ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡವರಿಗಾಗಿ ಮಿಡಿದ ಮೋದಿ, 5 ಕೋಟಿ ಮನೆ ನಿರ್ಮಾಣ ಘೋಷಣೆ

By Mahesh
|
Google Oneindia Kannada News

ನಯಾ ರಾಯ್ ಪುರ್(ಚತ್ತೀಸ್ ಗಢ), ಫೆ. 21: ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗಾಗಿ ಸುಮಾರು 5 ಕೋಟಿಗೂ ಅಧಿಕ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. 2022ರ ವೇಳೆಗೆ ಬಡವರಿಗಾಗಿ ದೇಶದಲ್ಲಿ ಐದು ಕೋಟಿ ಮನೆಗಳನ್ನು ಕಾಣಬಹುದು ಎಂದು ಪ್ರಧಾನಿ ಮೋದಿ ಭಾನುವಾರ ಘೋಷಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಮಾತನಾಡಿದ ಅವರು, ಭಾರತವು 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ಸಂದರ್ಭ (2022) ಜನತೆ ಬಯಸುವಂಥ ಭಾರತ ನಿರ್ಮಾಣವಾಗಲಿದೆ ಎಂದರು. [ನಗರಗಳನ್ನು 'ಸ್ಮಾರ್ಟ್' ಮಾಡುವ 3 ಯೋಜನೆಗೆ ಚಾಲನೆ]

ಈ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡಿ ಐದು ಕೋಟಿ ಮನೆ ನಿರ್ಮಿಸಬೇಕು. ಬಡವರ ಕನಸು ನನಸಾಗುವ ಈ ಯೋಜನೆ ಕಾರ್ಯರೂಪಕ್ಕೆ ಬರಲೇಬೇಕು ಎಂದು ಹೇಳಿದರು.

Five crore houses to be built for the poor by 2022: PM

ಸುಮಾರು 2 ಕೋಟಿಗೂ ಅಧಿಕ ಮಂದಿ ನಗರಗಳಲ್ಲಿ ವಾಸಿಸುತ್ತಿದ್ದಾರೆ. 3 ಕೋಟಿ ಮಂದಿ ಗ್ರಾಮಗಳಲ್ಲಿದ್ದು ಸರಿಯಾದ ಸೂರು ಇಲ್ಲದೆ ಕಷ್ಟದಲ್ಲಿದ್ದಾರೆ. ಎಲ್ಲರಿಗೂ ಮನೆ ಒದಗಿಸುವ ಭರವಸೆಯನ್ನು ಈಡೇರಿಸಬೇಕಿದೆ ಎಂದು ಹೇಳಿದರು.

ಇದು ಕೇವಲ ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಯಲ್ಲ, ಬಡವರ ಕನಸು ನನಸು ಮಾಡುವ ಯೋಜನೆ ಎಂದು ಮೋದಿ ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ಯೋಜನೆ ಹಾಗೂ ಮುದ್ರ ಯೋಜನೆ ಮೂಲಕ ಹೊಸ ಉದ್ಯಮಿಗಳು ಹಾಗೂ ಹೆಚ್ಚು ಹೆಚ್ಚು ನೇಮಕಾತಿ ಮಾಡುವುದು ಸರ್ಕಾರದ ಉದ್ದೇಶ. ಹೊಸ ಉದ್ಯಮಿಗಳನ್ನು ಸೃಷ್ಟಿಸುವುದು ಕೂಡಾ ನಮ್ಮಗುರಿ ಎಂದು ಮೋದಿ ವಿವರಿಸಿದರು.(ಪಿಟಿಐ)

English summary
Prime Minister Narendra Modi on Sunday said five crore houses will be built for the poor by 2022 as he laid the foundation stone of ‘Pradhan Mantri Awas Yojana’ in Naya Raipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X