ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಜೋರಾಂ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ ಡಾ. ಛಕ್ಮಾ

|
Google Oneindia Kannada News

ಐಜ್ವಾಲ್, ಡಿಸೆಂಬರ್ 11: ಕಾಂಗ್ರೆಸ್ ಮುಕ್ತ ಭಾರತ ಕನಸು ಹೊತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಕ್ಕೆ ಮಿಜೋರಾಂನಲ್ಲೂ ಶುಭ ಸುದ್ದಿ ಸಿಕ್ಕಿದೆ. ಆಡಳಿತಾರೂಢ ಕಾಂಗ್ರೆಸ್ ಹಿಂದಿಕ್ಕಿ ಮಿಜೋ ನ್ಯಾಷನಲ್ ಫ್ರಂಟ್(ಎಂಎನ್ಎಫ್) ಆಡಳಿತಕ್ಕೆ ಬರಲು ಸಜ್ಜಾಗುತ್ತಿದೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE: 5 ರಾಜ್ಯಗಳಲ್ಲೂ ಬಿಜೆಪಿ ಧೂಳಿಪಟ!ಪಂಚರಾಜ್ಯ ಚುನಾವಣೆ ಫಲಿತಾಂಶ LIVE: 5 ರಾಜ್ಯಗಳಲ್ಲೂ ಬಿಜೆಪಿ ಧೂಳಿಪಟ!

3.40 ಸಮಯದ ಟ್ರೆಂಡ್ ನಂತೆ 40 ಸ್ಥಾನಗಳ ಪೈಕಿ ಎಂಎನ್ಎಫ್ 26 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ 5 ಹಾಗೂ ಬಿಜೆಪಿ 1 ಸ್ಥಾನ ಗಳಿಸಿದೆ.

ಪ್ರಾದೇಶಿಕ ಪಕ್ಷಗಳಿಗೆ, ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧ ಮಾಡಿಕೊಟ್ಟ ಫಲಿತಾಂಶ ಪ್ರಾದೇಶಿಕ ಪಕ್ಷಗಳಿಗೆ, ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧ ಮಾಡಿಕೊಟ್ಟ ಫಲಿತಾಂಶ

ಬಿಜೆಪಿ ಈ ಸಲ 39 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಆದರೆ ಕೇವಲ ಓರ್ವ ಅಭ್ಯರ್ಥಿ ಮಾತ್ರ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಗೆಲುವಿನ ಖಾತೆ ತೆರೆದು ಹೊಸ ಇತಿಹಾಸ ಸೃಷ್ಟಿಸಿದೆ.

ವಿಜೋರಾಂ : ಸಿಎಂಗೆ 2 ಕ್ಷೇತ್ರದಲ್ಲೂ ಸೋಲು, ಅಧಿಕಾರ 'ಕೈ' ತಪ್ಪಿತು ವಿಜೋರಾಂ : ಸಿಎಂಗೆ 2 ಕ್ಷೇತ್ರದಲ್ಲೂ ಸೋಲು, ಅಧಿಕಾರ 'ಕೈ' ತಪ್ಪಿತು

ಮಿಜೋರಾಂನಲ್ಲಿ ಇನ್ನೊಂದೆಡೆ ಹಾಲಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಾಲ್ ಥನ್ವಾಲಾ ಅವರು ಸೋಲು ಕಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಬಿ.ಡಿ ಛಕ್ಮಾಗೆ ಗೆಲುವಿನ ನಗೆ

ಬಿಜೆಪಿ ಅಭ್ಯರ್ಥಿ ಡಾ. ಬಿ.ಡಿ ಛಕ್ಮಾಗೆ ಗೆಲುವಿನ ನಗೆ

ನಾಥುರಾಮ್ ಲಾಲ್ ತನ್ಹಾವಾಲ್ ಅವರ ಸರ್ಕಾರದಲ್ಲಿ ರೇಷ್ಮೆ ಹಾಗೂ ಮೀನುಗಾರಿಕೆ ಸಚಿವರಾಗಿ ಡಾ. ಬುದ್ಧ ಧನ್ ಛಕ್ಮಾ ಅವರು ಕಾರ್ಯನಿರ್ವಹಿಸುತ್ತಿದ್ದರು. ವಿಧಾನಸಭೆ ಚುನಾವಣೆಗೂ ಕೆಲ ತಿಂಗಳ ಹಿಂದೆಯಷ್ಟೇ ಡಾಕ್ಟರ್ ಬುದ್ಧ ಧನ್ ಛಕ್ಮಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಮಿಜೋರಾಂನಲ್ಲಿ ಖಾತೆ ತೆರೆದ ಬಿಜೆಪಿ

ಮಿಜೋರಾಂನಲ್ಲಿ ಖಾತೆ ತೆರೆದ ಬಿಜೆಪಿ

ಬಿಜೆಪಿ ಈ ಸಲ 39 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಆದರೆ ಕೇವಲ ಓರ್ವ ಅಭ್ಯರ್ಥಿ ಮಾತ್ರ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಗೆಲುವಿನ ಖಾತೆ ತೆರೆದು ಹೊಸ ಇತಿಹಾಸ ಸೃಷ್ಟಿಸಿದೆ.

ಮಾಜಿ ಸಚಿವ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಡಾಕ್ಟರ್ ಬುದ್ಧ ಧನ್ ಛಕ್ಮಾ ಅವರು ವಿಜಯ ಪತಾಕೆ ಹಾರಿಸಿದ್ದಾರೆ. ಇದು ಮಿಜೋರಾಂನಲ್ಲಿ ಬಿಜೆಪಿ ಪಕ್ಷಕ್ಕೆ ಸಿಕ್ಕಿರುವ ಮೊದಲ ಗೆಲುವಾಗಿದೆ.

ಮಿಜೋರಾಂ ಬಿಜೆಪಿ ಗೆಲುವು ಫಲಿತಾಂಶ

ಮಿಜೋರಾಂ ಬಿಜೆಪಿ ಗೆಲುವು ಫಲಿತಾಂಶ

ತುಯಿಚಾಂಗ್(Tuichawng) ಕ್ಷೇತ್ರದಿಂದ ಸ್ಪರ್ಧಿಸಿದ್ದ ಬುದ್ಧ ಧನ್ ಛಕ್ಮಾ ಅವರು 11419 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಮಿಜೋ ನ್ಯಾಷನಲ್ ಫ್ರಂಟ್ ನ ರಸಿಕ್ ಮೋಹನ್ ಛಕ್ಮಾ ಅವರು 9825 ಮತಗಳನ್ನು ಗಳಿಸಿ, ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಲಿ ಕುಮಾರ್ ತೊಂಗ್ಚಾಂಗ್ಯಾ ಅವರು 4353 ಮತಗಳನ್ನು ಗಳಿಸಿ ಮೂರನೇ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಹೋರಾಡಿದ್ದ ಛಕ್ಮಾ

ವಿದ್ಯಾರ್ಥಿಗಳಿಗಾಗಿ ಹೋರಾಡಿದ್ದ ಛಕ್ಮಾ

ಮಿಜೋರಾಂ ರಾಜ್ಯದ ಕೋಟಾದಡಿಯಲ್ಲಿ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಳಿಸಿದ್ದ ನಾಲ್ವರು ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ಸಿಕ್ಕಿರಲಿಲ್ಲ. ಕೌನ್ಸಲಿಂಗ್ ಆದ ಮೇಲೆ ಸೀಟು ನೀಡಲು ನಿರಾಕರಿಸಲಾಗಿತ್ತು. ಇದನ್ನು ಖಂಡಿಸಿದ ಡಾ. ಬಿ. ಡಿ ಛಕ್ಮಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ ಬಿಜೆಪಿ ಸೇರಿ, ವಿಧಾನಸಭೆಗೆ ಸ್ಪರ್ಧಿಸಿದರು. ಛಕ್ಮಾ ಅವರಿಗೆ ವಿದ್ಯಾರ್ಥಿ ಸಂಘಟನೆಯಿಂದ ಪೂರ್ಣ ಬೆಂಬಲ ದೊರೆಯಿತು.

ತೇರವಾದ ಬೌದ್ಧ ಅನುಯಾಯಿಗಳು

ತೇರವಾದ ಬೌದ್ಧ ಅನುಯಾಯಿಗಳು

ಬಾಂಗ್ಲಾ ಮೂಲದ ಚಿತ್ತಗಾಂಗ್ ನಿಂದ ವಲಸೆ ಬಂದು ಭಾರತದ ಈಶಾನ್ಯರಾಜ್ಯಗಳಲ್ಲಿ ನೆಲೆಸಿರುವ ಬೌದ್ಧ ಸಮುದಾಯದ ಛಕ್ಮಾ ಪಂಗಡದ ಮೇಲಿನ ದೌರ್ಜನ್ಯವನ್ನು ಖಂಡಿಸಿ ಡಾ. ಛಕ್ಮಾ ಅವರು ಹೋರಾಡುತ್ತಾ ಬಂದಿದ್ದಾರೆ. ಅರುಣಾಚಲಪ್ರದೇಶದಲ್ಲಿ ಬೌದ್ಧರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ದನಿ ಎತ್ತಿದ್ದರು. ಛಕ್ಮಾ ಸಮುದಾಯದವರು ತೇರವಾದ ಬೌದ್ಧ ಅನುಯಾಯಿಗಳಾಗಿದ್ದು, ಬರ್ಮಾದ ರಾಜರಿಂದ ಸಂಸ್ಕೃತದ ಶಕ್ತಿಮಾನ್/ಶಕ್ತಿ ಪದ ಛಕ್ಮಾ ಆಗಿದೆ, ಮ್ಯಾನ್ಮಾರ್ ನಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದರು. ಛಕ್ಮಾಗಳ ಬಗ್ಗೆ ಮಾಹಿತಿ ಇಲ್ಲಿದೆ

English summary
First Victory to BJP in Mizoram: Former Mizoram minister Buddha Dhan Chakma win in Tuichawng constituency against MNF candidate Rasik Mohan Chakma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X