ಧೂಮಕೇತು ನೋಡಿದ್ದೀರಾ? ಎಂಬ ಯಾರಾದ್ರೂ ಪ್ರಶ್ನಿಸಿದರೆ, ಹೌದು ಎಂದು ಉತ್ತರಿಸಲು ಇದು ಸಕಾಲ. ಜುಲೈ 19 ರ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೆ ಆರಂಭವಾದ ಈ ದರ್ಶನ ಈ ವಾರವೆಲ್ಲ ಕಾಣಸಿಗಲಿದೆ.

ಭೂಮಿಯ ಕಡೆಗೆ ಬರುತ್ತಿದೆ ಅಪರೂಪದ ಧೂಮಕೇತು: 20 ದಿನಗಳು ಭಾರತದಲ್ಲಿ ಗೋಚರ

ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ನೆರವಿಲ್ಲದೆ ಬರಿಗಣ್ಣಿಗೆ 5 ಗ್ರಹಗಳು ಕಾಣಿಸಲಿವೆ. ಸಾಮಾನ್ಯವಾಗಿ ಕಾಣ ಸಿಗುವ ಶುಕ್ರ ಹಾಗೂ ಗುರು ಗ್ರಹವಲ್ಲದೆ ಇನ್ನೂ ಮೂರು ಗ್ರಹಗಳನ್ನು ಈ ಬಾರಿ ನೋಡಬಹುದು.

ಇದಲ್ಲದೆ, ನಿಯೀವೈಸ್ ಧೂಮಕೇತುವೊಂದು ಸೂರ್ಯನ ಹತ್ತಿರ ಹಾದು ಹೋಗುತ್ತಿದ್ದು, ಇದನ್ನು ಈ ವಾರವೇ ನೋಡಬಹುದು. ಇದು ಸೂರ್ಯಾಸ್ತದ ನಂತರ ಆಕಾಶದಲ್ಲಿ ಕಾಣಿಸಲಿದೆ.

ಯಾವ ಯಾವ ಗ್ರಹ ಗೋಚರ?:

ಜುಲೈ 19ರಿಂದ ಆರಂಭಗೊಂದು ರಾತ್ರಿ ವೇಳೆ 5 ಗ್ರಹಗಳನ್ನು ಪೂರ್ವ ದಿಕ್ಕಿನಲ್ಲಿ ಕಾಣಬಹುದು.

ಬುಧ (ಮುಂಜಾನೆ ಸೂರ್ಯೋದಯಕ್ಕೂ ಮುನ್ನ 45 ನಿಮಿಷಕ್ಕೂ ಮೊದಲು ಈಶಾನ್ಯ ಭಾಗದಲ್ಲಿ ಕೆಂಪು ಚುಕ್ಕಿಯಂತೆ ಕಾಣಿಸಲಿದೆ)

ಶುಕ್ರ (ಮುಂಜಾನೆ ಸೂರ್ಯೋದಯಕ್ಕೂ ಮುನ್ನ ಪ್ರಜ್ವಲವಾಗಿ ಕಾಣಿಸಲಿದ್ದು, ಸುಲಭವಾಗಿ ಗುರುತಿಸಬಹುದು)

ಸಂಜೆ ಆಕಾಶದಲ್ಲಿ ಧೂಮಕೇತು ನೋಡುವುದನ್ನು ಮರೆಯದಿರಿ: ಮತ್ತೆ 6,800 ವರ್ಷಗಳವರೆಗೆ ಹಿಂತಿರುಗುವುದಿಲ್ಲ

ಮಂಗಳ (ನೈಋತ್ಯ ಭಾಗದಲ್ಲಿ)

ಗುರು (ಪಶ್ಚಿಮ ದಿಕ್ಕಿನಲ್ಲಿ)

ಶನಿ (ಪಶ್ಚಿಮ ದಿಕ್ಕಿನಲ್ಲಿ ಮಿಕ್ಕೆರಡಕ್ಕಿಂತ ಪ್ರಜ್ವಲಿಸಲಿದೆ)

ಜು.22 ಅಥವಾ 23 ರಂದು ನಕ್ಷತ್ರಗಳು ಮೂಡಿದ ಬಳಿಕ ನೈಋತ್ಯ ಭಾಗದಲ್ಲಿ ಧೂಮಕೇತು ಕಾಣಿಸಲಿದೆ. ಎದುರಿಗೆ ಅಸ್ಪಷ್ಟವಾದ ನಕ್ಷತ್ರ ಆಕಾರ ಹೊಂದಿದ್ದು, ಹಿಂದೆ ಬಾಲದ ಆಕೃತಿ ಕಾಣಲಿದೆ ಎಂದು ಎಂದು ಸ್ಪೇಸ್ ಡಾಟ್ ಕಾಂ ವರದಿ ಮಾಡಿದೆ.

English summary
A unique phenomenon will take place when five planets can be seen with the naked eyes from several parts of the earth, scientist said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X