ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಮಹಿಳಾ ತಂಡ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ಘಟಕಕ್ಕೆ ಸೇರ್ಪಡೆ

|
Google Oneindia Kannada News

ಮೊದಲ ಬಾರಿಗೆ ಮಹಿಳಾ ಸಿಆರ್‌ಪಿಎಫ್‌ ಸಿಬ್ಬಂದಿಗಳನ್ನೊಳಗೊಂಡ ತಂಡ ಕೋಬ್ರಾ ಕಮಾಂಡೋ ಘಟಕವನ್ನು ಸೇರ್ಪಡೆಗೊಂಡಿದೆ.

34 ಸಿಆರ್‌ಪಿಎಫ್ ಮಹಿಳಾ ಸಿಬ್ಬಂದಿಗಳಿರುವ ತಂಡ ಇದಾಗಿದೆ.ಈ ತಂಡವನ್ನು ಶೀಘ್ರದಲ್ಲಿಯೇ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ.

ಭಾರತ,ಪಾಕ್ ಗಡಿಯಲ್ಲಿನ ಪ್ರಯತ್ನಕ್ಕಿಂತ ರೈತರ ವಿರುದ್ಧ ಕೇಂದ್ರದ ಷಡ್ಯಂತ್ರ ಹೆಚ್ಚಾಗಿದೆ:ಬಿಎಸ್‌ಪಿ ಭಾರತ,ಪಾಕ್ ಗಡಿಯಲ್ಲಿನ ಪ್ರಯತ್ನಕ್ಕಿಂತ ರೈತರ ವಿರುದ್ಧ ಕೇಂದ್ರದ ಷಡ್ಯಂತ್ರ ಹೆಚ್ಚಾಗಿದೆ:ಬಿಎಸ್‌ಪಿ

ಮೊದಲ ಮಹಿಳಾ ಬೆಟಾಲಿಯನ್ ನ 35ನೇ ರೈಸಿಂಗ್ ಡೇ ವರ್ಷಾಚರಣೆ ಸಂದರ್ಭದಲ್ಲಿ ದೇಶದ ಅತಿದೊಡ್ಡ ಮಹಿಳಾ ಅರೆಸೇನಾ ಪಡೆ ಕೂಡಾ ಪಾಲ್ಗೊಂಡಿತ್ತು.

First Women Team Inducted Into CRPFs CoBRA Commando Unit

1986ರಲ್ಲಿ ದೆಹಲಿಯಲ್ಲಿ ಸಿಆರ್ ಪಿಎಫ್ ನೆಲೆಯಲ್ಲಿ 88 ಮಹಿಳೆಯರನ್ನೊಳಗೊಂಡ ಮೊದಲ ಬೆಟಾಲಿಯಾನ್ ತಂಡಸ್ಥಾಪನೆಯಾಗಿತ್ತು ಇದೀಗ ಇಂತಹ ಆರು ಘಟಕಗಲಿದ್ದು, ತಲಾ 1 ಸಾವಿರ ಸಿಬ್ಬಂದಿಯನ್ನೊಳಗೊಂಡಿವೆ.

ಇಲ್ಲಿಯವರೆಗೂ ಈ ಘಟಕದ ವ್ಯವಹಾರವನ್ನು ಪುರುಷರೇ ನೋಡಿಕೊಳ್ಳುತ್ತಿದ್ದರು. ಕೋಬ್ರಾ ತಂಡದಲ್ಲಿನ ಬಹುತೇಕ ಕಮಾಂಡೋಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ.

ಕೆಲವು ತಂಡಗಳನ್ನು ತುರ್ತು ಪರಿಸ್ಥಿತಿಯ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತದೆ.ಸಿಆರ್ ಪಿಎಫ್ ತಂಡದಲ್ಲಿ 3.25 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಮಂದಿಯನ್ನು ಜಮ್ಮು ಮತ್ತು ಕಾಶ್ಮೀರ, ನಕ್ಸಲ್ ಭಾದಿತ ರಾಜ್ಯಗಳು ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸೇವೆಗೆ ನಿಯೋಜಿಸಲಾಗಿದೆ.

ಕಾದರ್ ಪುರ ಗ್ರಾಮದ ಸಿಆರ್ ಪಿಎಫ್ ಕ್ಯಾಂಪಿನಲ್ಲಿ ಸಿಆರ್ ಪಿಎಫ್ ನಿರ್ದೇಶಕ ಜನರಲ್ ಎ. ಪಿ. ಮಹೇಶ್ವರಿ ಸಮ್ಮುಖದಲ್ಲಿ ನಡೆದ ರೈಸಿಂಗ್ ಡೇ ಸಮಾರಂಭದಲ್ಲಿ ಆಯ್ದ ಮಹಿಳೆಯರ ಪ್ರದರ್ಶನ ಮೈನವಿರೇಳಿಸಿತು. ಲಿಂಗತ್ವ ಆಧಾರದಲ್ಲಿನ ನಂಬಿಕೆಗಳು, ವರ್ಗೀಕರಣಗಳನ್ನು ಸುಳ್ಳು ಮಾಡುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖವಾಗಿವೆ ಎಂದು ಅವರು ತಿಳಿಸಿದರು.

ಕೋಬ್ರಾ ತಂಡದಲ್ಲಿನ ಮಹಿಳೆಯರು ಮೂರು ತಿಂಗಳ ಕಾಲ ತರಬೇತಿ ಪಡೆಯಬೇಕಾಗುತ್ತದೆ. ಬಳಿಕ ನಕ್ಸಲ್ ಪೀಡಿತ ಜಿಲ್ಲೆಗಳಾದ ಛತ್ತೀಸ್ ಗಡ ಜಿಲ್ಲೆಯ ಸುಕ್ಮಾ, ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಕೋಬ್ರಾ ಘಟಕದೊಂದಿಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಸಿಆರ್ ಪಿಎಫ್ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

English summary
A maiden contingent of 34 CRPF women personnel was on Saturday inducted into its specialised jungle warfare commando force CoBRA, which will soon be deployed in the anti-Naxal operations grid of the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X