ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಸಿಡಿಲಿನ ರುದ್ರ ನರ್ತನ, 11 ಬಲಿ

By Sachhidananda Acharya
|
Google Oneindia Kannada News

ಲಕ್ನೋ, ಜೂನ್ 8: ಪ್ರತ್ಯೇಕ ಘಟನೆಗಳಲ್ಲಿ ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 11 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಅಲ್ಲಲ್ಲಿ ಸಾಮಾನ್ಯದಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದ್ದು, ಸಿಡಿಲಿಗೆ 9 ಜನರು ಬಲಿಯಾಗಿದ್ದಾರೆ.

ಬಹ್ರೇಚ್ ನಲ್ಲಿ ಇಬ್ಬರು, ಚಂಡೌಲಿಯಲ್ಲಿ 3, ಜನ್ಪುರದಲ್ಲಿ 4 ಮತ್ತು ರಾಯಬರೇಲಿಯಲ್ಲಿ ಇಬ್ಬರು ಸೇರಿ ಒಟ್ಟು 11 ಜನರು ಉತ್ತರ ಪ್ರದೇಶದಲ್ಲಿ ಸಿಡಿಲಿಗೆ ಅಸುನೀಗಿದ್ದಾರೆ.

ಜನ್ಪುರದಲ್ಲಿ ಮರದಡಿಯಲ್ಲಿ ಮೂರು ಜನ ಮಳೆಯಿಂದ ಆಶ್ರಯ ಪಡೆದಿದ್ದರು. ಈ ವೇಳೆ ಮರಕ್ಕೆ ಸಿಡಿಲು ಬಡಿದು ಮರದಡಿಯಲ್ಲಿ ನಿಂತಿದ್ದವರು ಪ್ರಾಣ ಬಿಟ್ಟಿದ್ದಾರೆ. ಮೂರೂ ಜನರು ಪ್ರಾಣ ಬಿಟ್ಟಿದ್ದಾರೆ ಎಂದು ಇಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಾರೆ.

Five die in separate lightning strikes in UP

ಇನ್ನು ರಾಯ್ ಬರೇಲಿಯ ತಿಸಖನಪುರ ಮತ್ತು ಮಹಾರಾಜ್ ಗಂಜ್ ನಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

ರಾಜ್ಯದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಚಂಡೌಲಿಯಲ್ಲಿ ಮೂರು ಜನರು ಮತ್ತು ಬಹ್ರೇಚ್ ನಲ್ಲಿಯೂ ಮೂರು ಜನರು ಸಿಡಿಲಿಗೆ ಪ್ರಾಣ ಬಿಟ್ಟಿದ್ದಾರೆ.

ಸಿಡಿಲಿನ ಪರಿಣಣಾಮಗಳು ಹೀಗಿದ್ದರೆ, ಮಳೆಯೂ ರಾಜ್ಯದಲ್ಲಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ.

English summary
As many as five people have died in separate incidents of lightning strikes in Uttar Pradesh's Jaunpur and Rae Bareli districts, officials said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X