ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

47ವರ್ಷಗಳ ನಂತರ ಪಾಕಿಸ್ತಾನದೊಳಗೆ ನುಗ್ಗಿದ ಇಂಡಿಯನ್ ಏರ್ಫೋರ್ಸ್

|
Google Oneindia Kannada News

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ, ಭಾರತೀಯ ವಾಯುಸೇನೆ ಮಂಗಳವಾರ (ಫೆ 26) ನಸುಕಿನ 3.30ಕ್ಕೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಜೈಶ್ ಉಗ್ರ ಸಂಘಟನೆಯ ಹಲವು ನೆಲೆಗಳನ್ನು ಧ್ವಂಸ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತೀಯ ಸೇನೆ ದಾಳಿ ನಡೆದ ಬಗ್ಗೆ ಅಧಿಕೃತವಾಗಿ ಇನ್ನೂ ಹೇಳಿಕೆಯನ್ನು ನೀಡಬೇಕಷ್ಟೇ.. ಆದರೆ, ಪಾಕಿಸ್ತಾನ, ಭಾರತದ ವಾಯುಪಡೆ ದಾಳಿ ನಡೆಸಿದ್ದು ಹೌದು ಎಂದು ಒಪ್ಪಿಕೊಂಡಿದೆ.

ಪುಲ್ವಾಮಾ ಪ್ರತೀಕಾರ LIVE: ಉಗ್ರನೆಲೆ ಮೇಲೆ 1000 ಕೆಜಿ ಬಾಂಬ್ ಎಸೆದ ಭಾರತಪುಲ್ವಾಮಾ ಪ್ರತೀಕಾರ LIVE: ಉಗ್ರನೆಲೆ ಮೇಲೆ 1000 ಕೆಜಿ ಬಾಂಬ್ ಎಸೆದ ಭಾರತ

ಬಾಲ್ಕೋಟ್, ಮುಜಫರಾಬಾದ್ ಮತ್ತು ಚಕೋಟಿಯ ಉಗ್ರರ ತರಬೇತಿ ಶಿಬಿರ ಮತ್ತು ಲಾಂಚ್ ಪ್ಯಾಡ್ ಮೇಲೆ ದಾಳಿ ನಡೆದಿದ್ದು, ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದರ ಬಗ್ಗೆ ಸದ್ಯ ಮಾಹಿತಿ ಲಭ್ಯವಿಲ್ಲ.

First time Indian Air Force crossed into Pakistan since 1971

1971ರ ನಂತರ ಇದೇ ಮೊದಲ ಬಾರಿಗೆ ಭಾರತೀಯ ವಾಯುಸೇನೆ, ಪಾಕಿಸ್ತಾನದ ಗಡಿದಾಟಿ ದಾಳಿ ನಡೆಸಿರುವುದು ಗಮನಿಸಬೇಕಾದ ವಿಚಾರ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ದಾಳಿ ನಡೆಸಿದ ಘಟನೆಗಳು ಹಿಂದೆ ಕೂಡಾ ನಡೆದಿತ್ತು.

ಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿಮಿರಾಜ್ 2000 ಯುದ್ಧ ವಿಮಾನದ ಬಗ್ಗೆ ಒಂದಿಷ್ಟು ಮಾಹಿತಿ

ಆದರೆ, ಲೈನ್ ಆಫ್ ಕಂಟ್ರೋಲ್ (LOC) ದಾಟಿ, ಪಾಕಿಸ್ತಾನಕ್ಕೆ ಭಾರತೀಯ ಸೇನೆ ನುಗ್ಗಿದ್ದು 47ವರ್ಷಗಳಲ್ಲಿ ಇದೇ ಮೊದಲು. ಭಾರತೀಯ ಯುದ್ದ ವಿಮಾನಗಳು, ನಮ್ಮ ಗಡಿಯೊಳಗೆ ಬಂದಿರುವುದನ್ನು ಪಾಕಿಸ್ತಾನದ ಆರ್ಮಿ ಮುಖ್ಯಸ್ಥ ಆಸಿಫ್ ಗಫೂರ್ ಕೂಡಾ ಒಪ್ಪಿಕೊಂಡಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್

ಪಂಜಾಬ್ ನಲ್ಲಿರುವ ಆಧಂಪುರ ಏರ್ಬೇಸ್ ಬಳಸಿಕೊಂಡು, ಪಾಕಿಸ್ತಾನದ ರಾಡಾರ್ ಕಣ್ಣುತಪ್ಪಿಸಿ, ಭಾರತೀಯ ವಾಯುಪಡೆ ದಾಳಿ ನಡೆಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಎರಡನೇ ಯುದ್ದದ ನಂತರ, ವಾಯುಸೇನೆ, ಪಾಕಿಸ್ತಾನದೊಳಗೆ ನುಗ್ಗಿದ್ದು ಇದೇ ಮೊದಲು.

English summary
This is believed to be the first time Indian Air Force has crossed into Pakistan since 1971 after second war between India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X